Another sex scandal in state politics: Complaint against lawyer Jagdish for revealing explosive information
Bengaluru: ಮೂಡಾ ಹಗರಣ, ವಾಲ್ಮೀಕಿ ನಿಗಮ ಹಗರಣ, ಅಕ್ರಮ ಗಣಿ ಗುತ್ತಿಗೆ ಪ್ರಕರಣದ ನಡುವೆ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಲೈಂಗಿಕ ಹಗರಣ ದೊಡ್ಡ ಸದ್ದು ಮಾಡುವ ಸೂಚನೆಗಳು ಕಂಡುಬರುತ್ತಿದೆ . ಹಾಗಾಗಿ ಮಾಜಿ ಮುಖ್ಯಮಂತ್ರಿಯೊಬ್ಬರ ಆಪ್ತ ಸಹಾಯಕರು, ಈಗಾಗಲೇ ಲಾಯರ್ ಜಗದೀಶ್ ಕುಮಾರ್ (Lawyer Jagdish Kumar) ವಿರುದ್ಧ ದೂರು ದಾಖಲಿಸಿರುವ ಬೆಳವಣಿಗೆ ನಡೆದಿದೆ.
ಈ ಹಿಂದೆ ಬಿಜೆಪಿ (BJP) ನಾಯಕ ರಮೇಶ್ ಜಾರಕಿಹೊಳಿ (Ramesh Jarakiholi) ವಿರುದ್ಧದ ಲೈಂಗಿಕ ಹಗರಣ ಸಿಡಿ ವಿಷಯದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಜನಪ್ರಿಯತೆ ಗಳಿಸಿದ್ದ ವಕೀಲ ಜಗದೀಶ್ ಕುಮಾರ್ ಅವರು ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಕರಣದ ಕುರಿತು ಮಾಹಿತಿಯನ್ನು ಹೊರಗೆಡವಿದ್ದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರು ತಮ್ಮ ಅಧಿಕಾರವಧಿಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ರಾಜ್ಯದ ಮತ್ತು ಪರ ರಾಜ್ಯದ ಹಲವು ನಟಿಯರಿಗೆ ಐಷಾರಾಮಿ ಕಾರು, ಬಂಗಲೆ ನೀಡಿ ಲೈಂಗಿಕ ಸಹಕಾರ ಪಡೆದಿದ್ದಾರೆ.
ಅಲ್ಲದೆ, ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಇಬ್ಬರು ವೈದ್ಯರು ಮುಖ್ಯಮಂತ್ರಿ ನಟಿಯರೊಂದಿಗೆ ಇರುವ ಖಾಸಗಿ ವಿಡಿಯೋಗಳನ್ನು ಬಳಸಿಕೊಂಡು ಅವರನ್ನು ಬ್ಲಾಕ್ಮೇಲ್ ಮಾಡಿ ತಮಗೆ ಬೇಕಾದ ಕಡತಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ಆ ನಟಿಯರಿಗೆ ದುಬಾರಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಷಯದಲ್ಲಿ ಸರ್ಕಾರದ ಆಡಳಿತ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಆದರೆ, ಈ ಬಗ್ಗೆ ನಟಿಯರಿಂದ ದೂರು ಕೊಡಿಸುವುದಾಗಲೀ, ಅಥವಾ ಸಿಡಿ ಬಿಡುಗಡೆ ಮಾಡುವುದಾಗಲೀ ಮಾಡುವುದಿಲ್ಲ. ಬದಲಾಗಿ ಪ್ರಕರಣದ ಕುರಿತು ಸುಪ್ರೀಂಕೋರ್ಟ್ಗೆ (Supreme court) ಸಾಕ್ಷ್ಯಾಧಾರ ಸಹಿತ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿದ್ದರು.
ಸುಪ್ರೀಂಕೋರ್ಟ್ ನಿಗಾದಲ್ಲೇ ಪ್ರಕರಣದ ತನಿಖೆ ನಡೆದು ಸತ್ಯಾಂಶ ಹೊರಬರಬೇಕು. ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಯೊಬ್ಬರಿಗೆ ಹುಡುಗಿಯರನ್ನು ಸರಬರಾಜು ಮಾಡಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಗಂಭೀರವಾದ ವಿಷಯ. ಹಾಗಾಗಿ ನೇರವಾಗಿ ಕೋರ್ಟಿನಲ್ಲೇ ಮೊಕದ್ದಮೆ ಹೂಡಲಾಗುವುದು. ಆ ಹಿನ್ನೆಲೆಯಲ್ಲಿ ಈಗಾಗಲೇ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಅವರನ್ನು ವಕೀಲರು ಭೇಟಿ ಮಾಡಿದ್ದಾರೆ. ಅವರ ಸಲಹೆ ಮೇರೆಗೆ ಮಾಜಿ ಮುಖ್ಯಮಂತ್ರಿ ವಿರುದ್ಧ ದೂರು ದಾಖಲಿಸಲು ಸ್ಪೀಕರ್ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗುವುದು ಎಂದೂ ಜಗದೀಶ್ ಹೇಳಿಕೊಂಡಿದ್ದಾರೆ.
ಇನ್ನು ಈ ಕುರಿತಾಗಿ ಮತ್ತೊಂದು ಸಿಡಿ ಬಾಂಬ್ ಸಿಡಿಯುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಬಿರುಸಿನ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಲಾಯರ್ ಜಗದೀಶ್ ಕುಮಾರ್ ವಿರುದ್ಧ ಯಶವಂತಪುರ ಸೆನ್ (Yashavantapura CEN Police Station) ಪೊಲೀಸ್ ಠಾಣೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಆಪ್ತ ಸಹಾಯಕರು ದೂರು ದಾಖಲಿಸಿರುವ ಸುದ್ದಿ ಬಹಿರಂಗವಾಗಿದೆ.
Sex Scandal-Big Breaking News Today Kannada
Bengaluru: Amidst the Muda scam, Valmiki Corporation scam, illegal mining lease case, there are indications that another sex scandal will make a big noise in the state politics. So there has been a development that a close aide of a former Chief Minister has already filed a complaint against Lawyer Jagdish Kumar.
Earlier, lawyer Jagdish Kumar, who gained popularity through social media in the case of the sex scandal CD against BJP leader Ramesh Jarakiholi, once again released information about the case through social media. A former Chief Minister of Karnataka abused his power during his tenure and got sexual cooperation from many state and pro-state actresses by giving them luxury cars and bungalows.
Also, two doctors who were ministers in his cabinet blackmailed the chief minister using private videos with actresses and signed the files they wanted. Those actresses were gifted with expensive cars. It is apparent that the administration and power of the government have been misused in this matter. However, the actresses will not complain about this, nor will they release the CD. Instead, he said that an application with evidence will be submitted to the Supreme Court regarding the case.
The Supreme Court should immediately investigate the case and find out the truth. It is a serious matter that a chief minister who is at the helm of the state has misused his power by supplying girls. So a lawsuit will be filed directly in the court itself. In this context, the lawyer has already met the Supreme Court Registrar. Jagdish also claimed that an application will be filed seeking the Speaker’s permission to file a complaint against the former chief minister on his advice.
The news that a close aide of former CM Basavaraj Bommai has filed a complaint against lawyer Jagdish Kumar in Yashavantapura CEN Police Station has come to light after a heated debate is going on in the media and social networks about the explosion of another CD bomb.