Bengaluru : ಚಲಿಸುತ್ತಿದ್ದ ರಾಪಿಡೋ ಬೈಕ್ (Rapido bike) ನಿಂದ ಮಹಿಳಾ ಪ್ರಯಾಣಿಕರೊಬ್ಬರು ಏಕಾಏಕಿ ಬೈಕ್ ನಿಂದ ಜಿಗಿದಿದ್ದಾರೆ. ಈ ಒಂದು ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ವೀಡಿಯೋ (Sexual harassment by Rapido driver) ತುಣುಕು ಸಾಮಾಜಿಕ ಜಾಲತಾಣದಲ್ಲಿ (Social Media) ಭಾರಿ ವೈರಲ್ (Viral) ಆಗಿದೆ. ಅಷ್ಟಕ್ಕೂ ಅಲ್ಲಿ ನಡೆದ ಘಟನೆ ಏನು? ಇಲ್ಲಿದೆ ಮಾಹಿತಿ.

ಮಹಿಳಾ ಪ್ರಯಾಣಿಕರೊಬ್ಬರು 11:10 ರ ಸಮಯ ರಾತ್ರಿ ವೇಳೆ ರಾಪಿಡೋ ಬೈಕ್ ಬುಕ್ ಮಾಡಿ ಮನೆಗೆ ಹೋಗುವ ವೇಳೆ ಈ ಘಟನೆ ಸಂಭವಿಸಿದೆ.
ಚಾಲಕ ತನ್ನ ಫೋನ್ ಅನ್ನು ಕಸಿದುಕೊಂಡ ನಂತರ ಬೆಂಗಳೂರಿನ ಮಹಿಳೆ ಚಲಿಸುತ್ತಿದ್ದ ರಾಪಿಡೋ ಬೈಕ್ನಿಂದ ಜಿಗಿದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
30 ವರ್ಷದ ಬೆಂಗಳೂರು ಮಹಿಳೆಯೊಬ್ಬರು ಚಲಿಸುತ್ತಿದ್ದ ರಾಪಿಡೊ ಮೋಟಾರ್ಸೈಕಲ್ನಿಂದ ಜಿಗಿದಿದ್ದು,
ಚಾಲಕ ಅವಳನ್ನು ತಡೆದು ಫೋನ್ ಕಸಿದುಕೊಂಡಿದ್ದಾನೆ ಎನ್ನಲಾಗಿದೆ. ಏಪ್ರಿಲ್ 21 ರ ರಾತ್ರಿ ಮಹಿಳೆ ಇಂದಿರಾನಗರಕ್ಕೆ ರಾಪಿಡೋ
ರೈಡ್ ಬುಕ್ ಮಾಡಿದಾಗ ರಾತ್ರಿ ಸಮಯ 11:10 ಕ್ಕೆ ಚಾಲಕ ಆಕೆಯನ್ನು ಕರೆದುಕೊಂಡು ಹೋದಾಗ ಘಟನೆ ನಡೆದಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : https://vijayatimes.com/amit-shah-vs-siddaramaiah/
ಬೈಕರ್ ಓಟಿಪಿ (OTP) ಪರಿಶೀಲಿಸುವ ನೆಪದಲ್ಲಿ ಮಹಿಳೆ ಬಳಿ ಇದ್ದ ಆಕೆಯ ಫೋನ್ ತೆಗೆದುಕೊಂಡಿದ್ದಾನೆ.
ಬಳಿಕ ತಾನು ಹೇಳಿದ ಮಾರ್ಗ ಬದಲಿಗೆ ವಿಮಾನ ನಿಲ್ದಾಣದ ಮಾರ್ಗದತ್ತ ಓಡಿಸಲು ಪ್ರಾರಂಭಿಸಿದ್ದಾನೆ.
ಇದನ್ನು ಅರಿತ ಮಹಿಳೆ ಕೂಡಲೇ ಚಲಿಸುವ ಬೈಕ್ ನಿಂದ ಇಳಿಯಲು ಪ್ರಯತ್ನಿಸಿದ್ದಾರೆ.
ಮಹಿಳೆ ಅಲಾರಾಂ ಎತ್ತಿ ಚಾಲಕನಿಗೆ ನಿರ್ದೇಶನಗಳನ್ನು ಅನುಸರಿಸಲು ಪದೇ ಪದೇ ಹೇಳಿದರೂ, ಆತ ಮೌನವಾಗಿರುವ (Sexual harassment by Rapido driver) ಮೂಲಕ ಪ್ರತಿಕ್ರಿಯೆ ನೀಡಿಲ್ಲ ಎಂದು ಪೊಲೀಸರು ಹೇಳಿದರು.
“ಇದನ್ನೆಲ್ಲಾ ಗಮನಿಸಿದ ನಾನು ಕೊನೆಗೆ ನನ್ನನ್ನು ರಕ್ಷಿಸಿಕೊಳ್ಳಲು ಚಲಿಸುತ್ತಿದ್ದ ರಾಪಿಡೋ ಬೈಕ್ ನಿಂದ ಜಿಗಿಯಬೇಕಾಯಿತು” ಎಂದು ಮಹಿಳೆ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ :https://vijayatimes.com/protection-of-chetan-from-deportation/
ಈ ಘಟನೆಯನ್ನು ಅರಿತ ಬೆಂಗಳೂರು ಪೊಲೀಸರು ಕೂಡಲೇ ಆರೋಪಿಯನ್ನು ವಶಕ್ಕೆ ಪಡಿಸಿಕೊಂಡಿದ್ದು, ಆರೋಪಿ ದೀಪಕ್ ಎಂದು ಗುರುತಿಸಲಾಗಿದೆ.
ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ರಾಪಿಡೋ ಬೈಕ್ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದೆ.
ಈ ಬಗ್ಗೆ ಸಾರಿಗೆ ಇಲಾಖೆಗೆ (Department of Transport) ಸಾಕಷ್ಟು ಬಾರಿ ದೂರು ನೀಡಲಾಗಿದ್ದರೂ ಇನ್ನೂ ಯಾವುದೇ ಕ್ರಮ ಕೈಗೊಳ್ಳದೇ ಇರೋದು ಅಚ್ಚರಿಯ ಸಂಗತಿಯಾಗಿದೆ.