Visit Channel

ರಾಮ-ಆಂಜನೇಯನ ಸನ್ನಿಧಿಯಲ್ಲಿ ಶಬರಿ!

WhatsApp Image 2021-07-13 at 5.02.27 PM

ಕೆ.ಕೆ.ಪ್ರೊಡಕ್ಷನ್ಸ್ ಅಂಡ್ ಅಸೋಸಿಯೇಷನ್ಸ್ ಹಾಗೂ ಎಟಿಎಂ ಸ್ಟುಡಿಯೋಸ್ ಬ್ಯಾನರ್‌ ಮೂಲಕ ಕಿರಣ್ ಕುಮಾರ್ ಸಿ, ಅರವಿಂದ್ ಬಿ. ಅವರ ನಿರ್ಮಾಣ ಮಾಡುತ್ತಿರುವ ‘ಶಬರಿ ಸರ್ಚಿಂಗ್ ಫಾರ್ ರಾವಣ’ ಚಿತ್ರದ ಮುಹೂರ್ತ ಕಾರ್ಯಕ್ರಮ ಇತ್ತೀಚೆಗಷ್ಟೇ ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ನಾಯಕಿ ರಚಿತಾರಾಮ್ ಹಾಗೂ ರಘು ಮುಖರ್ಜಿ ದೇವರನ್ನು ಪ್ರಾರ್ಥಿಸುವ ದೃಶ್ಯದೊಂದಿಗೆ ಚಿತ್ರದ‌‌ ಚಿತ್ರೀಕರಣಕ್ಕೆ ಚಾಲನೆ ನೀಡಲಾಯಿತು.

ಮಹಿಳಾಪ್ರದಾನ ರಿವೇಂಜ್, ಥ್ರಿಲ್ಲರ್ ಕಥಾಹಂದರ ಇರುವ ಈ ಚಿತ್ರದಲ್ಲಿ ಡಿಂಪಲ್‌ಕ್ವೀನ್ ರಚಿತಾರಾಮ್ ಶಬರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅಭಿನಯದ 36ನೇ ಚಿತ್ರ. ಕಳೆದ ರಾಮನವಮಿ ಹಬ್ಬದ ದಿನವೇ ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರದ ಶೀರ್ಷಿಕೆ,‌ಲುಕ್ ಬಿಡುಗಡೆಯಾಗಿತ್ತು. ರಚಿತಾರಾಮ್ ಉಗ್ರಾವತಾರ ತಾಳಿರುವ ಪೋಸ್ಟರ್‌ ಸಾಕಷ್ಟು ಕುತೂಹಲಗಳನ್ನು ಹುಟ್ಟುಹಾಕಿತ್ತು. ಯುವನಿರ್ದೇಶಕ ನವೀನ್‌ಶೆಟ್ಟಿ ಅವರು ಆಕ್ಷನ್‌ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಕೇಶವ್-ಚೇತನ್ ಚಿತ್ರಕಥೆ ಹೆಣೆದಿದಾರೆ. ಸಂಕಲನಕಾರನಾಗಿದ್ದ ನವೀನ್‌ ಶೆಟ್ಟಿ ಶಬರಿ ಚಿತ್ರದ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ಮಹಿಳಾಪ್ರಧಾನ ಕಥಾಹಂದರ ಒಳಗೊಂಡಿರುವ ಈ ಚಿತ್ರದಲ್ಲಿ ರಾವಣನ ಪಾತ್ರ ಇನ್ನೂ ಕುತೂಹಲವಾಗಿದೆ. ಸದ್ಯದಲ್ಲೇ ಈ ಚಿತ್ರದ ಚಿತ್ರೀಕರಣ ಪ್ರಾರಂಭಿಸುವುದಾಗಿ ನಿರ್ದೇಶಕ ನವೀನ್ ಶೆಟ್ಟಿ ತಿಳಿಸಿದ್ದಾರೆ.

‘ಶಬರಿ ಸರ್ಚಿಂಗ್ ಫಾರ್ ರಾವಣ’ ಚಿತ್ರಕ್ಕೆ ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ ಇದ್ದು, ಸುರೇಶ್ ಆರ್ಮುಗಂ ಅವರ ಸಂಕಲನ, ವಿಶಾಲ್‌ಕುಮಾರ್‌ಗೌಡ ಅವರ ಕ್ಯಾಮೆರಾವರ್ಕ್ ಇರುತ್ತದೆ. ಅಚ್ಯುತ್‌ಕುಮಾರ್, ಪ್ರದೀಪ್ ನಾರಾಯಣ್, ಅರ್ಚನಾ ಕೊಟ್ಟಿಗೆ ಈ ಚಿತ್ರದ ಉಳಿದ ಪಾತ್ರವರ್ಗದಲ್ಲಿದ್ದಾರೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.