New Delhi : ಕೊಲ್ಕೊತ್ತಾ ನೈಟ್ ರೈಡರ್ಸ್ಗೆ (Kolkata Knight Riders) ಈ ಬಾರಿ ಆಘಾತದ ಮೇಲೆ ಆಘಾತವಾಗುತ್ತಿದೆ. ಮೊದಲಿಗೆ ಶ್ರೇಯಸ್ ಅಯ್ಯರ್ ಅವರಿಗೆ ಬೆನ್ನು ನೋವು ಇದ್ದ ಕಾರಣ 16ನೇ ಆವೃತ್ತಿಯ ಐಪಿಎಲ್ (IPL) ಟೂರ್ನಿಯಿಂದ ಹೊರ ಹೋಗಿದ್ದರು. ಈಗ ಬಾಂಗ್ಲಾದೇಶದ ಆಲ್ ರೌಂಡರ್ (ShakeelAl out of the tournament) ಶಕೀಬ್ ಅಲ್ ಹಸನ್ ಔಟ್ ಆಗಿದ್ದಾರೆ.

ಶ್ರೇಯಸ್ ಅಯ್ಯರ್ (Shreyas Iyer) ಹಾಗೂ ಶಕೀಬ್ ಅಲ್ ಹಸನ್ ಕಳೆದುಕೊಂಡಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಬಲಹೀನವಾಗಿದೆ,
ಅಂತರಾಷ್ಟ್ರೀಯ ಪಂದ್ಯಗಳ ನಿಮಿತ್ತ ಶಕಿಬ್ ಅಲ್ ಹಸನ್ ಮತ್ತು ಲಿಟಾನ್ ದಾಸ್ ಅವರ ಸೇವೆಯನ್ನು ಪಡೆಯಬೇಕೆಂದು ಕೆಕೆಆರ್ (ShakeelAl out of the tournament) ಬಯಸಿತ್ತು.
ಆದರೆ ಈಗ ಈ ಇಬ್ಬರು ಆಟಗಾರರು ಅಲಭ್ಯರಾಗಿದ್ದಾರೆ. ಇದು ಕೆಕೆಆರ್ ತಂಡಕ್ಕೆ ಹಿನ್ನಡೆಯನ್ನು ತಂದೊಡ್ಡಿದೆ.
ಮೇ 9 ರಿಂದ 14 ರವರೆಗೆ ಬಾಂಗ್ಲಾದೇಶವು ಐರ್ಲೆಂಡ್ (Ireland) ವಿರುದ್ದ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಇದರಿಂದಾಗಿ ಕೆಕೆಆರ್ ಸ್ಟಾರ್ ಆಟಗಾರರಿಗೆ ಓಔಅ ನೀಡಲು ಬಾಂಗ್ಲಾ ಕ್ರಿಕೆಟ್ ಮಂಡಳಿ ನಿರಾಕರಿಸಿದೆ.
ಇದನ್ನೂ ಓದಿ : https://vijayatimes.com/injustice-in-assembly-elections/
ಹಾಗಾಗಿ ಆಲ್ ರೌಂಡರ್ ಶಕಿಬ್ ಅಲ್ ಹಸನ್ ಐಪಿಎಲ್ ಟೂರ್ನಿಯದ ಹೊರನಡೆಯುವ ನಿರ್ಧಾರ ಕೈಗೊಂಡಿದ್ದಾರೆ. ಕೆಕೆಆರ್ (KKR) ನೊಂದಿಗೆ ಮೊದಲಿನಿಂದಲು ಉತ್ತಮ ಬಾಂಧವ್ಯ ಹೊಂದಿರುವ ಶಕೀಬ್,
2012 ಹಾಗೂ 2014ರ ಆವೃತ್ತಿಗಳಲ್ಲಿ ಚಾಂಪಿಯನ್ ಆಗಿದ್ದ ತಂಡದಲ್ಲಿ ಆಡಿದ್ದರು.
https://youtube.com/shorts/vOn33QAPOao?feature=share
ಕೆಕೆಆರ್ ಫ್ರಾಂಚೈಸಿ 1.5 ಕೋಟಿ ರೂಪಾಯಿಗಳಿಗೆ ಮಿನಿ ಹರಾಜಿನಲ್ಲಿ ಶಕೀಬ್ ಅಲ್ ಹಸನ್ ಅವರನ್ನು ಖರೀದಿಸಿತ್ತು.
ಇದನ್ನೂ ಓದಿ : https://vijayatimes.com/bilkis-bano-gang-rape/
ಶಕೀಬ್ ಅಲ್ ಹಸನ್ (Shakib Al Hasan) ಅವರು ಏಪ್ರಿಲ್ 9 ರ ನಂತರ ಅವರ ಸೇವೆ ಕೆಕೆಆರ್ ತಂಡಕ್ಕೆ ಸಿಗಬಹುದು ಎಂದು ಅಂದಾಜಿಸಲಾಗಿತ್ತು.
ಆದರೆ ವೈಯಕ್ತಿಕ ಕಾರಣಗಳಿಂದ ಶಕೀಬ್ ಟೂರ್ನಿಯಿಂದ ಸಂಪೂರ್ಣವಾಗಿ ಹೊರ ನಡೆದಿದ್ದಾರೆ ಆದರೆ ಇವರ ಜಾಗಕ್ಕೆ ಸೂಕ್ತ ಆಟಗಾರರನ್ನು ಸೇರಿಸಿಕೊಳ್ಳಬೇಕೆಂದು ಕೆ ಕೆಆರ್ ಎದುರು ನೋಡುತ್ತಿದೆ.