• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಕರ್ನಾಟಕದ ಶಕ್ತಿ ಯೋಜನೆ : ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ಸ್​​ಗೆ ದಾಖಲು

Shwetha Mohan by Shwetha Mohan
in ಪ್ರಮುಖ ಸುದ್ದಿ, ರಾಜಕೀಯ, ರಾಜ್ಯ, ವಿಜಯ ಟೈಮ್ಸ್‌
ಕರ್ನಾಟಕದ ಶಕ್ತಿ ಯೋಜನೆ : ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ಸ್​​ಗೆ ದಾಖಲು
0
SHARES
13
VIEWS
Share on FacebookShare on Twitter
  • 504 ಕೋಟಿ ಮಹಿಳಾ ಪ್ರಯಾಣ – ಶಕ್ತಿ ಯೋಜನೆ ವಿಶ್ವ ದಾಖಲೆ
  • ಸಂತಸ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, ಸಚಿವ ರಾಮಲಿಂಗಾರೆಡ್ಡಿ (Shakti Yojana enters Golden Book of World Records)
  • ಉದ್ಯೋಗ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಳ

Bengaluru: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆ(Shakti Scheme) ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ(Internationally) ಗೌರವ ಪಡೆದಿದೆ.

ಮಹಿಳೆಯರ ಸ್ವಾವಲಂಬನೆ ಉತ್ತೇಜಿಸುವ ನಿಟ್ಟಿನಲ್ಲಿ ಉಚಿತ ಬಸ್ ಪ್ರಯಾಣ(Free bus) ನೀಡುವ ಈ ಯೋಜನೆ ಇದೀಗ Golden Book of World Records ನಲ್ಲಿ ದಾಖಲಾಗಿದ್ದು,

ಅದು ರಾಜ್ಯ ಸರ್ಕಾರ(State Govt) ಹಾಗೂ ಸಾರಿಗೆ ಇಲಾಖೆಗೆ(Department of Transport) ಹೆಮ್ಮೆಯ ಕ್ಷಣವನ್ನು ತಂದುಕೊಟ್ಟಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ತಮ್ಮ ಎಕ್ಸ್ ಖಾತೆಯಲ್ಲಿ(X account) ಸಂತಸ ಹಂಚಿಕೊಂಡಿದ್ದು, “ಇದು ಇಡೀ ನಾಡು ಹೆಮ್ಮೆಪಡುವ ಸಾಧನೆ.

Shakti Yojana enters Golden Book of World Records
ಶಕ್ತಿ ಯೋಜನೆಯು ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿರುವುದು ಇತಿಹಾಸ ನಿರ್ಮಿಸಿರುವುದಕ್ಕಿಂತ ಕಡಿಮೆಯಲ್ಲ” ಎಂದು ಹೇಳಿದ್ದಾರೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ(Ramalingareddy) ಕೂಡ ಸಂತೋಷ ವ್ಯಕ್ತಪಡಿಸಿದ್ದು, “500 ಕೋಟಿಗಿಂತ ಹೆಚ್ಚು ಮಹಿಳೆಯರು ಉಚಿತ ಬಸ್ ಸೇವೆ ಉಪಯೋಗಿಸಿರುವುದು ವಿಶ್ವ ದಾಖಲೆ ಪುಸ್ತಕದಲ್ಲಿ(world record book) ಸ್ಥಾನ ಪಡೆದಿದೆ. ಇದು ಕರ್ನಾಟಕಕ್ಕೆ ಹೆಮ್ಮೆ ತಂದುಕೊಟ್ಟಿದೆ” ಎಂದು ತಿಳಿಸಿದ್ದಾರೆ.

2023ರ ಜೂನ್ 11ರಂದು ಯೋಜನೆ ಜಾರಿಯಾಗಿದ್ದು, 2025ರ ಜುಲೈ 25ರವರೆಗೆ 504 ಕೋಟಿ 90 ಲಕ್ಷಕ್ಕಿಂತ ಹೆಚ್ಚು ಮಹಿಳಾ ಪ್ರಯಾಣಗಳು ನಡೆದಿವೆ.

ಕೆಲಸ, ಶಿಕ್ಷಣ, ವೈದ್ಯಕೀಯ ಹಾಗೂ ಬೇರೆ ಬೇರೆ ಅಗತ್ಯಗಳಿಗೆ ಮಹಿಳೆಯರು ಶಕ್ತಿ ಯೋಜನೆ ಬಳಸಿಕೊಂಡಿದ್ದಾರೆ.ಶಕ್ತಿ ಯೋಜನೆಯ ಪ್ರಧಾನ ಉದ್ದೇಶ ಮಹಿಳೆಯರಿಗೆ ಆರ್ಥಿಕ,

ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಸಮಾನ ಅವಕಾಶ ಕಲ್ಪಿಸುವುದು. ಉಚಿತ ಪ್ರಯಾಣದ(Free travel) ಸೌಲಭ್ಯದಿಂದ ಮಹಿಳೆಯರು ಸ್ವಾವಲಂಬಿ ಬದುಕಿನತ್ತ ಸಾಗಲು ಸಾಧ್ಯವಾಗುತ್ತಿದೆ.

ಮನೆಮಠ, ಉದ್ಯೋಗ, ಶಿಕ್ಷಣ, ಆರೋಗ್ಯ ಮುಂತಾದ ಎಲ್ಲ ಕ್ಷೇತ್ರಗಳಲ್ಲಿಯೂ ಈ ಯೋಜನೆಯ ಪರಿಣಾಮ ಗೋಚರಿಸಿದೆ.ಈ ಸಾಧನೆಯ ಹಿನ್ನೆಲೆಯಲ್ಲಿರುವ ಸಾರಿಗೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಕಾರ್ಮಿಕ ಮುಖಂಡರು, ಮಾಧ್ಯಮ ಮತ್ತು ಎಲ್ಲರ ಸಹಕಾರಕ್ಕೆ ಸಚಿವರು ಹಾಗೂ ಸಿಎಂ ಕೃತಜ್ಞತೆ ಸಲ್ಲಿಸಿದ್ದಾರೆ.

ಯೋಜನೆ ಜಾರಿಗೊಳಿಸಿದ ಸಮಯದಲ್ಲಿ ಸಾರಿಗೆ ಸಂಸ್ಥೆಗಳು ಸಾಲದ ಒತ್ತಡದಲ್ಲಿ ಸಿಲುಕಿದ್ದವು. ಆದರೂ, ಕಳೆದ ಎರಡು ವರ್ಷಗಳಲ್ಲಿ 5800 ಹೊಸ ಬಸ್ಸುಗಳು, 10,000 ಹೊಸ ನೇಮಕಾತಿಗಳು,

2000 ಕೋಟಿ ಸಾಲ ಪಾವತಿಗೆ ಸರ್ಕಾರದ ನೆರವು ದೊರಕಿದ್ದು ಸಾರಿಗೆ ಸಂಸ್ಥೆಗಳಲ್ಲಿ ನವ ಚೇತನ ತಂದಿದೆ.ಅಧ್ಯಯನಗಳ ಪ್ರಕಾರ,

ಶಕ್ತಿ ಯೋಜನೆಯಿಂದ ಬೆಂಗಳೂರು ನಗರದಲ್ಲಿ 23% ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ(Hubli-Dharwad) 21% ಮಹಿಳೆಯರ ಉದ್ಯೋಗ ಪಾಲ್ಗೊಳ್ಳುವಿಕೆ ಹೆಚ್ಚಾಗಿದೆ.

ಇದನ್ನು ಓದಿ :  ಶಕ್ತಿ ಯೋಜನೆಯ ಯಶಸ್ಸಿನ ಸಂಭ್ರಮಾಚರಣೆ: ಮಹಿಳಾ ಪ್ರಯಾಣಿಕರಿಗೆ ಇಂದು 500ನೇ ಕೋಟಿ ಟಿಕೆಟ್ ವಿತರಣೆ ಮಾಡಿದ ಸಿಎಂ

ಇದರಿಂದ ರಾಜ್ಯದ ತಲಾ ಆದಾಯಕ್ಕೂ ಏರಿಕೆ ಕಂಡಿದೆ.ಶಕ್ತಿ ಯೋಜನೆಯ ಯಶಸ್ಸಿನಿಂದ ಪ್ರೇರಿತವಾಗಿ ದೇಶದ ಹಲವು ರಾಜ್ಯಗಳಲ್ಲಿ ಇದೇ ರೀತಿಯ ಯೋಜನೆಗಳನ್ನು ಅಳವಡಿಸಲಾಗುತ್ತಿದೆ. ಮಹಿಳಾ ಸಬಲೀಕರಣದತ್ತ ಕರ್ನಾಟಕ ಸರ್ಕಾರ(Government of Karnataka) ಕೈಗೊಂಡಿರುವ ಈ ಹೆಜ್ಜೆ ಇಡೀ ದೇಶಕ್ಕೆ ಮಾದರಿಯಾಗಿದೆ. (Shakti Yojana enters Golden Book of World Records)

Tags: CM siddaramaiahdepartment of transportfree busGolden Book of World RecordsGovernment of KarnatakaRamalingareddshakti schemeState Govt

Related News

ರಾಜ್ಯದಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆ ಏರಿಕೆ: ಐದು ವರ್ಷಗಳಲ್ಲಿ 15 ಸಾವಿರಕ್ಕೂ ಅಧಿಕ ಕೇಸ್
ಪ್ರಮುಖ ಸುದ್ದಿ

ರಾಜ್ಯದಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆ ಏರಿಕೆ: ಐದು ವರ್ಷಗಳಲ್ಲಿ 15 ಸಾವಿರಕ್ಕೂ ಅಧಿಕ ಕೇಸ್

September 5, 2026
ಪ್ರವಾಸಿಗರಿಗೆ ಗುಡ್‌ನ್ಯೂಸ್: ನಾಲ್ಕು ತಿಂಗಳ ಬಳಿಕ ಹಾರಂಗಿ, ಮತ್ತಿಗೋಡು ಆನೆ ಶಿಬಿರಗಳು ಪುನರಾರಂಭ
ಪ್ರಮುಖ ಸುದ್ದಿ

ಪ್ರವಾಸಿಗರಿಗೆ ಗುಡ್‌ನ್ಯೂಸ್: ನಾಲ್ಕು ತಿಂಗಳ ಬಳಿಕ ಹಾರಂಗಿ, ಮತ್ತಿಗೋಡು ಆನೆ ಶಿಬಿರಗಳು ಪುನರಾರಂಭ

September 5, 2026
ಮೋರ್ ಸ್ಟ್ರಾಂಗ್, ಮೋರ್ ಎನಿಮೀಸ್: ನಮ್ಮ ಸರ್ಕಾರದಲ್ಲಿ 100 ನಾಗೇಂದ್ರ ಇದ್ದಾರೆ ಎಂದ ಸಿಎಂ ಡಿಕೆ ಶಿವಕುಮಾರ್
ಪ್ರಮುಖ ಸುದ್ದಿ

ಮೋರ್ ಸ್ಟ್ರಾಂಗ್, ಮೋರ್ ಎನಿಮೀಸ್: ನಮ್ಮ ಸರ್ಕಾರದಲ್ಲಿ 100 ನಾಗೇಂದ್ರ ಇದ್ದಾರೆ ಎಂದ ಸಿಎಂ ಡಿಕೆ ಶಿವಕುಮಾರ್

September 5, 2026
ಶೀಘ್ರದಲ್ಲೇ ದಾಳಿ ಮಾಡುತ್ತೇವೆ: ಇರಾನ್‌ನ ‘ಪಿಕ್ಯಾಕ್ಸ್ ಮೌಂಟನ್’ ಮೇಲೆ ಅಮೆರಿಕದ ಕಣ್ಣು
ದೇಶ-ವಿದೇಶ

ಶೀಘ್ರದಲ್ಲೇ ದಾಳಿ ಮಾಡುತ್ತೇವೆ: ಇರಾನ್‌ನ ‘ಪಿಕ್ಯಾಕ್ಸ್ ಮೌಂಟನ್’ ಮೇಲೆ ಅಮೆರಿಕದ ಕಣ್ಣು

September 5, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.