ಬೆಂಗಳೂರು, ಡಿ. 18: ಸುಮಾರು 10 ತಿಂಗಳಿಂದ ಕೊರೊನಾದಿಂದ ಶಾಲಾ, ಕಾಲೇಜುಗಳು ಮುಚ್ಚಲ್ಪಟ್ಟಿವೆ. ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಯಾವಾಗ ಶಾಲೆ ಆರಂಭವಾಗುವುದೆಂದು ಗೊಂದಲದಲ್ಲೇ ಇದ್ದಾರೆ. ಇದಕ್ಕೀಗ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಆದಷ್ಟು ಬೇಗನೇ ಶಾಲಾ, ಕಾಲೇಜುಗಳು ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಿದೆ. ಜನವರಿ 1, 2021ರಿಂದ ಶಾಲೆಗಳ ಆರಂಭಕ್ಕೆ ಉನ್ನತ ಮಟ್ಟದ ಶಿಕ್ಷಣ ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ.
ಆದ್ದರಿಂದ ಜನವರಿ 1, 2021 ರಿಂದ 10 ಮತ್ತು 12ನೇ ತರಗತಿಗಳನ್ನು ರಾಜ್ಯದಲ್ಲಿ ಆರಂಭಕ್ಕೆ ಮುನ್ಸೂಚನೆ ನೀಡಲಾಗಿದೆ. ಇದಕ್ಕೆ ಶಿಫಾರಸ್ಸನ್ನು ಸಿಎಂ ಯಡಿಯೂರಪ್ಪನವರ ಮುಂದಿಟ್ಟು, ಅದಕ್ಕೆ ಅವರ ಒಪ್ಪಿಗೆ ಬೇಕಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳು ಆದಷ್ಟು ಬೇಗ ಶಾಲೆಗಳ ವಾತಾವರಣ ನೋಡಲು ಸಜ್ಜಾಗಬೇಕಾಗಿದೆ.