Visit Channel

ಲಾಕ್ ಡೌನ್ ಒತ್ತಡ ; ತುತ್ತು ಅನ್ನಕ್ಕಾಗಿ ಪರದಾಡುತ್ತಿರುವ ಚೀನಿಯರು!

china

ಶಾಂಘೈನಲ್ಲಿರುವ ವ್ಯಕ್ತಿಯೊಬ್ಬರು ಪೊಲೀಸರನ್ನು ಸಂಪರ್ಕಿಸಲು ಕೋವಿಡ್ ಲಾಕ್‌ಡೌನ್(Covid Lockdown) ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಉದ್ದೇಶಪೂರ್ವಕವಾಗಿ ತಮ್ಮನ್ನು ಬಂಧಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಮನವಿ ಮಾಡಲು ಕಾರಣವೇನು ಎಂದು ತಿಳಿಯುವುದಾದರೆ, ಮನೆಯಿಂದ ಹೊರಬಂದು ಜೈಲಿಗೆ ಹೋದರೆ, ಜೈಲಿನಲ್ಲಿ ಊಟ ಸಿಗುತ್ತದೆ ಎಂಬ ನಂಬಿಕೆಯಿಂದ ಈ ರೀತಿ ಮಾಡಿದ್ದಾರೆ ಎಂದು ವರದಿ ಹೇಳಿದೆ.

china

2021 ರಲ್ಲಿ ಕೋವಿಡ್ -19 ಭಾರತದಲ್ಲಿ ಸಾವಿರಾರು ಜನರು ಆಮ್ಲಜನಕಕ್ಕಾಗಿ ಪರದಾಡುವಂತೆ ಮಾಡಿದ್ದು ನೆನಪಿದೆಯೇ? ವೈರಸ್(Virus) ಸೋಂಕಿತರ ಸಂಬಂಧಿಕರು ವೈದ್ಯಕೀಯ ಸಾಮಗ್ರಿಗಳನ್ನು ಪಡೆಯಲು ಮತ್ತು ಸತ್ತವರನ್ನು ಹೂಳಲು ಸಮಾಧಿಯನ್ನು ಹುಡುಕಲು ಒದ್ದಾಡಿರುವುದು ಕಂಡುಬಂದಿದೆ. ಅಂಥ ದೃಶ್ಯಗಳೇ ಇದೀಗ ಚೀನಾದ ಅತ್ಯಂತ ಜನನಿಬಿಡ ನಗರ ಶಾಂಘೈನಲ್ಲೂ ಎದರುರಾಗಿದೆ. ಆ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವರದಿಯಾಗುತ್ತಿವೆ.

ಚೀನಾ(China) ದೇಶದ ರಾಜಧಾನಿ ಶಾಂಘೈ(Shanghai) ಕೆಟ್ಟ ಕೋವಿಡ್ -19 ಪರಿಸ್ಥಿತಿಗೆ ತುತ್ತಾಗಿದ್ದು, ಅಗತ್ಯ ವಸ್ತುಗಳನ್ನು ಪೂರೈಸಿಕೊಳ್ಳುವಲ್ಲಿ ಹೆಣಗಾಡುತ್ತಿದೆ. ಸುಮಾರು 26 ಮಿಲಿಯನ್ ನಿವಾಸಿಗಳನ್ನು ಲಾಕ್‌ಡೌನ್‌ಗೆ ದೂಡಲಾಗಿದೆ. 2019 ರ ಕೊನೆಯಲ್ಲಿ ಪಶ್ಚಿಮಕ್ಕೆ ಸುಮಾರು 800 ಕಿಮೀ (500 ಮೈಲುಗಳು) ವುಹಾನ್ ನಗರದಲ್ಲಿ ಕರೋನವೈರಸ್ ಅನ್ನು ಮೊದಲು ಪತ್ತೆ ಹಚ್ಚಿದಾಗಿನಿಂದ ಚೀನಾದ ಅತಿದೊಡ್ಡ ಕೋವಿಡ್ ವೈರಸ್ ಈಗ ಚೀನಾಗೆ ದೊಡ್ಡ ಕಂಟಕವಾಗಿದೆ.

ಕಟ್ಟುನಿಟ್ಟಾದ ನಿರ್ಬಂಧಗಳೊಂದಿಗೆ, ಲಕ್ಷಾಂತರ ಜನರು ಬೇರೆ ದಾರಿಯಿಲ್ಲದೆ ತಮ್ಮ ಮನೆಯೊಳಗೆ ಇರುವುದರಿಂದ ಮತ್ತು ದೈನಂದಿನ ಅಗತ್ಯ ವಸ್ತುಗಳನ್ನು ಪಡೆಯಲು ಹೆಣಗಾಡುತ್ತಿದ್ದಾರೆ. ಹಲವಾರು ವರದಿಗಳ ಪ್ರಕಾರ, ವೈದ್ಯಕೀಯ ಸರಬರಾಜು ಸೇರಿದಂತೆ ಅಗತ್ಯ ವಸ್ತುಗಳ ಕೊರತೆಯನ್ನು ಚೀನಿಯರು ನೋಡುತ್ತಿದ್ದಾರೆ. ತಮ್ಮ ಆಹಾರಕ್ಕಾಗಿ ಡೆಲಿವರಿ ಸ್ಲಾಟ್‌ಗಳನ್ನು ಸುರಕ್ಷಿತಗೊಳಿಸಲು ಹೋರಾಡುತ್ತಿರುವ ನಿವಾಸಿಗಳು ಕೂಡ ಬೆಲೆ ಏರಿಕೆಯ ಬಿಸಿಯನ್ನು ಎದುರಿಸುತ್ತಿದ್ದಾರೆ.

ಇದು ಸರ್ಕಾರದ ಮೇಲೆ ಮತ್ತಷ್ಟು ಒತ್ತಡವನ್ನು ಹೇರಿಸಿದೆ. ಚೀನಿಯರಿಗೆ ಈಗ ತುತ್ತು ಅನ್ನಕ್ಕೂ ಬರದ ಪರಿಸ್ಥಿತಿ ಬೆಂಬಿಡದೆ ಕಾಡುತ್ತಿರುವುದು ತೀರ ಶೋಚನೀಯ ಎಂದೇ ಹೇಳಬಹುದು.

Latest News

bsy
ರಾಜಕೀಯ

ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್‌ವೈ

ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.

bjp
ರಾಜಕೀಯ

ಡಿಕೆಶಿ ಸ್ವಾತಂತ್ರ್ಯದ ನಡಿಗೆಯ ಉದ್ದೇಶ, ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ? : ಬಿಜೆಪಿ

ಸಿದ್ದರಾಮಯ್ಯ(Siddaramaiah) ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್(Congress) ಹಿರಿಯ ನಾಯಕರು ಡಿಕೆಶಿ(DKS) ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ?

Ghee
ಆರೋಗ್ಯ

ತುಪ್ಪದ ಬಗ್ಗೆ ತಪ್ಪು ಕಲ್ಪನೆ ಬೇಡ! ; ತಪ್ಪದೇ ತುಪ್ಪ ಸೇವಿಸಿ, ಈ ಆರು ಪ್ರಯೋಜನಗಳನ್ನು ಪಡೆದುಕೊಳ್ಳಿ

ತುಪ್ಪವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

Assam
ದೇಶ-ವಿದೇಶ

500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.