vijaya times advertisements
Visit Channel

ಪಾಕಿಸ್ತಾನದ ಜನರು ಭಾರತವನ್ನು ದ್ವೇಷಿಸುವುದಿಲ್ಲ : ಶರದ್ ಪವಾರ್!

political

ನಮ್ಮ ನೆರೆಯ ಪಾಕಿಸ್ತಾನದ(Pakistan) ಸಾಮಾನ್ಯ ಜನರು ಭಾರತವನ್ನು ದ್ವೇಷಿಸುವುದಿಲ್ಲ. ಆದರೆ ಪಾಕಿಸ್ತಾನದ ಸೇನೆಯಿಂದ ಅಧಿಕಾರ ಪಡೆದವರು ಮತ್ತು ಅವರ ಪ್ರಭಾವಕ್ಕೆ ಒಳಗಾದವರು ಮಾತ್ರ ಎರಡು ದೇಶಗಳ(Country) ನಡುವೆ ಉದ್ವಿಗ್ನತೆ ಹೆಚ್ಚಿಸುತ್ತಾರೆ ಎಂದು ಎನ್‍ಸಿಪಿ ಅಧ್ಯಕ್ಷ(NCP President) ಶರದ್ ಪವಾರ್(Sharad Pawar) ಹೇಳಿದ್ದಾರೆ.

political

ಮಹಾರಾಷ್ಟ್ರದ(Maharashtra) ಕೊಂಡ್ವಾದಲ್ಲಿ ನಡೆದ ಈದ್-ಮಿಲನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಕಿಸ್ತಾನದ ಸಾಮಾನ್ಯ ಜನರು ಭಾರತವನ್ನು ದ್ವೇಷಿಸುವುದಿಲ್ಲ. ಆದರೆ ಮೂಲಭೂತವಾದ ಮತ್ತು ಸೇನೆಯಿಂದ ಅಧಿಕಾರ ಪಡೆದವರು ದ್ವೇಷವನ್ನು ಹರಡುತ್ತಾರೆ. ಆದರೆ ನಮ್ಮ ನೆರೆಯ ದೇಶದಲ್ಲಿ ಯುವಕನೊಬ್ಬ ಪ್ರಧಾನಿಯಾಗಿ ಅಧಿಕಾರ ಹಿಡಿದು, ಇಡೀ ದೇಶಕ್ಕೆ ಹೊಸ ದಿಕ್ಕು ತೋರಿಸಲು ಪ್ರಯತ್ನಿಸಿದ. ಆದರೆ ಆತನನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು ಎಂದು ಪರೋಕ್ಷವಾಗಿ ಇಮ್ರಾನ್ ಖಾನ್‍ರನ್ನು ಹೊಗಳಿದರು.


ಇನ್ನು ನಾನು ಐಸಿಸಿ ಅಧ್ಯಕ್ಷನಾಗಿದ್ದಾಗ ಪಾಕಿಸ್ತಾನಕ್ಕೆ ಅನೇಕ ಬಾರಿ ಭೇಟಿ ನೀಡಿದ್ದೇನೆ. ಭಾರತ ತಂಡದೊಂದಿಗೆ ಕರಾಚಿ, ಲಾಹೋರ, ಇಸ್ಲಾಮಾಬಾದ್ ಎಲ್ಲೇ ಹೋದರು ನಮಗೆ ಅದ್ಭುತ ಸ್ವಾಗತ ದೊರೆಯುತ್ತಿತ್ತು. ಇನ್ನು ಕರಾಚಿಯಲ್ಲಿ ಒಮ್ಮೆ ಪಂದ್ಯದ ನಂತರ ಭಾರತ ತಂಡದ ಆಟಗಾರರು ಹೊರಗೆ ರೆಸ್ಟೋರೆಂಟ್‍ಗೆ ಊಟಕ್ಕೆ ಹೋಗಿದ್ದೇವು. ಆದರೆ ಆ ರೆಸ್ಟೋರೆಂಟ್ ಮಾಲಿಕ ನಮ್ಮಿಂದ ಹಣವನ್ನು ಪಡೆಯಲಿಲ್ಲ. ನೀವು ನಮ್ಮ ಅಥಿತಿಗಳು ಎಂದೇಳಿ ಅತ್ಯುತ್ತಮ ಆತಿಥ್ಯ ನೀಡಿದ ಎಂದು ಹೇಳಿದರು.

sharad

ಇನ್ನು ಇಂದು ಜಗತ್ತಿನಲ್ಲಿ ವಿಭಿನ್ನ ಪರಿಸ್ಥಿತಿ ಇದೆ. ರಷ್ಯಾದಂತ ಶಕ್ತಿಶಾಲಿ ದೇಶ ಉಕ್ರೇನ್‍ನಂತ ಚಿಕ್ಕ ದೇಶದ ಮೇಲೆ ಯುದ್ದ ಮಾಡುತ್ತಿದೆ. ಇನ್ನೊಂದೆಡೆ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಯುವಕರು ದುರಾಡಳಿತದಿಂದ ಬೇಸತ್ತು ಬೀದಿಗಿಳಿದಿದ್ದಾರೆ. ರಾಜಕೀಯ ನಾಯಕರ ಮನೆಗಳನ್ನು ಸುಡುತ್ತಿದ್ದಾರೆ. ಹೀಗಾಗಿ ಶ್ರೀಲಂಕಾದಲ್ಲಿ ರಾಜಕೀಯ ನಾಯಕರು ತಲೆಮರೆಸಿಕೊಂಡಿದ್ದಾರೆ ಎಂದರು.

Latest News

ರಾಜ್ಯ

ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕ ಅಮಾನತು!

ನಾವು ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಂಡಿದ್ದೇವೆ. ವಾಸ್ತವವಾಗಿ ಯಾರೂ ಇಲ್ಲದ ಕಾರಣ ವಿದ್ಯಾರ್ಥಿಯು ನಿಜವಾಗಿಯೂ ಆತಂಕಕ್ಕೊಳಗಾಗಿದ್ದಾನೆ.

ರಾಜಕೀಯ

ನೀವು ಬಡವರು ಎಂದು ಹೇಳಿಕೊಳ್ಳುತ್ತೀರಿ, ಆದ್ರೆ ನಾನು ಅಸ್ಪೃಶ್ಯರಲ್ಲಿ ಒಬ್ಬ : ಮಲ್ಲಿಕಾರ್ಜುನ ಖರ್ಗೆ

ನಾನು ಅಸ್ಪೃಶ್ಯರಲ್ಲಿ ಒಬ್ಬ. ಜನರು ನಿಮ್ಮ ಚಹಾವನ್ನು ಕುಡಿಯುತ್ತಿದ್ದರು,  ಆದರೆ ಯಾರೂ ನನ್ನ ಚಹಾವನ್ನು ಸೇವಿಸಲಿಲ್ಲ ಎಂದು ಖರ್ಗೆ ಅವರು ಪರೋಕ್ಷವಾಗಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.  

ರಾಜಕೀಯ

ಒಕ್ಕಲಿಗರಿಗೆ 4%-12% ಮೀಸಲಾತಿ ; ಇದು ಉತ್ತಮ ಬೇಡಿಕೆಯಾಗಿದೆ : ನಟ ಚೇತನ್

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಒಕ್ಕಲಿಗ ಲಾಬಿಗಳು ಒಕ್ಕಲಿಗರಿಗೆ 4% – 12% ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ.