ಪಂಚರಾಜ್ಯಗಳ(Five states) ಚುನಾವಣೆಯಲ್ಲಿ(Election) ಕಾಂಗ್ರೆಸ್(Congress) ಪಕ್ಷವೂ ಹೀನಾಯ ಸೋಲು ಕಂಡ ನಂತರ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಬದಲಾವಣೆಯ ಕೂಗು ಬಲವಾಗಿ ಕೇಳಿ ಬಂದಿತ್ತು.
ಗಾಂಧಿ(Gandhi) ಕುಟುಂಬದ ನಾಯಕತ್ವದ ಕುರಿತು ಅಪಸ್ವರ ಎತ್ತಿದ್ದ ಕೆಲ ನಾಯಕರು, ನಾಯಕತ್ವ ಬದಲಾವಣೆಯಾಗಲೇಬೇಕು ಮತ್ತು ಗಾಂಧಿ ಕುಟುಂಬದ ಹೊರತಾದ ವ್ಯಕ್ತಿಗೆ ನಾಯಕತ್ವ ನೀಡಬೇಕು ಎಂದು ಆಗ್ರಹಿಸಿದ್ದರು.

ಎಂದಿನಂತೆ ಕೆಲ ಗಾಂಧಿ ಕುಟುಂಬ ನಿಷ್ಠ ನಾಯಕರು ನವದೆಹಲಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ನಡೆಸಿ, ಹಂಗಾಮಿ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರನ್ನೇ ಪುನಃ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆ ಮಾಡಿಕೊಂಡಿದ್ದರು. ಕಳೆದ ಕೆಲ ವರ್ಷಗಳಿಂದ ಕಾಂಗ್ರೆಸ್ ಸತತವಾಗಿ ಚುನಾವಣೆಗಳಲ್ಲಿ ಸೋಲುತ್ತಿದೆ. ಆದರು ನಾಯಕತ್ವ ಬದಲಾವಣೆಯಾಗದೆ, ಮತ್ತೆ ಮತ್ತೆ ಸೋಲು ಕಾಣುತ್ತಿದೆ ಎಂದು ಕೆಲ ಹಿರಿಯ ನಾಯಕರು ಗಾಂಧಿ ಕುಟುಂಬದ ವಿರುದ್ದ ಧ್ವನಿಯೆತ್ತಿದ್ದರು.
ಗಾಂಧಿ ಕುಟುಂಬದ ವಿರುದ್ದ ಕಾಂಗ್ರೆಸ್‍ನ ಹಿರಿಯ ನಾಯಕ ಕಪಿಲ್ ಸಿಬಲ್ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು. ಆದರೆ ಇದೀಗ ಜಿ-23 ನಾಯಕರು ಗುಲಾಂ ನಬಿ ಆಜಾದ್ ಅವರ ದೆಹಲಿ ನಿವಾಸದಲ್ಲಿ ಪ್ರತ್ಯೇಕ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್‍ನ ಹಿರಿಯ ನಾಯಕರಾದ ಆನಂದ್ ಶರ್ಮಾ, ಮನೀಶ್ ತಿವಾರಿ, ಭೂಪಿಂದರ್ ಹೂಡಾ, ಪಿಜೆ ಕುರಿಯನ್, ಪೃಥ್ವಿರಾಜ್ ಚವ್ಹಾಣ, ಮಣಿಶಂಕರ್ ಅಯ್ಯರ್, ರಾಜ್ ಬಬ್ಬರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಇನ್ನು ಕಾಂಗ್ರೆಸ್ ಅಸಮಾಧಾನಿತರ ಗುಂಪು ಎಂದೇ ಗುರುತಿಸಿಕೊಂಡಿರುವ ಜಿ-23 ಗುಂಪಿನಲ್ಲಿ ಸಂಸದ ಶಶಿ ತರೂರ್ ಕಾಣಿಸಿಕೊಂಡಿದ್ದಾರೆ.

ಗುಲಾಂ ನಬಿ ಆಜಾದ್ ಮನೆಯಲ್ಲಿ ನಡೆದ ಸಭೆಯಲ್ಲಿ ಶಶಿ ತರೂರ್ ಕೂಡಾ ಭಾಗಿಯಾಗಿದ್ದಾರೆ. ಪ್ರತಿಬಾರಿಯೂ ಗಾಂಧಿ ಕುಟುಂಬದ ಪರವಾಗಿ ಮಾತನಾಡುತ್ತಾ, ಗಾಂಧಿ ಕುಟುಂಬದ ನಾಯಕತ್ವದ ಪರವಾಗಿದ್ದ ಶಶಿ ತರೂರು ಜಿ-23 ಗುಂಪಿನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಅದೇ ರೀತಿ ಗಾಂಧಿ ಕುಟುಂಬದ ನಿಷ್ಠ ಮತ್ತು ಸೋನಿಯಾ ಗಾಂಧಿಯವರ ಬಲಗೈನಂತಿದ್ದ ಮಣಿಶಂಕರ್ ಅಯ್ಯರ್ ಕೂಡಾ ಸಭೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಒಟ್ಟಾರೆಯಾಗಿ ಕಾಂಗ್ರೆಸ್‍ನಲ್ಲಿ ನಡೆಯುತ್ತಿರುವ ಈ ಎಲ್ಲ ಬೆಳವಣಿಗೆಗಳು ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಕುಗ್ಗುವಂತೆ ಮಾಡುತ್ತಿವೆ.
ಗಾಂಧಿ ಕುಟುಂಬದ ನಾಯಕತ್ವದ ಕುರಿತು ಅಸಮಾಧಾನ ತೀವ್ರಗೊಳ್ಳುತ್ತಿದೆ. ಕೆಲವೇ ಕೆಲವರು ಮಾತ್ರ ಗಾಂಧಿ ಕುಟುಂಬದ ಪರವಾಗಿದ್ದಾರೆ. ಅನೇಕ ಹಿರಿಯ ನಾಯಕರು ಗಾಂಧಿ ಕುಟುಂಬದೊಂದಿಗೆ ಹೋದರೆ, ಕಾಂಗ್ರೆಸ್ ಪಕ್ಷ ಇತಿಹಾಸದ ಪುಟ ಸೇರಲಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಕಾಂಗ್ರೆಸ್ ಅಸಮಾದಾನಿತರ ಗುಂಪು ಎಂದೇ ಗುರುತಿಸಿಕೊಂಡಿರುವ ಜಿ-23 ಗುಂಪಿನಲ್ಲಿ ಸಂಸದ ಶಶಿ ತರೂರ್ ಕಾಣಿಸಿಕೊಂಡಿದ್ದಾರೆ. ಗುಲಾಂ ನಬಿ ಆಜಾದ್ ಮನೆಯಲ್ಲಿ ನಡೆದ ಸಭೆಯಲ್ಲಿ ಶಶಿ ತರೂರ್ ಕೂಡಾ ಭಾಗಿಯಾಗಿದ್ದಾರೆ.
ಪ್ರತಿಬಾರಿಯೂ ಗಾಂಧಿ ಕುಟುಂಬದ ಪರವಾಗಿ ಮಾತನಾಡುತ್ತಾ, ಗಾಂಧಿ ಕುಟುಂಬದ ನಾಯಕತ್ವದ ಪರವಾಗಿದ್ದ ಶಶಿ ತರೂರು ಜಿ-23 ಗುಂಪಿನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಅದೇ ರೀತಿ ಗಾಂಧಿ ಕುಟುಂಬದ ನಿಷ್ಠ ಮತ್ತು ಸೋನಿಯಾ ಗಾಂಧಿಯವರ ಬಲಗೈನಂತಿದ್ದ ಮಣಿಶಂಕರ್ ಅಯ್ಯರ್ ಕೂಡಾ ಸಭೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಒಟ್ಟಾರೆಯಾಗಿ ಕಾಂಗ್ರೆಸ್‍ನಲ್ಲಿ ನಡೆಯುತ್ತಿರುವ ಈ ಎಲ್ಲ ಬೆಳವಣಿಗೆಗಳು ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಕುಗ್ಗುವಂತೆ ಮಾಡುತ್ತಿವೆ.
