ಆಂಧ್ರ ಪ್ರದೇಶ, ನ. 22: ಯಾವುದೇ ಶಸ್ತ್ರಚಕಿತ್ಸೆ ವೇಳೆ ರೋಗಿಗಳಿಗೆ ಅರೆವಳಿಕೆ ನೀಡಿ, ಸ್ಪರ್ಶ ಜ್ಞಾನವಿಲ್ಲದಂತೆ ಮಾಡುವುದು ಸಹಜ. ಆದರೆ ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ ರೋಗಿ ಎಚ್ಚರವಿದ್ದು, ‘ಅವತಾರ್’ ಹಾಗೂ ‘ಬಿಗ್ಬಾಸ್’ ಕಾರ್ಯಕ್ರಮ ವೀಕ್ಷಿಸಿದ ಘಟನೆ ನಡೆದಿದೆ.
ಆಂಧ್ರಪ್ರದೇಶದ ಗುಂಟೂರಿನ ಬೃಂದಾ ನ್ಯೂರೋ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಮೆದುಳು ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದ 33 ವರ್ಷದ ವರಪ್ರಸಾದ್ಗೆ ವೈದ್ಯರು ಗಂಭೀರ ಸ್ವರೂಪದ ಮೆದುಳು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ವೇಳೆ ಎಚ್ಚರವಿದ್ದ ವರ ಪ್ರಸಾದ್, ಲ್ಯಾಪ್ಟಾಪ್ನಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಜತೆಗೆ ಅವತಾರ್ ಸಿನಿಮಾ ವೀಕ್ಷಿಸಿದ್ದಾರೆ.
ರೋಗಿ ಎಚ್ಚರವಿರುವಾಗಲೇ ಶಸ್ತ್ರಚಿಕಿತ್ಸೆ ನಡೆಸಿದ ಮೂವರು ವೈದ್ಯರು, ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ಹಿಂದೆ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಮಹಿಳೆಯೊಬ್ಬರು ವೈಯೋಲಿನ್ ನುಡಿಸುತ್ತಾ ಅಚ್ಚರಿ ಮೂಡಿಸಿದ್ದರು.