ನವದೆಹಲಿ, ಡಿ. 17: ಏರ್ ಇಂಡಿಯಾ ಹಿರಿಯ ನಾಗರೀಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಏರ್ ಇಂಡಿಯಾ ವಿಮಾನದಲ್ಲಿ ಟಿಕೆಟ್ ಬುಕ್ ಮಾಡುವ ಹಿರಿಯ ನಾಗರಿಕರಿಗೆ ಶೇ. 50 ರಷ್ಟು ರಿಯಾಯತಿ ನೀಡಲಾಗುವುದು ಎಂದು ಏರ್ ಇಂಡಿಯಾ ಸಂಸ್ಥೆ ತಿಳಿಸಿದೆ.
ಈ ಯೋಜನೆ ದೇಶೀಯ ವಿಮಾನಗಳಿಗೆ ಮಾತ್ರ ಅನ್ವಯವಾಗಿದ್ದು, 60 ವರ್ಷ ಮೇಲ್ಪಟ್ಟ ವಿಮಾನ ಪ್ರಯಾಣಿಕರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ.
ಭಾರತೀಯ ರಾಷ್ಟ್ರೀಯತೆಯ ಹಿರಿಯ ನಾಗರಿಕರೊಬ್ಬರು ಭಾರತದಲ್ಲಿ ಶಾಶ್ವತವಾಗಿ ನೆಲೆಸಿದ್ದು, ಪ್ರಯಾಣ ಆರಂಭವಾದ ದಿನಾಂಕದಂದು 60 ವರ್ಷ ವಯಸ್ಸನ್ನು ಪಡೆದಿರಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಏರ್ ಇಂಡಿಯಾ ಆಫರ್ ನ ಅಧಿಕೃತ ಪಠ್ಯದ ಪ್ರಕಾರ, ‘ಎಕಾನಮಿ ಕ್ಯಾಬಿನ್ ನಲ್ಲಿ ಆಯ್ದ ಬುಕ್ಕಿಂಗ್ ತರಗತಿಗಳ ಬೇಸಿ ಪಠ್ಯದ ಪ್ರಕಾರ , ‘ಎಕಾನಮಿ ಕ್ಯಾಬಿನ್’ನಲ್ಲಿ ಆಯ್ದ ಬುಕ್ಕಿಂಗ್ ತರಗತಿಗಳ ಬೇಸಿಕ್ ಶುಲ್ಕದ ಮೇಲೆ ಶೇ.50ರಷ್ಟು ರಿಯಾಯಿತಿ ಲಭ್ಯವಿದೆ.
ಪ್ರಯಾಣದ ದಿನಾಂಕದ ಮೂರು ದಿನ ಮುಂಚಿತವಾಗಿ ಟಿಕೆಟ್‌ಗಳನ್ನು ಖರೀದಿಸಬೇಕು ಮತ್ತು ಅದೇ ಆಫರ್ ಒಂದು ವರ್ಷದವರೆಗೆ ಚಾಲ್ತಿಯಲ್ಲಿರುತ್ತದೆ.. ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ, ಯಾವುದೇ ಮಾನ್ಯ ವಾದ ಫೋಟೋ ಐಡಿ, ವೋಟರ್ ಐಡಿ ಕಾರ್ಡ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಏರ್ ಇಂಡಿಯಾ ನೀಡಿರುವ ಹಿರಿಯ ನಾಗರಿಕರ ಐಡಿ ಕಾರ್ಡ್ ಇತ್ಯಾದಿಗಳನ್ನು ಟಿಕೆಟ್ ಬುಕ್ ಮಾಡುವಾಗ ಆಫರ್ ಪಡೆಯಲು ನೀಡಬೇಕಾಗಿದೆ ಎಂದು ಸಂಸ್ಥೆ ತಿಳಿಸಿದೆ.