ಹಿಂದಿ ಬಿಗ್ ಬಾಸ್ ಸೀಸನ್ 15ರ ಗ್ರ್ಯಾಂಡ್ ಫಿನಾಲೆ ಇತ್ತೀಚಿಗಷ್ಟೆ ಮುಕ್ತಾಯಗೊಂಡಿದ್ದು, ಈ ಸೀಸನ್ ಸೇರಿದಂತೆ ಕಳೆದ 14 ಸೀಸನ್ ಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಹೆಗ್ಗಳಿಕೆ ಸಲ್ಮಾನ್ ಖಾನ್ ಅವರಿಗೆ ಸಲ್ಲುತ್ತದೆ. ಈ ಕುರಿತು ಕಾರ್ಯಕ್ರಮದ ವೀಕ್ಷಕರು ಸಲ್ಮಾನ್ ಖಾನ್ ಅವರಿಗೆ ವಿಶೇಷವಾಗಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿಕೊಟ್ಟ ಸಲ್ಮಾನ್ ಖಾನ್ ರವರಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ಸದ್ಯದ ಸಮಯದಲ್ಲಿ ಕೊರೊನಾ ಭೀತಿಯ ನಡುವೆಯೂ ಬಿಗ್ ಬಾಸ್ ಸೀಸನ್ 15 ಯಶಸ್ವಿಯಾಗಿ ಪೂರ್ಣಗೊಂಡಿದೆ.

ಈ ಕಾರ್ಯಕ್ರಮಕ್ಕೆ ಸಿದ್ದಾರ್ಥ್ ಶುಕ್ಲ ರವರ ಪ್ರೇಯಸಿಯಾಗಿದ್ದ ಶಹನಾಜ್ ಗಿಲ್ ಅತಿಥಿಯಾಗಿ ಭಾಗವಹಿಸಿದ್ದರು. ಆದರೆ ಶಹನಾಜ್ ಗಿಲ್ ವೇದಿಕೆ ಮೇಲೆ ಬರುತ್ತಿದ್ದಂತೆ ಸಲ್ಮಾನ್ ಖಾನ್ ಅವರನ್ನು ಕಂಡು ಕಣ್ಣೀರಿಟ್ಟಿದ್ದಾರೆ. ಏಕೆಂದರೆ ಹಿಂದಿ ಬಿಗ್ ಬಾಸ್ ಸೀಸನ್ 13 ರಲ್ಲಿ ಶಹನಾಜ್ ಗಿಲ್ ಮತ್ತು ಸಿದ್ದಾರ್ಥ್ ಅವರು ಭಾಗವಹಿಸಿದ್ದರು. ಆ ಸೀಸನ್ ನಲ್ಲಿ ಸಿದ್ದಾರ್ಥ್ ಅವರು ಗೆಲುವಿನ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು. ರನ್ನರ್ ಅಪ್ ಸ್ಥಾನವನ್ನು ಶಹನಾಜ್ ಗಿಲ್ ಅವರು ಪಡೆದುಕೊಂಡಿದ್ದರು. ಸಿದ್ಧಾರ್ಥ್ ಶುಕ್ಲಾ ಮತ್ತು ಶೆಹನಾಜ್ ಗಿಲ್ ಇಬ್ಬರ ಪ್ರೇಮಕ್ಕೆ ಈ ವೇದಿಕೆ ಪ್ರಮುಖವಾಗಿ ಸಾಕ್ಷಿಯಾಗಿತ್ತು. ಬಿಗ್ ಬಾಸ್ ನಿಂದ ಹೊರ ಬಂದ ನಂತರವೂ ಈ ಜೋಡಿಗಳು ಒಟ್ಟಾಗಿಯೇ ಎಲ್ಲಾ ಕಡೆ ಕಾಣಿಸಿಕೊಂಡು ತಮ್ಮದೇ ಹವಾ ಸೃಷ್ಟಿಸಿದ್ದರು.

ಸಿದ್ದಾರ್ಥ್ ಶುಕ್ಲ ರವರ ಸಾವು ಶಹನಾಜ್ ನಿಂದ ಇಂದಿಗೂ ಕೂಡ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದೇ ಕಾರಣಕ್ಕೆ ವೇದಿಕೆ ಮೇಲೆ ಮಾತನಾಡಿ ಕೆಳಗೆ ಬಂದ ಕೂಡಲೇ ಶಹನಾಜ್ ಭಾವುಕರಾದರು. ಇದನ್ನು ಕಂಡ ಸಲ್ಮಾನ್ ಖಾನ್, ಶಹನಾಜ್ ಅವರನ್ನು ಸಮಾಧಾನ ಪಡಿಸಿ, ಧೈರ್ಯ ಹೇಳಿದರು. ಸಲ್ಮಾನ್ ಖಾನ್ ಅವರು ಶಹನಾಜ್ ಅವರನ್ನು ಸಂತೈಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ಚರ್ಚೆಗೆ ಗುರಿಯಾಗಿದೆ. ಅವರಿಬ್ಬರ ಪ್ರೀತಿಗೆ ಈ ವೇದಿಕೆ ಸಾಕ್ಷಿಯಾಗಿತ್ತು. ಆದರೆ ದುರಂತವೆಂದರೆ ಮದುವೆ ದಿನಾಂಕ ಸಮೀಪಿಸುವುದರಳೊಗೆ ಸಿದ್ದಾರ್ಥ್ ಅವರು ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದರು.
- Preethu