• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

17 ಕ್ರಿಮಿನಲ್ ಕೇಸ್ ಇರುವ ರೌಡಿಶೀಟರ್ಗೆ ಶಿಗ್ಗಾಂವಿ ಕಾಂಗ್ರೆಸ್ ಟಿಕೆಟ್: ಸ್ವಪಕ್ಷದ ನಾಯಕನಿಂದಲೇ ಬಂಡಾಯ

Bhavya by Bhavya
in ಪ್ರಮುಖ ಸುದ್ದಿ, ರಾಜಕೀಯ, ರಾಜ್ಯ, ವಿಜಯ ಟೈಮ್ಸ್‌
Yasir Khan Pathan

Yasir Khan Pathan

0
SHARES
119
VIEWS
Share on FacebookShare on Twitter

Congress Ticket for 17 Criminal Cases Is Rowdy Sheeter: Rebellion by Own Party leader

Haveri: ರಾಜ್ಯದ ಮೂರು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯ ಕಾವು ರಂಗೇರಿದ್ದು, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ (Shiggaon Assembly Constituency) ಸ್ವಪಕ್ಷದಲ್ಲೇ ಉಂಟಾಗಿರುವ ಬಂಡಾಯ ಕಾಂಗ್ರೆಸ್ಗೆ ಹೊಸ ತಲೆನೋವು ಸೃಷ್ಟಿಸಿದೆ. ಹಾನಗಲ್ ಮೂಲದ 17 ಕ್ರಿಮಿನಲ್ ಕೇಸ್ ಇರುವ ರೌಡಿ ಶೀಟರ್ ಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಕ್ಕಿದೆ. ರೌಡಿ ಶೀಟರ್ ಗೆ ನಾವು ಬೆಂಬಲ ನೀಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ (Ajjampir Qadri) ಬಂಡಾಯ ಸಾರಿದ್ದಾರೆ.

Ajjampir Qadri vs yasir khan pathan
Ajjampir Qadri vs yasir khan pathan

ಶಿಗ್ಗಾಂವಿ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಕಾಂಗ್ರೆಸ್ (Congress) ಟಿಕೆಟ್ ನೀಡುತ್ತಾ ಬಂದಿದೆ. ಈ ಬಾರಿಯೂ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿದ್ದು, ಆದರೆ ಆ ಸಮುದಾಯದ ಕೆಲವು ಮುಖಂಡರು ಅಭ್ಯರ್ಥಿ ಆಯ್ಕೆಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟಿಗಾಗಿ ಭಾರೀ ಪೈಪೋಟಿ ನಡೆದಿತ್ತು. ಅಜ್ಜಂಪೀರ್ ಖಾದ್ರಿ, ಸಂಜೀವ್ ನೀರಲಗಿ, ಸೋಮಣ್ಣ ಬೇವಿನಮರದ, ವೈಶಾಲಿ ಕುಲ್ಕರ್ಣಿ, ಯಾಸಿರ್ ಅಹ್ಮದ್ ಖಾನ್ ಪಠಾಣ್, ರಾಜು ಕುನ್ನೂರು (Yasir Ahmad Khan Pathan, Raju Kunnoor) ಹೀಗೆ ಅನೇಕರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಅಂತಿಮವಾಗಿ, ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಆಪ್ತರಾದ ಯಾಸಿರ್ ಪಠಾಣ್ ಗೆ ಟಿಕೆಟ್ ಒಲಿದಿದೆ.

ಈ ಮಧ್ಯೆ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿದರೂ, ಪ್ರತಿ ಬಾರಿಯೂ ಸೋಲುಂಟಾಗಿದೆ. ಹೀಗಾಗಿ ಈ ಬಾರಿ ಕ್ಷೇತ್ರದಲ್ಲಿ ಪ್ರಬಲವಾಗಿರುವ ಲಿಂಗಾಯತ ಪಂಚಮಸಾಲಿ ಸಮುದಾಯ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯವೂ ಕೇಳಿಬಂದಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ (Basavaraj Bommai) ವಿರುದ್ದ 35,978 ಮತಗಳಿಂದ ಸೋಲುಂಡಿದ್ದ ಯಾಸಿರ್ ಪಠಾಣ್ ಗೆ ಮತ್ತೆ ಕಾಂಗ್ರೆಸ್ ಟಿಕೆಟ್ ನೀಡಿದೆ.

ಆದರೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಯ್ಯದ್ ಅಜ್ಜಂಪೀರ್ ಖಾದ್ರಿ 1999ರಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದರು. ನಂತರ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಸತತವಾಗಿ 2008, 2013 ಮತ್ತು 2018ರ ಚುನಾವಣೆಯಲ್ಲಿ ಟಿಕೆಟ್ ನೀಡಲಾಗಿತ್ತು. ಆದರೆ ಬಸವರಾಜ ಬೊಮ್ಮಾಯಿ ವಿರುದ್ದ ಸತತವಾಗಿ ಅವರು ಸೋಲುಂಡಿದ್ದರು. ಹೀಗಾಗಿ 2023ರ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನಿರಾಕರಿಸಿ, ಯಾಸಿರ್ ಪಠಾಣ್ಗೆ ಟಿಕೆಟ್ ನೀಡಲಾಗಿದೆ.

ಯಾಸಿರ್ ಪಠಾಣ್ಗೆ ಟಿಕೆಟ್ ನೀಡಿರುವ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿರುವ ಸಯ್ಯದ್ ಅಜ್ಜಂಪೀರ್ ಖಾದ್ರಿ, ಪಕ್ಷದ ಟಿಕೆಟ್ ಸಿಗದೇ ಇರುವುದಕ್ಕೆ ನನಗೆ ದುಃಖವಿದೆ. ನಾನು ಕಾಂಗ್ರೆಸ್ ಪಕ್ಷವನ್ನು ಶಿಗ್ಗಾಂವಿ ಕ್ಷೇತ್ರದಲ್ಲಿ ಕಟ್ಟಿ ಬೆಳೆಸಿದ್ದೇನೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ನಿಂದ ಯಾರೂ ಸ್ಪರ್ಧೆ ಮಾಡಲು ತಯಾರಿಲ್ಲದ ಸಮಯದಲ್ಲಿ ಆ ಪಕ್ಷದಿಂದ ಸ್ಪರ್ಧಿಸಿದ್ದೇನೆ. ಪಕ್ಷಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದೇನೆ. ಆದರೆ ಈ ಬಾರಿ ಪಕ್ಷದಿಂದ 17 ಕ್ರಿಮಿನಲ್ ಕೇಸ್ ಇರುವ ರೌಡಿ ಶೀಟರ್ (Rowdy Sheeter)ಗೆ ಟಿಕೆಟ್ ಸಿಕ್ಕಿದೆ. ಬೇಕಿದ್ದರೇ ಪೊಲೀಸ್ ರೆಕಾರ್ಡ್ ಪರೀಕ್ಷಿಸಬಹುದು. ರೌಡಿ ಶೀಟರ್ಗೆ ಟಿಕೆಟ್ ಕೊಟ್ಟಿರುವುದಕ್ಕೆ ಬೇಸರವಿದೆ ಎಂದು ಅಜ್ಜಂಪೀರ್ ಕಿಡಿಕಾರಿದ್ದಾರೆ.

Shiggaon By Election Karnataka Election News 2024

Haveri: The ongoing by-elections for three constituencies of the state are in full swing and the insurgency in the Shiggaon Assembly Constituency has created a new headache for the Congress. Hanagal based rowdy sheeter with 17 criminal cases has got ticket from Congress party. Congress leader and former MLA Ajjampir Qadri said that we will not support the rowdy sheeter.

Congress has been giving ticket to candidate of Muslim community in Shiggavi constituency. This time also the ticket was given to the Muslim community, but some leaders of that community expressed their dissatisfaction with the choice of candidate. There was heavy competition for the Congress ticket in Shiggamvi constituency. Ajjampir Qadri, Sanjeev Neeralagi, Somanna Nevinamara, Vaishali Kulkarni, Yasir Ahmad Khan Pathan, Raju Kunnoor and many others were ticket aspirants. Finally, Yasir Pathan, a close associate of Minister Jamir Ahmed Khan, won the ticket.

In the meantime, even though the Congress party has given tickets to the Muslim community, it has been defeated every time. Therefore, this time there was a demand to give ticket to Lingayat Panchamasali community candidate who is strong in the constituency. The Congress has again given the ticket to Yasir Pathan, who lost by 35,978 votes against BJP’s Basavaraj Bommai in the last assembly elections.

But senior Congress leader Syed Ajjampir Qadri became an MLA for the first time in 1999. Later he was given ticket by Congress party in 2008, 2013 and 2018 elections consecutively. But he was consistently defeated against Basavaraja Bommai. Hence ticket was denied to him in 2023 assembly elections and ticket was given to Yasir Pathan.

Sayyed Ajjampir Qadri, who has expressed his displeasure over giving ticket to Yasir Pathan, said, “I am saddened that the party did not get the ticket.” I have built and nurtured the Congress party in Shiggaon Constituency. I contested from that party at a time when no one was ready to contest from the Congress ticket in the Shiggamvi constituency. I have sacrificed a lot for the party. But this time, Rowdy Sheeter, who has 17 criminal cases, got a ticket from the party. Police record can be checked if required. Ajjampir says that he is sorry for giving a ticket to a rowdy sheeter.

Tags: Basavaraj BommaiCongressCriminal CaseHaveri

Related News

ಪಹಲ್ಗಾಂ ದಾಳಿಗೆ ಒಂದು ವರ್ಷ: ಭಾರತೀಯ ಸೇನೆಯಿಂದ ಖಡಕ್ ಪೋಸ್ಟ್
ದೇಶ-ವಿದೇಶ

ಪಹಲ್ಗಾಂ ದಾಳಿಗೆ ಒಂದು ವರ್ಷ: ಭಾರತೀಯ ಸೇನೆಯಿಂದ ಖಡಕ್ ಪೋಸ್ಟ್

April 22, 2026
ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ: ಪ್ಯಾಸಿವ್ ಆದಾಯದ ಹೊಸ ಮಾರ್ಗಗಳು
ಪ್ರಮುಖ ಸುದ್ದಿ

ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ: ಪ್ಯಾಸಿವ್ ಆದಾಯದ ಹೊಸ ಮಾರ್ಗಗಳು

April 22, 2026
ಮುಂದಿನ 7 ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಸಾಧ್ಯತೆ: ಹವಾಮಾನ ಇಲಾಖೆಯ ಮುನ್ಸೂಚನೆ
ಪ್ರಮುಖ ಸುದ್ದಿ

ಮುಂದಿನ 7 ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಸಾಧ್ಯತೆ: ಹವಾಮಾನ ಇಲಾಖೆಯ ಮುನ್ಸೂಚನೆ

April 22, 2026
ಇರಾನ್ ವಿರುದ್ಧ ದಾಳಿಗೆ ತಾತ್ಕಾಲಿಕ ‘ಬ್ರೇಕ್’: ಪಾಕಿಸ್ತಾನದ ಮಧ್ಯಸ್ಥಿಕೆಗೆ ಒಪ್ಪಿದ ಡೊನಾಲ್ಡ್ ಟ್ರಂಪ್
ದೇಶ-ವಿದೇಶ

ಇರಾನ್ ವಿರುದ್ಧ ದಾಳಿಗೆ ತಾತ್ಕಾಲಿಕ ‘ಬ್ರೇಕ್’: ಪಾಕಿಸ್ತಾನದ ಮಧ್ಯಸ್ಥಿಕೆಗೆ ಒಪ್ಪಿದ ಡೊನಾಲ್ಡ್ ಟ್ರಂಪ್

April 22, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.