ಜಪಾನಿನ(Japan) ಮಾಜಿ ಪ್ರಧಾನಿ(Former PM) ಶಿಂಜೋ ಅಬೆ(Shinzo abe shot dead).
ಚುನಾವಣಾ ಪ್ರಚಾರ ಭಾಷಣದ ವೇಳೆ 41 ವರ್ಷದ ವ್ಯಕ್ತಿಯೊಬ್ಬನ ಗುಂಡಿನ ದಾಳಿಗೆ ತುತ್ತಾಗಿ ಇಂದು ಶುಕ್ರವಾರ ಕೊನೆಯುಸಿರೆಳೆದರು.
ಜಪಾನ್ನ ಸುದೀರ್ಘ ಸೇವೆ ಸಲ್ಲಿಸಿದ ನಾಯಕ ಅಬೆ ಅವರು, ಇಂದು ಬೆಳಗ್ಗೆ ಪಶ್ಚಿಮ ಜಪಾನ್ನ ನಾರಾದಲ್ಲಿ ಸಂಸತ್ತಿನ ಚುನಾವಣೆಗಾಗಿ ಪ್ರಚಾರ ಮಾಡುವಾಗ ಎದೆಗೆ ಗುಂಡು ಬಿದ್ದ ಪರಿಣಾಮ (Shinzo abe shot dead)ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.

ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಅಬೆ ಅವರ ಸ್ಥಿತಿಯನ್ನು ದೃಢಪಡಿಸಿದರು ಮತ್ತು ಅವರನ್ನು ಉಳಿಸಲು ವೈದ್ಯರು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು ಮಾಧ್ಯಮಗಳಿಗೆ ತಿಳಿಸಿದರು. https://vijayatimes.com/vishweshwar-bhat-comics-on-devanoor-mahadeva/
ಅಬೆ ಅವರು ಭಾಷಣ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಕಿಡಿಗೇಡಿ ಹಿಂದಿನಿಂದ ನೇರವಾಗಿ ಎದೆಗೆ ಗುಂಡು ಹಾರಿಸಿದ್ದಾನೆ. ತುರ್ತು ಚಿಕಿತ್ಸೆಗಾಗಿ ಅವರನ್ನು ಹೆಲಿಕಾಪ್ಟರ್ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು.
ಆದ್ರೆ ದಾರಿ ಮಧ್ಯೆಯೇ ಉಸಿರಾಡುತ್ತಿಲ್ಲ ಮತ್ತು ಅವರ ಹೃದಯವು ನಿಂತಿದೆ ಎಂಬುದು ತಿಳಿದುಬಂದಿಲ್ಲ.
ಬಳಿಕ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂಬುದನ್ನು ವೈದ್ಯರು ಖಚಿತಪಡಿಸಿದ್ದಾರೆ.