35 feet Chhatrapati Shivaji statue falls in Maharashtra like Parasurama statue of Karkala!
Maharashtra: ಕರ್ನಾಟಕದ (Karnataka) ಕಾರ್ಕಳದಲ್ಲಿ ಕಂಚಿನ ಪರಶುರಾಮನ (Parashurama Theme Park) ಪ್ರತಿಮೆ ಹೆಸರಲ್ಲಿ ಪೈಬರ್ನ ಪ್ರತಿಮೆ ನಿರ್ಮಿಸಿ, ನಂತರ ತೆರವುಗೊಳಿಸಿ ಭಾರೀ ವಿವಾದಕ್ಕೀಡಾದ ಬೆನ್ನಲ್ಲೇ ಇದೀಗ ಕಳೆದ ವರ್ಷ ಮಹಾರಾಷ್ಟ್ರದ ಸಿಂಧುದುರ್ಗ್ ಜಿಲ್ಲೆಯ ಕೋಟೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಿದ್ದ 35 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನೆಲಕ್ಕೊರಗಿದೆ.
ನೌಕಾ ದಿನದ ಅಂಗವಾಗಿ ಕಳೆದ ವರ್ಷ ಡಿಸೆಂಬರ್ (December) 4ರಂದು ಪ್ರಧಾನಿ ಮೋದಿ ಅವರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯ ಅನಾವರಣಗೊಳಿಸಿದ್ದರು. ಕಂಚಿನಿಂದ ನಿರ್ಮಿಸಲಾದ ಪ್ರತಿಮೆಯು ಇದ್ದಕ್ಕಿದ್ದಂತೆ ಬಿದ್ದು, ಹಲವಾರು ತುಂಡುಗಳಾಗಿ ಮುರಿದಿದೆ. ಸದ್ಯ ಲೋಹದ ಪಾದಗಳು ಮಾತ್ರ ಪೀಠದ ಮೇಲೆ ನಿಂತಿವೆ.
ಇನ್ನು ರಾಜ್ಯ ಸರಕಾರದ ಕಳಪೆ ನಿರ್ಮಾಣ ಕಾಮಗಾರಿಯಿಂದ ರಾಜ್ಯದ ಮಾನವು ಇಡೀ ದೇಶದ ಎದುರು ಹರಾಜಾಗಿದೆ. ಶಿವಾಜಿ ಮಹಾರಾಜರ ಪ್ರತಿಮೆ ಧ್ವಂಸವು ರಾಜ್ಯ ಸರಕಾರದ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿದೆ, ಎಂದು ಶಿವಸೇನೆ ಶಾಸಕ ವೈಭವ್ ನಾಯಕ್ (Vaibhav Nayak) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿಮೆ ಮುರಿದು ಬಿದ್ದ ಸಂಬಂಧ ಛತ್ರಪತಿ ಶಿವಾಜಿ ಮಹಾರಾಜರ 13ನೇ ನೇರ ವಂಶಸ್ಥರಾದ ಕೊಲ್ಲಾಪುರದ ಛತ್ರಪತಿ ಯುವರಾಜ್ ಸಂಭಾಜಿರಾಜೆ ಅವರು ಏಕನಾಥ್ ಶಿಂಧೆ (Ekanath Shinde)ನೇತೃತ್ವದ ಮಹಾಯುತಿ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಧಾನಿ ಉದ್ಘಾಟಿಸಲು ತರಾತುರಿಯಲ್ಲಿ ನಿರ್ಮಿಸಿದ ಪ್ರತಿಮೆ ಕುಸಿದಿದೆ! ಪ್ರತಿಮೆ ಅನಾವರಣ ಮುನ್ನವೇ ನಾವು ಪ್ರಧಾನಮಂತ್ರಿಗೆ ಪತ್ರ ಬರೆದು ಈ ಪ್ರತಿಮೆಯನ್ನು ಬದಲಾಯಿಸಲು ಒತ್ತಾಯಿಸಿದ್ದೆವು.
ಇದು ಮೂಲತಃ ಆಕಾರವಿಲ್ಲದ ಮತ್ತು ಶಿಲ್ಪದ ಪ್ರಕಾರವಲ್ಲ ಮೂರ್ತಿ ಮತ್ತು ತರಾತುರಿಯಲ್ಲಿ ಇದನ್ನು ಸ್ಥಾಪಿಸಲಾಗಿದೆ ಹಾಗಾಗಿಯೇ ಇಂದು ಪತನಗೊಂಡಿದೆ ಎಂದು ಕಿಡಿ ಕಾರಿದ್ದಾರೆ.ವಿರೋಧ ಪಕ್ಷಗಳು ಪ್ರತಿಮೆಯ ವಿಡಿಯೋಗಳನ್ನು ಹಂಚಿಕೊಂಡು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು (BJP) ಟ್ರೋಲ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ.
Shivaji Statue in Maharashtra Kannada Live Today
Maharashtra: In the name of Parashurama Theme Park, a bronze statue of Pibar was built in Karnataka’s Karkal, and after it was cleared, the 35-feet tall statue of Chhatrapati Shivaji Maharaj inaugurated by Prime Minister Narendra Modi in a fort in Sindhudurg district of Maharashtra has fallen down.
Prime Minister Modi unveiled the statue of Chhatrapati Shivaji Maharaj on December 4 last year as part of Naval Day. The bronze statue suddenly fell and broke into several pieces. At present only the metal feet stand on the pedestal.
Due to the poor construction work of the state government, the people of the state are auctioned in front of the entire country. Shiv Sena MLA Vaibhav Nayak expressed displeasure that the destruction of the statue of Shivaji Maharaj is a mirror of the state government’s irresponsibility.
Chhatrapati Yuvraj Sambhajiraj of Kolhapur, who is the 13th direct descendant of Chhatrapati Shivaji Maharaj, has severely criticized the Mahayuti government led by Ekanath Shinde in connection with the broken statue. The statue built in haste to inaugurate the Prime Minister has collapsed! Even before the unveiling of the statue, we had written to the Prime Minister and demanded to change this statue.
It is basically a shapeless and not sculptural statue and hastily erected that is why it has collapsed today. Opposition parties have shared videos of the statue and trolled Prime Minister Narendra Modi and the BJP (BJP).