Karnataka:ಜಾತ್ಯಾತೀತ ಜನತಾದಳದ ಮತ್ತೊಂದು ದಳ ಉದುರಿದ್ದು, ಹಾಸನ ಜಿಲ್ಲೆಯ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಎಮ್. ಶಿವಲಿಂಗೇಗೌಡ (K.M.Shivalingegowda)ಮಾರ್ಚ್ 5 ರಂದು ಕಾಂಗ್ರೆಸ್(Congress) ಸೇರುವುದಾಗಿ ಅಧಿಕೃತವಾಗಿ (Shivalingegowda Joining Congress) ಘೋಷಿಸಿದ್ದಾರೆ.
ಚುನಾವಣಾ ಹೊಸ್ತಿಲಲ್ಲಿ ದಳದ ಹಿರಿಯ ನಾಯಕರು ಇಂಥಾ ನಿರ್ಧಾರ ಕೈಗೊಂಡಿರುವುದು ನಿಜವಾಗ್ಲೂ ಜೆಡಿಎಸ್‌ಗೆ ಭಾರೀ ಹೊಡೆತವಾಗಿದೆ. ಹಾಸನ ಜಿಲ್ಲೆಯಲ್ಲಿ ತನ್ನ ಪ್ರಾಬಲ್ಯ ಮೆರೆಯುತ್ತಿದ್ದ ಜೆಡಿಎಸ್‌ಗೆ ಇದು ಜಂಘಾಬಲವನ್ನೇ ಕುಸಿಯುವಂತೆ ಮಾಡಿದೆ.
ಫೆಬ್ರವರಿ 12 ರಂದು ಅರಸೀಕೆರೆಯಲ್ಲಿ ನಡೆದಂತಹ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಶಿವಲಿಂಗೇಗೌಡರ ವಿರುದ್ಧ ಹೆಚ್. ಡಿ.ಕೆ(HDK) ಮಾತನಾಡಿದ್ದು;
ಬಾಣವಾರದ ಅಶೋಕ್ ಎನ್ನುವ ಅಭ್ಯರ್ಥಿಯನ್ನ ಬಿಂಬಿಸಿದ್ದರು. ಅದೇ ದಿನ ರಾಯಚೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಶಿವಲಿಂಗೇಗೌಡ ಕಾಂಗ್ರೆಸ್ ಗೆ ಬರುತ್ತಾರೆ ಅನ್ನೋ ಸೂಚನೆ ನೀಡಿದ್ದರು.

ಕಳೆದ 1 ವರ್ಷದಿಂದ ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಅರಸೀಕೆರೆ(Araseikere) ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಕೆ. ಎಮ್. ಶಿವಲಿಂಗೇಗೌಡ ಅವರು,
ಇನ್ನು ಆ ಗೊಂದಲಕ್ಕೆ ತೆರೆ ಎಳೆದು ಮಾರ್ಚ್ 5 ರಂದು ಅರಸೀಕೆರೆ ತಾಲೂಕಿನ ಗುತ್ತಿನಗೆರೆ ಗ್ರಾಮದಲ್ಲಿ ಆಯೋಜಿಸಿರುವ ಸಂಗೊಳ್ಳಿ ರಾಯಣ್ಣ(Sangoli Rayanna) ಪ್ರತಿಮೆ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ.
ಈ ವೇಳೆ ಶಾಸಕ ಕೆ. ಎಮ್. ಶಿವಲಿಂಗೇಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.
ಜೆಡಿಎಸ್ (JDS)ನಾಯಕರೊಂದಿಗೆ ಭಿನ್ನಾಭಿಪ್ರಾಯ ಇರುವ ಕಾರಣ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಬಗ್ಗೆ ಪದೇ ಪದೇ ಸ್ಪಷ್ಟನೆ (Shivalingegowda Joining Congress) ನೀಡಿದ್ದ ಶಿವಲಿಂಗೇಗೌಡ ಅಂತಿಮವಾಗಿ ಕ್ಷೇತ್ರದ ಜನರ,
ಅಭಿಮಾನಿಗಳ, ಬೆಂಬಲಿಗರ ಸಭೆ ಕರೆದು ತೀರ್ಮಾನ ಮಾಡುತ್ತೇನೆ. ಅವರು ಏನು ಹೇಳುತ್ತಾರೆ ಅದೇ ನನ್ನ ಅಂತಿಮ ತೀರ್ಮಾನ ಎಂದಿದ್ದರು.
ಇದೀಗ ಅದಕ್ಕೂ ಸ್ಷಷ್ಟೀಕರಣವೆಂಬಂತೆ ಬೆಂಬಲಿಗರು ಕಾಂಗ್ರೆಸ್ ಸೇರುವುದಕ್ಕೆ ಗ್ರೀನ್ ಸಿಗ್ನಲ್(Green Signal) ಕೊಟ್ಟಿರುವುದರಿಂದ ಕೆ. ಎಮ್. ಶಿವಲಿಂಗೇಗೌಡ ಮಾರ್ಚ್ 5 ರಂದು ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ.

ಶಿವಲಿಂಗೇಗೌಡರ ಈ ನಿರ್ಧಾರಕ್ಕೇನು ಕಾರಣ? : ಶಿವಲಿಂಗೇಗೌಡರು ತಮ್ಮ ಗಟ್ಟಿ ದನಿ, ಹಳ್ಳಿ ಸ್ಟೈಲ್ ಹಾಗೂ ಒರಟು ನಡೆಗೆ ಫೇಮಸ್(Famous).
ಸಾಕಷ್ಟು ಅಭಿಮಾನ ಬಳಗ ಹೊಂದಿರುವ ಶಿವಲಿಂಗೇಗೌಡರ ರೈತ ಪರ ಕಾಳಜಿ ಭಾರೀ ಮೆಚ್ಚುಗೆ ಗಳಿಸಿದೆ.
ಶಿವಲಿಂಗೇಗೌಡರು ತಮ್ಮದೇ ವರ್ಚಸ್ಸನ್ನು ಹೊಂದಿದ್ದರು. ಅವರ ಬೆಳವಣಿಗೆ ಅನೇಕರ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ ಶಿವಲಿಂಗೇಗೌಡರ ಡೋಂಟ್ ಕೇರ್ ನಡೆ.
ತಪ್ಪು ನಡೆದಾಗ ಪಕ್ಷವನ್ನೇ, ಪಕ್ಷದ ನಾಯಕರನ್ನೇ ಟೀಕಿಸೋ ಗುಣ ಜೆಡಿಎಸ್ ಹೈಕಮಾಂಡ್ ಇರಿಸು ಮುರಿಸು ಉಂಟು ಮಾಡಿತ್ತು. ಇದರಿಂದ ನಾಯಕರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು.
ಆದ್ರೆ ಯಾವಾಗ ಇದು ತಾರಕಕ್ಕೇರಿತೋ ಆಗ ಪಕ್ಷ ಬಿಡುವ ನಿರ್ಧಾರಕ್ಕೆ ಶಿವಲಿಂಗೇಗೌಡರನ್ನು ತಂದು ನಿಲ್ಲಿಸಿತು