ಬೆಂಗಳೂರು, ಫೆ. 10: ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ದಿಲ್ಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ನಟ ಶಿವರಾಜ್‌ಕುಮಾರ್ ಅವರ ಬೆಂಬಲ ವ್ಯಕ್ತವಾಗಿದೆ.
ಬೆಂಗಳೂರಿನಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಶಿವಣ್ಣ, ನನ್ನ ಕೈಲಿ ಅಧಿಕಾರ ಇದ್ದಿದ್ರೆ ರೈತರಿಗಾಗಿ ಎಲ್ಲವನ್ನೂ ಬರ್ದು ಕೊಡ್ತಿದ್ದೆ. ಹೋರಾಟ ಮಾಡ್ತಿರೋ ರೈತರನ್ನ ನೋಡ್ತಿದ್ರೆ ಪಾಪ ಅನಿಸುತ್ತಿದೆ. ಸರ್ಕಾರ ಅವರ ಬಗ್ಗೆ ಗಮನ ಹರಿಸಬೇಕು. ರೈತರ ಬಗ್ಗೆ ಮಾತಾಡೋದೆ ತಪ್ಪು ಅಂದ್ರೆ ಏನ್ಮಾಡೋದು.?” ಎಂದು ಪ್ರಶ್ನಿಸಿದ್ದಾರೆ.
ಶಿವರಾಜ್ ಕುಮಾರ್ ಅವರು ರೈತರ ಸಮಸ್ಯೆ ಕೇಂದ್ರಿತ ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಸಿನಿಮಾದಲ್ಲಿ ನಟಿಸಿದ್ದರು. ರೈತರ ಸಂಕಷ್ಟಗಳ ಬಗ್ಗೆ ಈ ಸಿನಿಮಾದಲ್ಲಿ ಬೆಳಕು ಚೆಲ್ಲಲಾಗಿತ್ತು.