Mysore: ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje about modi) ಅವರು ಪ್ರಧಾನಿ ಮೋದಿ ಮಧ್ಯೆ ಪ್ರವೇಶಿಸಬೇಕು ಎಂಬ ಕಾಂಗ್ರೆಸ್
(Congress) ಹಾಗೂ ರಾಜ್ಯ ಸರ್ಕಾರದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕಾವೇರಿ ಸಮಸ್ಯೆ ಉದ್ಭವಿಸಿರುವುದು ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿಯಿಂದ ಈ ವಿಚಾರದಲ್ಲಿ ಪ್ರಧಾನಿ ಮೋದಿ (Modi) ಮಧ್ಯೆ ಪ್ರವೇಶಿಸೋಕೆ ಮೋದಿಜೀ ಕೇವಲ ಕರ್ನಾಟಕ ಹಾಗೂ ತಮಿಳುನಾಡಿಗೆ
ಮಾತ್ರ ಪ್ರಧಾನ ಮಂತ್ರಿ ಅಲ್ಲ ಎಂದು ಕಾಂಗ್ರೆಸ್ (Congress) ವಿರುದ್ಧ ಮಂಗಳವಾರ ಮೈಸೂರಿನಲ್ಲಿ (Shobha Karandlaje about modi) ಮಾತನಾಡಿರುವ ವೇಳೆ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ನಾಯಕರು ಅವರವರ ಹೊಡೆದಾಟದಲ್ಲಿ ಮುಳುಗಿದ್ದಾರೆ, ತಮಿಳುನಾಡನ್ನು ಓಲೈಸಲು ಕೈ ನಾಯಕರು ಮುಂದಾಗಿರಬೇಕು, ಕಾವೇರಿ ಕೊಳ್ಳದ ಅಧ್ಯಯನ ಸರಿಯಾಗಿ ಮಾಡದೇ ಇರಬಹುದು,
ಈ ಕಾರಣದಿಂದಲೇ ಸರ್ಕಾರ ಪ್ರಾಧಿಕಾರಕ್ಕೆ ಸೂಕ್ತ ಮಾಹಿತಿ ನೀಡಿಲ್ಲ, ಸುಪ್ರೀಂ ಕೋರ್ಟ್ಗೆ (Supreme Court) ಸರಿಯಾದ ಅಂಕಿ ಅಂಶಗಳನ್ನು ನೀಡಿಲ್ಲ ಇದರ ಬದಲು ಪ್ರಧಾನಿಯನ್ನು ದೂರುವ
ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮೋದಿಜಿ ಕೇವಲ ತಮಿಳುನಾಡು ಹಾಗೂ ಕರ್ನಾಟಕಕ್ಕೆ ಅಲ್ಲ, ಬೇರೆ ರಾಜ್ಯದ ಜಲ ವಿವಾದ ಸಹ ಪಿಎಂ ಬಗೆಹರಿಸಬೇಕಿದೆ, ಕೇಂದ್ರ ಸರ್ಕಾರ ರಾಜ್ಯದ ಕನ್ನಡಪರ ಸಂಘಟನೆ, ರೈತರ ಜೊತೆಗಿದೆ,
ಇದರಲ್ಲಿ ಯಾವುದೇ ಅನುಮಾನ ಬೇಡ, ಸುಪ್ರೀಂಗೆ-ಪ್ರಾಧಿಕಾರಕ್ಕೆ ಸರಿಯಾಗಿ ಮಾಹಿತಿ ಯಾಕೆ ಕೊಟ್ಟಿಲ್ಲ, ಸಿಎಂ, ಡಿಸಿಎಂ (DCM) ದೆಹಲಿಗೆ ಬಂದಾಗಲೂ ನಾನು ಇದನ್ನೇ ಕೇಳಿದ್ದೆ ಎಂದು ಹೇಳಿದರು.
ಇದನ್ನು ಓದಿ: ಮೋದಿಜೀ ಕೇವಲ ಕರ್ನಾಟಕಕ್ಕೆ ಹಾಗೂ ತಮಿಳುನಾಡಿಗೆ ಪ್ರಧಾನಿ ಅಲ್ಲ: ಶೋಭಾ ಕರಂದ್ಲಾಜೆ
- ಭವ್ಯಶ್ರೀ ಆರ್.ಜೆ