Extremist Training Statement in Tamil Nadu: Minister Shobha Apologizes
Bengaluru: ರಾಜಧಾನಿಯ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ (Rameswaram Cafe Blast Case), ತಮಿಳಿಗರ ವಿರುದ್ಧದ ಹೇಳಿಕೆಗೆ ಕ್ಷಮೆಯಾಚಿಸಿದ್ದು, ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಕೋರ್ಟ್ ಗೆ ಶೋಭಾ ಕರಂದ್ಲಾಜೆ ಮನವಿ ಸಲ್ಲಿಸಿದ್ದಾರೆ.
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಆರೋಪಿ ತಮಿಳುನಾಡಿನಲ್ಲಿ (Tamilnadu) ತರಬೇತಿ ಪಡೆದಿದ್ದ ಬಗ್ಗೆ ಕೇಂದ್ರ ಸಚಿವೆ ಶೋಭಾ ಹೇಳಿಕೆ ನೀಡಿದ್ದರು. ಹೇಳಿಕೆ ವಿವಾದ ಸೃಷ್ಟಿಸಿದ್ದಲ್ಲೆ ತಮಿಳುನಾಡಿನ ಮಧುರೈನಲ್ಲಿ ಶೋಭಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಶೋಭಾ ಈಗ ಹೇಳಿಕೆ ಹಿಂಪಡೆದು, ಕ್ಷಮೆಯಾಚಿಸಿ ಪ್ರಕರಣ ರದ್ದು ಪಡಿಸಲು ಅಫಿಡವಿಟ್ ಸಲ್ಲಿಸಿದ್ದಾರೆ.
ಬಿಜೆಪಿ ಸಚಿವೆ ಶೋಭಾ (Shobha Karandlaje) ಕೋರ್ಟ್ ಗೆ ಸಲ್ಲಿಸಿರುವ ಮನವಿಯಲ್ಲಿ ತಮಿಳುನಾಡಿನ ಇತಿಹಾಸ, ಶ್ರೀಮಂತ ಸಂಸ್ಕೃತಿ, ಸಂಪ್ರದಾಯ ಹಾಗೂ ಜನತೆ ಬಗೆಗೆ ಗೌರವವಿದ್ದು, ತಮಿಳುನಾಡಿನ ಜನರ ಭಾವನೆಗಳನ್ನು ಕೆರಳಿಸುವ ಉದ್ದೇಶವಿಲ್ಲ ಎಂದು ತಿಳಿಸಿದ್ದಾರೆ. ನನ್ನ ಹೇಳಿಕೆಯಿಂದ ತಮಿಳು ಜನರ ಭಾವನೆಗೆ ಧಕ್ಕೆಯಾಗಿದ್ದರೆ ಮತ್ತೊಮ್ಮೆ ಕ್ಷಮೆಯಾಚಿಸುವೆ, ನನ್ನ ಮನವಿ ಸ್ವೀಕರಿಸಿ ಪ್ರಕರಣ ರದ್ದು ಪಡಿಸುವಂತೆ ಶೋಭಾ ಅಫಿಡವಿಟ್ (Affidavit)ನಲ್ಲಿ ಕೇಳಿಕೊಂಡಿದ್ದಾರೆ.
ತಮಿಳುನಾಡಿನ ಮಧುರೈ ನಿವಾಸಿ ಸಿ ತ್ಯಾಗರಾಜನ್ (C Tyagarajan) ಸಚಿವೆ ಶೋಭಾ ವಿರುದ್ಧ ಮಾರ್ಚ್ 20 ರಂದು ದೂರು ಸಲ್ಲಿಸಿದ್ದರು, ಶೋಭಾ ವಿರುದ್ಧ ಸೆಕ್ಷನ್ 153 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು), 153A (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆಯ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವ ದುರಾಲೋಚನೆ ಇದೆ ಎಂದು ದೂರಿದ್ದರು. ಈ ಹಿನ್ನಲೆಯಲ್ಲಿ ಕೋರ್ಟ್ನಲ್ಲಿ 505 (1)(ಬಿ) ಮತ್ತು 505 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ರದ್ದು ಪಡಿಸಲು ಶೋಭಾ ಕರಂದ್ಲಾಜೆ ಮನವಿ ಸಲ್ಲಿಸಿದ್ದು ಕೋರ್ಟ್ (Court) ಮುಂದಿನ ನಡೆ ಬಗ್ಗೆ ಗಮನ ಸೆಳೆದಿದೆ. ಸದಾ ವಿವಾದದ ಕೇಂದ್ರವಾಗುತ್ತಿರುವ ಸಚಿವೆ ಶೋಭಾಗೆ ಹೇಳಿಕೆಗಳೇ ಕಾನೂನು ತೊಡಕು ತರುತ್ರಿರುವುದು ಸ್ವಪಕ್ಷೀಯರಲ್ಲಿ ಅಸಹನೆ ಮೂಡಿಸುತ್ತಿರುವುದು ಸುಳ್ಳಲ್ಲ.
Shobha Karandlaje apologises to TN People Trending kannada
Bengaluru: In the Rameswaram Cafe Blast Case of the capital city, they have apologized for their statement against Tamilians and have filed a petition to the court seeking cancellation of the case against them.
Union Minister Shobha had made a statement about the accused in the Rameswaram cafe blast case having received training in Tamilnadu. A case was registered against Shobha in Madurai, Tamil Nadu, where the statement created a controversy. In this background, Shobha has now retracted her statement, apologized and submitted an affidavit to cancel the case.
BJP minister Shobha Karandlaje has submitted a petition to the court saying that she has respect for the history, rich culture, tradition and people of Tamil Nadu and has no intention to upset the sentiments of the people of Tamil Nadu. I apologize again if my statement has hurt the sentiments of Tamil people, Shobha has requested in her affidavit to accept my request and cancel the case.
C Tyagarajan, a resident of Madurai, Tamil Nadu, had filed a complaint against Minister Shobha on March 20, under Sections 153 (incitement with intent to cause riot), 153A (fostering hatred between groups on grounds of religion, race, place of birth, residence, language) against Shobha. In this background, a case was registered in the court under Sections 505 (1)(b) and 505.
Shobha Karandlaje filed a petition to cancel this case and the Court drew attention to the next step. It is not a lie that Minister Shobha, who is always at the centre of controversy, is facing legal trouble, which is causing impatience among independents.