- ಮತ್ತೆ ಹೆಚ್ಚಾಗಲಿದೆ ಮದ್ಯದ ದರ (Shock for liquor lovers)
- ಎಣ್ಣೆ ಪ್ರಿಯಕರಿಗೆ 3ನೇ ಬಾರಿಗೆ ಶಾಕ್..!
- ರಾಜ್ಯ ಸರ್ಕಾರ ನೀಡಿರೋ ಟಾರ್ಗೆಟ್ ರೀಚ್ ಮಾಡಲು ಅಬಕಾರಿ ಇಲಾಖೆಯಿಂದ ಮತ್ತೊಮ್ಮೆ ಮದ್ಯದ ದರ ಹೆಚ್ಚಳ
Bengaluru: ಕರ್ನಾಟಕ ಕಾಂಗ್ರೆಸ್ ಸರ್ಕಾರವು (Congress Govt) ಮತ್ತೊಮ್ಮೆ ಮದ್ಯ ಪ್ರಿಯರಿಗೆ ಶಾಕ್ ನೀಡುವುದಕ್ಕೆ ಮುಂದಾಗಿದೆ. ರಾಜ್ಯ ಸರ್ಕಾರವು (State Govt) ಈಗಾಗಲೇ ಎರಡು ವರ್ಷದ ಅವಧಿಯಲ್ಲಿ ಮೂರು ಬಾರಿ ಮದ್ಯದ ಬೆಲೆಯನ್ನು ಏರಿಕೆ ಮಾಡಿದ್ದು. ಮದ್ಯ ಪ್ರಿಯರಿಗೆ ಕಿಕ್ ದುಬಾರಿ ಮಾಡಿದೆ.
ಇದೀಗ ಮತ್ತೊಮ್ಮೆ ಸದ್ದಿಲ್ಲದೆ ಮದ್ಯದ ಬೆಲೆ ಏರಿಕೆ (Price rise) ಮಾಡಲು ಮುಂದಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಲೆ ಏರಿಕೆಯ ನಂತರ ಇದೀಗ ಮತ್ತೊಂದು ಬೆಲೆ ಏರಿಕೆಯ ಸರದಿ ಶುರುವಾಗಿದೆ. ಮದ್ಯದ ಬೆಲೆ ಏರಿಕೆಯಿಂದಾಗಿ ಈಗಾಗಲೇ ಮದ್ಯ ಮಾರಾಟದಲ್ಲಿ ಭಾರೀ ಕುಸಿತ ಕಂಡಿದೆ. ಬಿಯರ್ ಸೇಲ್ ಕುಸಿದಿದೆ.
ಮದ್ಯ ಮಾರಾಟ ಕಂಪನಿಗಳು ಯಾವುದೇ ಕಾರಣಕ್ಕೂ ಬೆಲೆ ಏರಿಕೆ ಮಾಡಬೇಡಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ (State Congress government) ಮನವಿ ಮಾಡಿದೆ. ಇದರ ನಡುವೆ ಮತ್ತೊಮ್ಮೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ.
ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಬೆಲೆ ಏರಿಕೆ ಮಾಡಲಾಗುತ್ತಿದೆ. ಬಸ್, ಮೆಟ್ರೋ, ಹಾಲು, ಡೀಸೆಲ್ ತೆರಿಗೆ, (Bus, metro, milk, diesel tax) ವಿದ್ಯುತ್ ಸುಂಕ ಹಾಗೂ ಹಾಲಿನ ಬೆಲೆ ಹೆಚ್ಚಿಸಲಾಗಿದೆ. ಸರ್ಕಾರವು ಈ ಬಾರಿ ಬಜೆಟ್‌ನಲ್ಲೂ (Budget) ಮದ್ಯದ ಬೆಲೆಗೆ ಸಂಬಂಧಿಸಿದಂತೆ ಯಾವುದೇ ಮಹತ್ವದ ಕ್ರಮವನ್ನು ತೆಗೆದುಕೊಂಡಿರಲಿಲ್ಲ. ಆದರೆ ಇದೀಗ ಏಕಾಏಕಿ ಮತ್ತೆ ಮದ್ಯಗಳ (Alcohol) ಬೆಲೆ ಏರಿಕೆಗೆ ಕೈಹಾಕಿದೆ.
ಇದೀಗ ಕರ್ನಾಟಕದಲ್ಲಿ ಮದ್ಯದ ಮೇಲೆ ಬೆಲೆ ಏರಿಕೆ ಮಾಡುವುದಕ್ಕೆ ಸದ್ದಿಲ್ಲದೆ ಸಿದ್ಧತೆ ಶುರುವಾಗಿದೆ.ಕರ್ನಾಟಕದಲ್ಲಿ ಮದ್ಯದ ಬೆಲೆ (Price of alcohol) ದುಬಾರಿ ಆಗಿರುವಾಗಲೇ ಮದ್ಯದ ಬೆಲೆಯನ್ನು ಪ್ರತಿ ಪ್ರತಿ ಮೂರು ತಿಂಗಳಿಗೊಮ್ಮೆ 10 ರೂಪಾಯಿ ಯಿಂದ 15 ರೂಪಾಯಿ ಹೆಚ್ಚಳ ಹಾಗೂ ಬಿಯರ್ ಬೆಲೆಯನ್ನು ಈಗ ಇರುವ ಬೆಲೆಗಿಂತ ಶೇ.10% ರಷ್ಟು ಹೆಚ್ಚಳ ಮಾಡಲು ಭರ್ಜರಿ ಸಿದ್ಧತೆ ಶುರುವಾಗಿದೆ.

ಈ ಸಂಬಂಧ ಕರ್ನಾಟಕ ಸರ್ಕಾರದ ಅಬಕಾರಿ ಇಲಾಖೆಯಿಂದ ಮಂಗಳವಾರ ಸಂಜೆ (Tuesday evening) ಅಧಿಸೂಚನೆ ಹೊರಡಿಸಲಾಗಿದೆ. ಇದು ಮದ್ಯ ಪ್ರಿಯರಿಗೆ (Alcohol lovers) ಮತ್ತೊಂದು ಶಾಕ್ ನೀಡಿದೆ. ಇನ್ಮುಂದೆ ಹೆಚ್ಚು ಕಿಕ್ ಬೇಕಾದರೆ ಹೆಚ್ಚು ದುಡ್ಡು ಪಾವತಿ ಮಾಡಬೇಕಾಗುತ್ತದೆ.
ರಾಜ್ಯದಲ್ಲಿ ಮದ್ಯದ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಅಬಕಾರಿ ಇಲಾಖೆ ಮಂಗಳವಾರ ಅಧಿಸೂಚನೆ (Notification on Tuesday) ಹೊರಡಿಸಿದೆ. ಹೊಸ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಜನರಿಂದ ಆಕ್ಷೇಪಣೆಗಳನ್ನು ಸಲ್ಲಿಸುವುದಕ್ಕೆ 7 ದಿನ ಕಾಲಾವಕಾಶ ಕೊಟ್ಟಿದೆ. ಸರ್ಕಾರದ ಹೊಸ (Government’s new) ಅಧಿಸೂಚನೆಯ ಅನ್ವಯ, ವಿಸ್ಕಿ, ಜಿನ್ ಹಾಗೂ ರಮ್ ಸೇರಿದಂತೆ ವಿವಿಧ ಮದ್ಯಗಳ ಬೆಲೆ ಏರಿಕೆಯಾಗಲಿದೆ. ಈ ಮದ್ಯದ ಬೆಲೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ 10 ರೂಪಾಯಿ ಯಿಂದ 15 ರೂಪಾಯಿ ಹೆಚ್ಚಳ ಮಾಡುವುದಕ್ಕೆ ನಿರ್ಧರಿಸಲಾಗಿದೆ.
ಇದನ್ನೂ ಓದಿ: http://ಬೆಂಗಳೂರಿಗಿಂತ ಮುಂಬೈ ರಸ್ತೆಗಳು ಉತ್ತಮ: ಡಿ.ಕೆ ಶಿವಕುಮಾರ್‌ಗೆ ಪತ್ರ ಬರೆದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ
ಇದರಲ್ಲಿ ಬಿಯರ್, ಟಾಡಿ ಹಾಗೂ ವೈನ್ (Beer, body and wine) ಮದ್ಯಗಳನ್ನು ಸೇರಿಸಿಲ್ಲ.ಇನ್ನು ರಾಜ್ಯ (Shock for liquor lovers) ಸರ್ಕಾರವು ಈ ಬಾರಿ ಅಬಕಾರಿ ಇಲಾಖೆಗೆ ಬರೋಬ್ಬರಿ (Excise Department) 40,000 ಕೋಟಿ ರೂಪಾಯಿಗಳ ಟಾರ್ಗೆಟ್ ನೀಡಿದೆ. ಹೀಗಾಗಿ, ಈ ಅಬಕಾರಿ ಸುಂಕವನ್ನು ಗಮನದಲ್ಲಿ ಇರಿಸಿಕೊಂಡು ಮದ್ಯದ ಬೆಲೆಯನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಆದರೆ ಮದ್ಯ ಬೆಲೆ ಏರಿಕೆಗೆ ಮದ್ಯ ಕಂಪನಿಗಳು ಹಾಗೂ ಮದ್ಯ ಪ್ರಿಯರಿಂದ ವಿರೋಧ ವ್ಯಕ್ತವಾಗಿದೆ.