Bangalore: ರಾಜ್ಯ ಬಜೆಟ್ (State budget) ಮಂಡನೆಗೂ ಮುನ್ನವೇ ರಾಜ್ಯ ಸರ್ಕಾರ (State Govt) ಮದ್ಯ ಪ್ರಿಯರಿಗೆ (For alcohol lovers) ಬಿಗ್ ಶಾಕ್ ನೀಡಿದ್ದು, ಮತ್ತೊಮ್ಮೆ ದರ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.ಸಾಮಾನ್ಯವಾಗಿ ರಾಜ್ಯ ಬಜೆಟ್ ಮಂಡನೆಯ ವೇಳೆ ಅಬಕಾರಿ ತೆರಿಗೆಯನ್ನು (Excise duty) ಹೆಚ್ಚಿಸಲಾಗುತ್ತದೆ. ಆದರೆ ರಾಜ್ಯ ಸರ್ಕಾರ (State Govt) ಆರ್ಥಿಕ ಸಂಪನ್ಮೂಲಗಳನ್ನು (Financial resources) ತ್ವರಿತವಾಗಿ ಕ್ರೋಡಿಕರಿಸುವ ದೃಷ್ಠಿಯಿಂದ ಶೀಘ್ರವೇ ದರ ಏರಿಕೆಗೆ ಮುಂದಾಗಿದೆ. ಬಜೆಟ್ನಲ್ಲಿ (Budget) ಘೋಷಿಸುವ ನಿರ್ಣಯಗಳು ಮಾರ್ಚ್ನಿಂದ ಜಾರಿಗೆ ಬರುತ್ತವೆ. ಈಗಿನಿಂದಲೇ ಪರಿಷ್ಕೃತ ದರ ಜಾರಿಗೆ ಬರುವುದರಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆದಾಯ ತಂದುಕೊಳ್ಳಬಹುದು ಎಂಬುದು ಸರ್ಕಾರದ ಲೆಕ್ಕಾಚಾರ. ಇನ್ನೊಂದೆಡೆ ಕಳೆದ 6 ತಿಂಗಳ ಹಿಂದೆ ಆಮದು ವಸ್ತುಗಳ (Imported goods) ಮೇಲೆ ಬೆಲೆ ಏರಿಕೆ ಮಾಡಲಾಗಿತ್ತು. ಇದೀಗ ಆಮದು ವಸ್ತುಗಳ ಮೇಲಿನ ಸುಂಕವನ್ನು ಕೂಡಾ ರಾಜ್ಯ ಸರ್ಕಾರ ಹೆಚ್ಚಳ ಮಾಡಿದೆ. 300 ರೂಪಾಯಿ ಒಳಗಡೆ ಇರುವ ಮದ್ಯದ ದರವನ್ನು ಏರಿಕೆ ಮಾಡಲಾಗಿದೆ.

ಯಾವ ಬ್ರಾಂಡ್ ಬೀಯರ್ ದರ ಎಷ್ಟು ಏರಿಕೆ?
ಲೆಜೆಂಡ್ – ಪರಿಷ್ಕೃತ ದರ 145 (100)
ಪವರ್ ಕೂಲ್ – ಪರಿಷ್ಕೃತ ದರ 155(130)
ಬ್ಲ್ಯಾಕ್ ಫೋರ್ಟ್ – ಪರಿಷ್ಕೃತ ದರ 160(145)
ಹಂಟರ್ – ಪರಿಷ್ಕೃತ ದರ 190 (180)
ವುಡ್ಪೆಕರ್ ಕ್ರೆಸ್ಟ್ – ಪರಿಷ್ಕೃತ ದರ 250(240)
ವುಡ್ಪೆಕರ್ ಗ್ಲೈಡ್ – ಪರಿಷ್ಕೃತ ದರ 240(230)
ಹಾಲು, ನೀರು, ವಿದ್ಯುತ್, ಸರ್ಕಾರಿ ಆಸ್ಪತ್ರೆ ದರಗಳು, ಬಸ್, ಸರ್ಕಾರಿ ಬಾಂಡ್ಗಳು, ನೋಂದಣಿ ಶುಲ್ಕ ಸೇರಿದಂತೆ ಅನೇಕ ವಸ್ತುಗಳು ಹಾಗೂ ಸೇವೆಗಳ ದರಗಳನ್ನು ಏರಿಕೆ ಮಾಡಲಾಗಿದೆ. ಮದ್ಯದ ದರ ನಿರಂತರವಾಗಿ ಏರಿಕೆ ಮಾಡಲಾಗುತ್ತಿದೆ, ಗ್ಯಾರಂಟಿ ಯೋಜನೆಗಳಿಗೆ (guarantee schemes) ಹಣ ಕ್ರೋಡಿಕರಿಸುವ ದೃಷ್ಠಿಯಿಂದ ರಾಜ್ಯ ಸರ್ಕಾರ ದರ ಏರಿಕೆ ಮಾಡುತ್ತಿದೆ ಎನ್ನಲಾಗಿದೆ.