Shocking News For Golgappa Lovers: Statewide Food Department Testing, Ban Likely.
Bengaluru: ಗೋಲ್ ಗಪ್ಪಾ (Golgappa) ಗುಣಮಟ್ಟದ ಬಗ್ಗೆ ಕರ್ನಾಟಕದ ಆಹಾರ ಇಲಾಖೆ ಆತಂಕ ವ್ಯಕ್ತಪಡಿಸಿದ್ದು, ಯೂರಿಯಾ ಮತ್ತು ಹಾರ್ಪಿಕ್ ಬಳಕೆಯ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಗೋಲ್ ಗಪ್ಪಾ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ರಾಜ್ಯದಲ್ಲಿ ಆಹಾರ ಗುಣಮಟ್ಟದ ವಿಚಾರದಲ್ಲಿ ಕಠಿಣ ನಿಲುವು ತಳೆದಿರುವ ಆಹಾರ ಇಲಾಖೆಯೂ ಗೋಬಿ ಮಂಚೂರಿಯಲ್ಲಿ (Gobi Manchurian) ಕೃತಕ ಬಣ್ಣ, ರಾಸಾಯನಿಕ ಬಳಕೆಗೆ ಈಗಾಗಲೇ ನಿರ್ಬಂಧ ವಿಧಿಸಿದೆ. ಅದೇ ರೀತಿ ಸಾರ್ವಜನಿಕ ಸ್ಥಳಗಳಲ್ಲಿ, ಮಾಲ್ಗಳಲ್ಲಿ ಫುಡ್ ಟೆಸ್ಟಿಂಗ್ ಕಿಟ್ (Food Testing Kit) ಇರಿಸಿ ಕಳಪೆ ಗುಣಮಟ್ಟದ ಆಹಾರದ ವಿರುದ್ಧ ಸಮರ ಸಾರಿದೆ. ಇದೀಗ ಜನಪ್ರಿಯ ತಿನಿಸು ಗೋಲ್ ಗಪ್ಪಾ ಮೇಲೆಯೂ ನಿರ್ಬಂಧದ ತೂಗುಗತ್ತಿ ಎದುರಾಗಿದೆ. ಇದರಿಂದ ಗೋಲ್ ಗಪ್ಪಾ ಪ್ರಿಯರಿಗೂ ಶಾಕ್ ಎದುರಾಗುವ ಸಾಧ್ಯತೆ ಇದೆ.
ಗೋಲ್ ಗಪ್ಪಾದ ಗುಣಮಟ್ಟದ ಮೇಲೆ ಅನೇಕ ದೂರುಗಳು ದಾಖಲಾದ ಹಿನ್ನೆಲೆ ಗೋಲ್ ಗಪ್ಪಾ ಪೂರಿ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಆಹಾರ ಇಲಾಖೆಯಿಂದ ಫುಡ್ ಟೆಸ್ಟಿಂಗ್ ಕಾರ್ಯಾಚರಣೆ ಮುಂದುವರಿದಿದ್ದು, ಗೋಲ್ ಗಪ್ಪಾವನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಕರ್ನಾಟಕದಾದ್ಯಂತ ಗೋಲ್ ಗಪ್ಪಾ ಮಾದರಿ ಸಂಗ್ರಹ
ಬೆಂಗಳೂರಿನಲ್ಲಿ (Bengaluru) ರ್ಯಾಂಡಮ್ ಆಗಿ ಗೋಲ್ ಗಪ್ಪಾ ಮಾದರಿ ಸಂಗ್ರಹಿಸಿ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಬೆಂಗಳೂರು ಮಾತ್ರವಲ್ಲದೆ, ಕರ್ನಾಟಕದಾದ್ಯಂತ 200ಕ್ಕೂ ಹೆಚ್ಚು ಕಡೆ ಗೋಲ್ ಗಪ್ಪಾ ಮಾದರಿ ಸಂಗ್ರಹಿಸಲಾಗಿದ್ದು, ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಆಹಾರದ ಗುಣಮಟ್ಟ ಹಾಗೂ ಸುರಕ್ಷತೆ ಖಾತರಿಪಡಿಸಿಕೊಳ್ಳಲು ಸಾರ್ವಜನಿಕ ಸ್ಥಳಗಳಲ್ಲಿ “ರ್ಯಾಪಿಡ್ ಫುಡ್ ಟೆಸ್ಟಿಂಗ್ ಕಿಟ್”ಗಳನ್ನು ಸ್ಥಾಪಿಸಿದ ಬೆನ್ನಲ್ಲೇ ಆಹಾರ ಇಲಾಖೆ ಗೋಲ್ ಗಪ್ಪಾ ವಿರುದ್ಧವೂ ಕಾರ್ಯಾಚರಣೆ ಆರಂಭಿಸಿದೆ.
ಆರೋಗ್ಯದ ಮೇಲೆ ಗೋಲ್ ಗಪ್ಪಾ ಪರಿಣಾಮದ ಅಧ್ಯಯನ
ಗೋಲ್ ಗಪ್ಪಾಗೆ ಬಳಸುವ ಪೂರಿ ಹೇಗೆ ತಯಾರು ಮಾಡುತ್ತಾರೆ? ಅದಕ್ಕೆ ಏನೆಲ್ಲಾ ಪದಾರ್ಥ ಹಾಕಲಾಗುತ್ತದೆ? ಇದರಿಂದ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರಲಿದೆ ಎಂಬುದನ್ನು ತಿಳಿಯಲು ಆಹಾರ ಇಲಾಖೆ ಮುಂದಾಗಿದೆ.
ಗೋಲ್ ಗಪ್ಪಾದಲ್ಲಿ ಯೂರಿಯಾ, ಹಾರ್ಪಿಕ್!
ಗೋಲ್ ಗಪ್ಪಾ ರುಚಿ ಹೆಚ್ಚಳಕ್ಕೆ ಯೂರಿಯಾ ಗೊಬ್ಬರ ಹಾಗೂ ಹಾರ್ಪಿಕ್ (Urea fertilizer and Harpic) ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಬೇರೆ ರಾಜ್ಯಗಳಲ್ಲಿ ಇತಂಹ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ಕರ್ನಾಟಕ ಆಹಾರ ಹಾಗೂ ಗುಣಮಟ್ಟ ಇಲಾಖೆ ಎಚ್ಚೆತ್ತುಕೊಂಡಿದ್ದು, ಕ್ರಮಕ್ಕೆ ಮುಂದಾಗಿದೆ.
Shocking News For Golgappa Lovers Kannada Latest
Bengaluru: The food department of Karnataka has expressed concern about the quality of Gol Gappa, and in the wake of allegations of use of urea and harpic, samples of Gol Gappa are being collected and tested across the state.
The Food Department, which has taken a strict stance on food quality in the state, has already banned the use of artificial colors and chemicals in Gobi Manchurian. Similarly, Food Testing Kit has been placed in public places and malls to fight against poor quality food. Now popular food Gol Gappa is also facing a ban. This is likely to come as a shock to Gol Gappa lovers.
The food department is keeping an eagle eye on Gol Gappa Puri manufacturing units in the wake of many complaints about the quality of Gol Gappa. The food testing operation has been continued by the food department and Gol Gappa is also being tested.
Collection of Gol Gappa samples from across the globe
Gol Gappa samples are being collected randomly in Bangalore (Bengaluru) and are being tested. Not only Bangalore, more than 200 places across Karnataka have collected Gol Gappa samples and are undergoing testing. After installing “Rapid Food Testing Kits” in public places to ensure food quality and safety, the Food Department has also started operations against Gol Gappa.
A study of the effect of Gol Gappa on health
How is the puri used for Gol Gappa prepared? What ingredients are added to it? The food department has come forward to know what effect this will have on health.
Urea, Harpic in Goal Gappa!
It has been alleged that Urea fertilizer and Harpic are being used to increase the taste of Gol Gappa. Similar allegations have been heard in other states. Following this, the Karnataka Food and Quality Department has woken up and taken action.