- ಪಾವಿತ್ರ್ಯತೆಗೆ ಮೊದಲ ಆದ್ಯತೆ: ದೇವಾಲಯಗಳಲ್ಲಿ (shooting videos banned in temple) ಶೂಟಿಂಗ್‌ಗೆ ಹೊಸ ಮಾರ್ಗಸೂಚಿ
- ಸಾಮಾಜಿಕ ಜಾಲತಾಣಗಳ ದುರುಪಯೋಗ ತಡೆಯಲು ಮುಜರಾಯಿ ಇಲಾಖೆಯ ಮಹತ್ವದ ನಿರ್ಧಾರ
- ಸಿನಿಮಾ, ಧಾರಾವಾಹಿ, ಯೂಟ್ಯೂಬ್ ಚಿತ್ರೀಕರಣಕ್ಕೂ ಶುಲ್ಕ ವಿಧಿಸಲು ಸೂಚನೆ
Bengaluru: ಸಾಮಾಜಿಕ ಜಾಲತಾಣಗಳ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ, ದೇವಸ್ಥಾನಗಳು (shooting videos banned in temple) ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ರೀಲ್ಸ್ ಹಾಗೂ ವೀಡಿಯೋ ಚಿತ್ರೀಕರಣ ಹೆಚ್ಚುತ್ತಿರುವುದು ಸರ್ಕಾರದ ಗಮನ ಸೆಳೆದಿದೆ.
ಈ ಹಿನ್ನೆಲೆ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದ್ದು, ಮುಜರಾಯಿ (Muzrai) ವ್ಯಾಪ್ತಿಯ ದೇವಾಲಯಗಳಲ್ಲಿ ನಿಯಂತ್ರಿತ ಚಿತ್ರೀಕರಣಕ್ಕೆ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ.

ಇನ್ನುಮುಂದೆ ದೇವಸ್ಥಾನಗಳಲ್ಲಿ ಯಾವುದೇ ರೀತಿಯ ಶೂಟಿಂಗ್ (Shooting) ಮಾಡಲು ಪೂರ್ವಾನುಮತಿ (shooting videos banned in temple) ಕಡ್ಡಾಯವಾಗಿದ್ದು, ಆಯ್ಕೆ ಮಾಡಿದ ಸ್ಥಳಗಳಲ್ಲಿ ಮಾತ್ರ ಚಿತ್ರೀಕರಣಕ್ಕೆ ಅವಕಾಶ ನೀಡಲಾಗುತ್ತದೆ. ಜೊತೆಗೆ ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ದೇವಸ್ಥಾನಗಳ ಪಾವಿತ್ರ್ಯತೆ ಕಾಪಾಡುವುದು ಹಾಗೂ ಅನಾವಶ್ಯಕ ಚಟುವಟಿಕೆಗಳನ್ನು ತಡೆಯುವುದು ಸರ್ಕಾರದ ಉದ್ದೇಶವೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ (Ramalinga Reddy) ಮಾಹಿತಿ ನೀಡಿದ್ದು, ರಾಜ್ಯದ ಎ ಮತ್ತು ಬಿ ವರ್ಗದ ಎಲ್ಲಾ ಮುಜರಾಯಿ ದೇವಾಲಯಗಳಿಗೆ ಈ ನಿಯಮ ಅನ್ವಯವಾಗಲಿದೆ ಎಂದಿದ್ದಾರೆ.
ಸಿನಿಮಾ, ಧಾರಾವಾಹಿ, ಸಾಕ್ಷ್ಯಚಿತ್ರ, ವಾಣಿಜ್ಯ ಜಾಹೀರಾತುಗಳು ಸೇರಿದಂತೆ ಯಾವುದೇ ವೃತ್ತಿಪರ ಚಿತ್ರೀಕರಣಕ್ಕೂ ಮುಂಚಿತವಾಗಿ ಇಲಾಖೆಯಿಂದ ಅನುಮತಿ ಪಡೆಯಬೇಕು.
2003 ಮತ್ತು 2013ರಲ್ಲಿ ಜಾರಿಗೆ ತಂದಿದ್ದ ನಿಯಮಗಳು ಇತ್ತೀಚೆಗೆ ಸಡಿಲಗೊಂಡಿದ್ದರೂ, ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ದೇವಸ್ಥಾನಗಳಲ್ಲಿ ನಿಯಂತ್ರಣವಿಲ್ಲದ ರೀಲ್ಸ್ ಚಿತ್ರೀಕರಣ ಹೆಚ್ಚಿದ ಕಾರಣ ಮತ್ತೊಮ್ಮೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಅನಧಿಕೃತ ಚಿತ್ರೀಕರಣದಿಂದ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿರುವ ಬಗ್ಗೆ ದೂರಿಗಳು ಬಂದಿದ್ದವು ಎನ್ನಲಾಗಿದೆ.
ಸಚಿವರು ಸ್ಪಷ್ಟಪಡಿಸಿದಂತೆ, ಸರ್ಕಾರದ ಉದ್ದೇಶ ಕೇವಲ ಆದಾಯ ಸಂಗ್ರಹವಲ್ಲ. ದೇವಸ್ಥಾನಗಳ ಧಾರ್ಮಿಕ ವಾತಾವರಣವನ್ನು ಕಾಪಾಡುವುದು ಮುಖ್ಯ ಗುರಿಯಾಗಿದೆ.
ಕೆಲವರು ಅನುಮತಿ ಇಲ್ಲದೆ ನೃತ್ಯ, ಹಾಸ್ಯ ಅಥವಾ ಅಸಂಬಂಧಿತ ವಿಷಯಗಳ ವೀಡಿಯೋಗಳನ್ನು ದೇವಾಲಯ ಆವರಣದಲ್ಲಿ ಚಿತ್ರೀಕರಿಸುತ್ತಿರುವುದು ಗಮನಕ್ಕೆ ಬಂದಿದೆ.
ಇದರಿಂದ ದೇವಾಲಯದ ಶಿಸ್ತು ಮತ್ತು ಪಾವಿತ್ರ್ಯತೆ ಹಾನಿಗೊಳಗಾಗುವ ಸಾಧ್ಯತೆ ಇದೆ. ಹೀಗಾಗಿ ಇನ್ನುಮುಂದೆ ದೇವಾಲಯದ ಆಡಳಿತ ಮಂಡಳಿಯ ಅನುಮತಿ ಇಲ್ಲದೆ
ಯಾವುದೇ ರೀತಿಯ ವೀಡಿಯೋ ಅಥವಾ ರೀಲ್ಸ್ ಮಾಡಲಾಗುವುದಿಲ್ಲ. ನಿಯಮ ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಇದಲ್ಲದೆ, ಮುಜರಾಯಿ ಇಲಾಖೆಗೆ ಸೇರಿದ ಆಸ್ತಿಗಳ ಸಮೀಕ್ಷೆಯ ಕುರಿತೂ ಸಚಿವರು ಮಾಹಿತಿ ನೀಡಿದ್ದಾರೆ.
ರಾಜ್ಯದಾದ್ಯಂತ ಸುಮಾರು 40 ಸಾವಿರ ಆಸ್ತಿಗಳು ಇಲಾಖೆಗೆ ಸೇರಿದ್ದು, ಅದರಲ್ಲಿ 36 ಸಾವಿರ ಎಕರೆ ಜಮೀನು ಮತ್ತು ನಗರ ಪ್ರದೇಶಗಳಲ್ಲಿ ಸುಮಾರು 4 ಸಾವಿರ ಆಸ್ತಿಗಳು ಒಳಗೊಂಡಿವೆ.
ಇವುಗಳಲ್ಲಿ 17 ಸಾವಿರ ಎಕರೆ ಜಮೀನು ದೇವಸ್ಥಾನಗಳ ಹೆಸರಿಗೆ ದಾಖಲೆಯಾಗಿದ್ದು, ಉಳಿದ ಆಸ್ತಿಗಳ ವರ್ಗಾವಣೆ ಪ್ರಕ್ರಿಯೆ ಮುಂದುವರಿದಿದೆ.
2023ರ ಮೊದಲು ಕೇವಲ 3,500 ಆಸ್ತಿಗಳು ಮಾತ್ರ ದಾಖಲಾಗಿದ್ದವು ಎಂಬುದನ್ನು ಉಲ್ಲೇಖಿಸಿ, ಕಳೆದ ಕೆಲವು ವರ್ಷಗಳಲ್ಲಿ ದೊಡ್ಡ ಪ್ರಮಾಣದ ಆಸ್ತಿ ಗುರುತಿಸುವಿಕೆ ಮತ್ತು ದಾಖಲೆ ಪ್ರಕ್ರಿಯೆ ನಡೆದಿದೆ ಎಂದು ಹೇಳಿದ್ದಾರೆ.
ಮುಂದಿನ ಒಂದು ವರ್ಷದೊಳಗೆ ಎಲ್ಲಾ ಆಸ್ತಿಗಳೂ ದೇವಸ್ಥಾನಗಳ ಹೆಸರಿಗೆ ತರಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಲಾಗಿದೆ.
ಒಟ್ಟಾರೆ, ಈ ಹೊಸ ಸುತ್ತೋಲೆ ದೇವಸ್ಥಾನಗಳಲ್ಲಿ ಶಿಸ್ತಿನ ವಾತಾವರಣ ನಿರ್ಮಿಸಲು ಹಾಗೂ ಧಾರ್ಮಿಕ ಸ್ಥಳಗಳ ಗೌರವ ಕಾಪಾಡಲು ಸಹಕಾರಿಯಾಗಲಿದೆ ಎಂದು ಸರ್ಕಾರ ನಂಬಿದೆ.
ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಪ್ರತಿಯೊಬ್ಬರೂ ರೀಲ್ಸ್ , ಯೂಟ್ಯೂಬ್ ಗೆ (Youtube) ವೀಡಿಯೊ ಚಿತ್ರೀಕರಣ ಮಾಡುವ ಸಂದರ್ಭದಲ್ಲಿಯೂ,
ಪವಿತ್ರ ಸ್ಥಳಗಳ ಗೌರವ ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂಬ ಸಂದೇಶವನ್ನು ಈ ಕ್ರಮ ನೀಡುತ್ತದೆ.
ಇದನ್ನು ಓದಿ : https://vijayatimes.com/tata-motors-introduces-powerful-car-at-low-price/