ಹೊಳಲ್ಕೆರೆ ಆ 19 : ಬಟ್ಟೆ ಅಂಗಡಿ ಮಾಲೀಕ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ.
ಹೊಳಲ್ಕೆರೆ ಇತಿಹಾಸದಲ್ಲೇ ಮೊದಲ ಶೂಟೌಟ್ ಆಗಿದ್ದು ಈ ಘಟನೆಯಿಂದ ಅಕ್ಷರಶಃ ಪಟ್ಟಣವೇ ಬೆಚ್ಚಿಬಿದ್ದಿದೆ. ಮೃತಪಟ್ಟ ವ್ಯೆಕ್ತಿಯನ್ನು ರಾಜಸ್ತಾನ ಮೂಲದ ಸರ್ದಾಪುರ ಗ್ರಾಮದ ಮೂಲಾ ಸಿಂಗ್ ಎಂದು ಗುರುತಿಸಲಾಗಿದೆ. ಈತ ಕಳೆದ ಹಲವು ವರ್ಷಗಳ ಹಿಂದೆ ರಾಜಸ್ತಾನದಿಂದ ಬಂದು ಚಿತ್ರದುರ್ಗ ಜಿಲ್ಲೆಯ ರಾಮಗಿರಿ ಯಲ್ಲಿ ಭವಾನಿ ಟೆಕ್ಸ್ಟೈಲ್ಸ್ ಎಂಬ ಬಟ್ಟೆ ಅಂಗಡಿ ವ್ಯಾಪರ ನಡೆಸುತ್ತಿದ್ದರು. ಇದರ ಜೊತೆಗೆ ವ್ಯಾಪರದ ಉದ್ದೇಶದಿಂದ ಹೊಳಲ್ಕೆರೆ ಪಟ್ಟಣದಲ್ಲಿ ಕೂಡ ಇನ್ನೊಂದು ಅಂಗಡಿ ಕೂಡ ನಡೆಸುತ್ತಿದ್ದರು. ಪಟ್ಟಣದ ಅಂಗಡಿಯನ್ನು ಮೂಲಾ ಸಿಂಗ್ ಅವರೇ ನೋಡಿಕೊಳ್ಳುತ್ತಿದ್ದರು. ಅದರೆ ನಿನ್ನೆ ಎಂದಿನಂತೆ ಕೆಲಸ ಮುಗಿಸಿ ಅಂಗಡಿ ಮುಚ್ಚುವ ವೇಳೆಗೆ ದುಷ್ಕರ್ಮಿಗಳು ಸಾಕಷ್ಟು ಹತ್ತಿರದಿಂದಲೇ ಮೂಲಾಸಿಂಗ್ ತಲೆಗೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಈ ಭೀಕರ ಶೂಟೌಟ್ ಇಂದ ಇಡೀ ಪಟ್ಟಣವೇ ಬೆಚ್ಚಿಬಿದ್ದಿದೆ. ಈ ಕೊಲೆಗೆ ಹಳೆ ದ್ವೇಶ ಕೂಡ ಇರಬಹುದು ಎಂದು ಅಂದಾಜಿಸಲಾಗಿದೆ.
2018ರಲ್ಲಿ ರಾಮಗಿರಿ ಯಲ್ಲಿ ಕಲ್ಯಾಣ್ ಸಿಂಗ್ ಎಂಬ ಚಿನ್ನದ ವ್ಯಾಪರಿಯನ್ನು ಕತ್ತು ಸೀಳಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಮೂಲಾ ಸಿಂಗ್ ಕೂಡ 4 ನೇ ಆರೋಪಿಯಾಗಿದ್ದರು. ಹಾಗೂ ಕೆಲವು ಕಾಲ ಜೈಲಿನಲ್ಲಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದು ಬಟ್ಟೆ ವ್ಯಾಪರ ನಡೆಸುತ್ತಿದ್ದರು. ಈಗ ಆಗಿರುವಂತಹ ಮೂಲಾ ಸಿಂಗ್ ಹತ್ಯೆಗೆ ಹಳೆ ದ್ವೇಶವೂ ಕೂಡ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.