Visit Channel

ಶ್ರೀನಗರ ಗುಂಡಿನ ಚಕಮಕಿ: ೩ ಯೋಧರು ಹುತಾತ್ಮ, ೩ ಉಗ್ರರ ಹತ್ಯೆ

Firing-01-2

ಶ್ರೀನಗರ, ನ. 09: ಪಾಕ್‌ ಉಗ್ರಗಾಮಿಗಳು ಭಾರತಕ್ಕೆ ನುಸುಳುವುದು ಹೊಸತೇನಲ್ಲ. ಅದೇ ರೀತಿ ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿನ ಮಾಚಿಲ್ ಸೆಕ್ಟರ್​ನ ಎಲ್​ಒಸಿಯಲ್ಲಿ ಪಾಕಿಸ್ತಾನದ ಕಡೆಯಿಂದ ಭಾರತದ ಗಡಿಯೊಳಗೆ ನುಸುಳಲು ಉಗ್ರರು ಮಾಡಿದ ಪ್ರಯತ್ನವನ್ನು ಭಾರತದ ಭದ್ರತಾ ಪಡೆಗಳು ವಿಫಲಗೊಳಿಸಿವೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಸೇನಾಧಿಕಾರಿ ಸೇರಿದಂತೆ ನಾಲ್ವರು ಯೋಧರು ಬಲಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮೂವರು ಉಗ್ರರೂ ಹತ್ಯೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೊನ್ನೆ ರಾತ್ರಿ ಒಂದು ಗಂಟೆಯ ಸುಮಾರಿಗೆ ಬಿಎಸ್​ಎಫ್ ಜವಾನರು ಮಾಚಿಲ್ ಸೆಕ್ಟರ್​ನಲ್ಲಿ ಗಸ್ತು ತಿರುಗುತ್ತಿದ್ದ ವೇಳೆಯಲ್ಲಿ ಎಲ್​ಒಸಿ ಬೇಲಿಯ ಬಳಿ ಸಂಶಯಾಸ್ಪದ ಚಲನವಲನಗಳು ಗಮನಕ್ಕೆ ಬಂದಿದ್ದವು. ಆಗ ಉಗ್ರರನ್ನು ಎದಿರುಗೊಂಡಾಗ ಉಗ್ರರು ಗುಂಡಿನ ದಾಳಿ ನಡೆಸಿದರೆನ್ನಲಾಗಿದೆ. ಬೆಳಗ್ಗೆ 4 ಗಂಟೆವರೆಗೂ ನಡೆದ ಗುಂಡಿನ ಕಾಳಗದಲ್ಲಿ ಒಬ್ಬ ಉಗ್ರ ಹಾಗೂ ಒಬ್ಬ ಯೋಧ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.  

ಇದಾದ ಬಳಿಕ ಹೆಚ್ಚಿನ ಭದ್ರತಾ ಪಡೆಗಳನ್ನು ಕರೆಸಲಾಯಿತು. ಒಳನುಸುಳಿದ ಉಗ್ರಗಾಮಿಗಳ ಜಾಡು ಕಂಡುಹಿಡಿಯಲು ಸರ್ವೇಲೆನ್ಸ್ ಸಾಧನಗಳನ್ನ ಬಳಸಿಕೊಳ್ಳಲಾಯಿತು. ನಿನ್ನೆ ಭಾನುವಾರ ಬೆಳಗ್ಗೆ 10:20ಕ್ಕೆ ಉಗ್ರರ ಸ್ಥಳವನ್ನು ಪತ್ತೆ ಹಚ್ಚಿ ಎದಿರುಗೊಳ್ಳಲಾಯಿತು. ಆಗ ನಡೆದ ಗುಂಡಿನ ಕಾಳಗದಲ್ಲಿ ಇನ್ನೂ ಇಬ್ಬರು ಭಯೋತ್ಪಾದಕರು ಹತರಾದರು. ಈ ವೇಳೆ ಮೂವರು ಯೋಧರ ಬಲಿದಾನವಾದರೆ, ಇಬ್ಬರಿಗೆ ಗಾಯಗಳಾಗಿವೆ ಎಂದು ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ಹೇಳಿದ್ದಾರೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.