• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಬಾಹ್ಯಾಕಾಶದಿಂದ ಭೂಮಿಗೆ ಮರಳಲು ಕ್ಷಣಗಣನೆ: ಭಾರತ ಸಾರೇ ಜಹಾಂ ಸೆ ಅಚ್ಛಾ ಎಂದ ಶುಭಾಂಶು ಶುಕ್ಲಾ.

Shwetha Mohan by Shwetha Mohan
in ದೇಶ-ವಿದೇಶ, ಪ್ರಮುಖ ಸುದ್ದಿ, ಮಾಹಿತಿ, ವಿಜಯ ಟೈಮ್ಸ್‌
ಬಾಹ್ಯಾಕಾಶದಿಂದ ಭೂಮಿಗೆ ಮರಳಲು ಕ್ಷಣಗಣನೆ: ಭಾರತ ಸಾರೇ ಜಹಾಂ ಸೆ ಅಚ್ಛಾ ಎಂದ ಶುಭಾಂಶು ಶುಕ್ಲಾ.
0
SHARES
26
VIEWS
Share on FacebookShare on Twitter
  • ಆಕ್ಸಿಯಮ್-4 ಮಿಷನ್‌ನಲ್ಲಿ 60ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ವಿವಿಧ ಕ್ಷೇತ್ರಗಳಲ್ಲಿ ನಡೆಸಲಾಗಿದೆ .
  • ಇದು ಭಾರತದಲ್ಲಿ ಮಾನವ ಬಾಹ್ಯಾಕಾಶ ಯಾನಗಳ ಭವಿಷ್ಯದ ಯೋಜನೆಗಳಿಗೆ ಸಹಾಯ ಮಾಡಲಿದೆ. (Shubanshu Shukla returns to Earth)
  • ಭೂಮಿಗೆ ಮರಳೋ ಮುನ್ನ ಭಾರತವನ್ನ ಹಾಡಿ ಹೊಗಳಿದ ಶುಭಾಂಶು ಶುಕ್ಲಾ

Bengaluru: ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಮತ್ತು ಗಗನಯಾತ್ರಿ (Astronaut) ಶುಭಾಂಶು ಶುಕ್ಲಾ(Shubanshu Shukla) ಅವರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ISS) ಐತಿಹಾಸಿಕ ಪ್ರಯಾಣದಿಂದ ಭೂಮಿಗೆ ಹಿಂದಿರುಗುವ ಕ್ಷಣಗಣನೆ ಆರಂಭವಾಗಿದೆ.

ಆಕ್ಸಿಯಮ್-4(Axiom-4) ಕಾರ್ಯಾಚರಣೆಯಡಿ ISSಗೆ ತೆರಳಿದ್ದ ಶುಭಾಂಶು ಶುಕ್ಲಾ, ತಮ್ಮ ಸಹ ಗಗನಯಾತ್ರಿಗಳೊಂದಿಗೆ ಇಂದು ವಾಪಾಸ್​​ ಆಗಲು ಸಿದ್ಧರಾಗಿದ್ದಾರೆ. 

ಶುಭಾಂಶು ಶುಕ್ಲಾ, ತಮ್ಮ ಸಹ ಗಗನಯಾತ್ರಿ ಕಮಾಂಡರ್ ಪೆಗ್ಗಿ ವಿಟ್ಸನ್, ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ,

ಮತ್ತು ಹಂಗೇರಿಯ ಟಿಬೋರ್ ಕಾಪು ಅವರೊಂದಿಗೆ ಜುಲೈ 14, 2025ರ ಸಂಜೆ ಭೂಮಿಗೆ ಮರಳಲಿದ್ದಾರೆ. ಈ ಐತಿಹಾಸಿಕ ಮಿಷನ್ ಭಾರತದ ಬಾಹ್ಯಾಕಾಶ ಸಂಶೋಧನೆಯಲ್ಲಿ ಒಂದು ಮೈಲಿಗಲ್ಲಾಗಿದೆ.

 Shubanshu Shukla
Astronaut Shubanshu Shukla

ನಾಸಾ(NASA) ಮತ್ತು ಆಕ್ಸಿಯಮ್ ಸ್ಪೇಸ್‌ನ(Axiom of space) ವೇಳಾಪಟ್ಟಿಯ ಪ್ರಕಾರ, ಡ್ರ್ಯಾಗನ್ ಕ್ಯಾಪ್ಸುಲ್‌ನ ಹ್ಯಾಚ್ ಜುಲೈ 14, 2025ರ ಮಧ್ಯಾಹ್ನ 2:50ಕ್ಕೆ (IST) ಮುಚ್ಚಲಾಗುವುದು.

ಸಂಜೆ 4:35ಕ್ಕೆ ಕ್ಯಾಪ್ಸುಲ್ ISSನಿಂದ ಅನ್‌ಡಾಕ್ ಆಗಲಿದೆ. 22.5 ಗಂಟೆಗಳ ಪ್ರಯಾಣದ ನಂತರ, ಜುಲೈ 15, 2025ರ ಮಧ್ಯಾಹ್ನ 3:00 ಗಂಟೆಗೆ (IST) ಕ್ಯಾಲಿಫೋರ್ನಿಯಾ ಕರಾವಳಿಯ ಬಳಿ ಕ್ಯಾಪ್ಸುಲ್ ಸ್ಪ್ಲಾಶ್‌ಡೌನ್(Capsule Splashdown) ಆಗಲಿದೆ.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್(Dr. Jitendra Singh) ಈ ಮಾಹಿತಿಯನ್ನು ಎಕ್ಸ್‌ನಲ್ಲಿ ದೃಢಪಡಿಸಿದ್ದಾರೆ.

ಆಕ್ಸಿಯಮ್-4 ಮಿಷನ್ ಜೂನ್ 25, 2025ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ(Kennedy Space Center) ಉಡಾವಣೆಯಾಗಿ, ಜೂನ್ 26ರಂದು ISSನೊಂದಿಗೆ ಯಶಸ್ವಿಯಾಗಿ ಡಾಕ್ ಆಗಿತ್ತು.

ಈ ಮಿಷನ್‌ನಲ್ಲಿ 60ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಾಗಿದ್ದು, ಬಯೋಮೆಡಿಕಲ್ ವಿಜ್ಞಾನ, ಸುಧಾರಿತ ವಸ್ತುಗಳು, ನರವಿಜ್ಞಾನ, ಕೃಷಿ, ಮತ್ತು

ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಸಂಶೋಧನೆಗಳು ಇದರಲ್ಲಿ ಸೇರಿವೆ. ಇದು ಆಕ್ಸಿಯಮ್ ಸ್ಪೇಸ್‌ನ ಖಾಸಗಿ ಗಗನಯಾತ್ರಿ ಕಾರ್ಯಾಚರಣೆಯಲ್ಲಿ ಇದುವರೆಗಿನ ಅತಿದೊಡ್ಡ ವೈಜ್ಞಾನಿಕ ಸಾಧನೆಯಾಗಿದೆ.

ಮೇಲಿನಿಂದ ನೋಡಿದಾಗ ಇಂದು ಸಹ ಭಾರತ ಸಾರೆ ಜಹಾ ಸೆ ಅಚ್ಛಾ(ಎಲ್ಲಾ ದೇಶಗಳಿಗಿಂತ ಉತ್ತಮ) ಆಗಿದೆ ಎಂದು ಶುಭಾಂಶು ಶುಕ್ಲಾ ಹೇಳಿದ್ದಾರೆ.

ಈ ಮೂಲಕ, 1984ರಲ್ಲಿ ಭಾಹ್ಯಾಕಾಶಕ್ಕೆ ಹೋಗಿದ್ದ ಮೊದಲ ಭಾರತೀಯ ರಾಕೇಶ್‌ ಶರ್ಮಾ(Rakesh Sharma) ಆಡಿದ್ದ ಮಾತುಗಳನ್ನು ಪುನರುಚ್ಚರಿಸಿದ್ದಾರೆ.

ಭಾನುವಾರ ಅಂತರಿಕ್ಷದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಶುಕ್ಲಾ, ಈ ಪ್ರಯಾಣವು ಅದ್ಭುತವಾಗಿತ್ತು. ನನಗೆಲ್ಲಾ ಮಾಂತ್ರಿಕವಾಗಿ ಕಾಣುತ್ತಿದೆ.

ಇದನ್ನು ಓದಿ :  ಸೊಳ್ಳೆಗಳ ನಿರ್ಮೂಲನೆಗೆ ಸಜ್ಜಾದ ಸರ್ಕಾರ: 1500 ಸ್ವಯಂ ಸೇವಕರ ನೇಮಕ, ₹6 ಕೋಟಿ ವೆಚ್ಚ

ಬಾಹ್ಯಾಕಾಶದಿಂದ ಭಾರತವು ಮಹತ್ವಾಕಾಂಕ್ಷೆ, ನಿರ್ಭಯತೆ, ಆತ್ಮವಿಶ್ವಾಸ ಮತ್ತು (Shubanshu Shukla returns to Earth) ಹೆಮ್ಮೆಯಿಂದ ತುಂಬಿದಂತೆ ಕಾಣುತ್ತಿದೆ ಎಂದು ಸಂತಸದಿಂದ ನುಡಿದಿದ್ದಾರೆ.

Tags: AstronautAxiom of spacebengaluruDr. Jitendra SinghKennedy Space CenternasaShubanshu Shuklavijaya times

Related News

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಳ್ಳರ ಕೈಚಳಕ:ಫ್ಲಿಪ್‌ಕಾರ್ಟ್ ಕಂಪನಿಗೆ ಸೇರಿದ 24 ಲಕ್ಷದ ಮೊಬೈಲ್ ಸೇರಿ, ಇತರೆ ಗೂಡ್ಸ್‌ ಕಳವು
ಪ್ರಮುಖ ಸುದ್ದಿ

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಳ್ಳರ ಕೈಚಳಕ:ಫ್ಲಿಪ್‌ಕಾರ್ಟ್ ಕಂಪನಿಗೆ ಸೇರಿದ 24 ಲಕ್ಷದ ಮೊಬೈಲ್ ಸೇರಿ, ಇತರೆ ಗೂಡ್ಸ್‌ ಕಳವು

February 7, 2026
ತಿರುಮಲ ಲಡ್ಡು ವಿವಾದ: ಬಾತ್‌ರೂಮ್ ಕ್ಲೀನಿಂಗ್ ಕೆಮಿಕಲ್ ಆರೋಪದಿಂದ ರಾಜ್ಯ ರಾಜಕಾರಣದಲ್ಲಿ ಭಾರಿ ಗದ್ದಲ
ದೇಶ-ವಿದೇಶ

ತಿರುಮಲ ಲಡ್ಡು ವಿವಾದ: ಬಾತ್‌ರೂಮ್ ಕ್ಲೀನಿಂಗ್ ಕೆಮಿಕಲ್ ಆರೋಪದಿಂದ ರಾಜ್ಯ ರಾಜಕಾರಣದಲ್ಲಿ ಭಾರಿ ಗದ್ದಲ

February 7, 2026
ಇಂದು ದೇಶಾದ್ಯಂತ ಓಲಾ, ಉಬರ್, ರ‍್ಯಾಪಿಡೋ ಮುಷ್ಕರ
ದೇಶ-ವಿದೇಶ

ಇಂದು ದೇಶಾದ್ಯಂತ ಓಲಾ, ಉಬರ್, ರ‍್ಯಾಪಿಡೋ ಮುಷ್ಕರ

February 7, 2026
ಚೆನ್ನೈನಲ್ಲಿ ನೂರಾರು ಕಾಗೆಗಳ ಸಾವು: H5N1 ಹಕ್ಕಿಜ್ವರ ಸೋಂಕು ಹರಡುವಿಕೆ ತಡೆಯಲು ಮುಂದಾದ ಆರೋಗ್ಯ ಇಲಾಖೆ
ದೇಶ-ವಿದೇಶ

ಚೆನ್ನೈನಲ್ಲಿ ನೂರಾರು ಕಾಗೆಗಳ ಸಾವು: H5N1 ಹಕ್ಕಿಜ್ವರ ಸೋಂಕು ಹರಡುವಿಕೆ ತಡೆಯಲು ಮುಂದಾದ ಆರೋಗ್ಯ ಇಲಾಖೆ

February 6, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.