ಭಾನುವಾರ ರಾತ್ರಿ ಬೆಂಗಳೂರಿನ(Bengaluru) ಪಬ್(Pub) ಒಂದರ ಪಾರ್ಟಿಯೊಂದರಲ್ಲಿ ಡ್ರಗ್ಸ್(Drugs) ಸೇವಿಸಿದ ಆರೋಪದ ಮೇಲೆ ಬಾಲಿವುಡ್ ನಟ ಶಕ್ತಿ ಕಪೂರ್ ಅವರ ಪುತ್ರ ಸಿದ್ದಾಂತ್ ಕಪೂರ್(Siddanth Kapoor) ಅವರನ್ನು ಬೆಂಗಳೂರು ಪೊಲೀಸರು(Bengaluru Police) ಬಂಧಿಸಿದ್ದರು.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಪಾರ್ಟಿ ಆಯೋಜಿಸಿದ್ದ ಎಂಜಿ ರಸ್ತೆಯಲ್ಲಿರುವ(MG Road) ಹೋಟೆಲ್ ಮೇಲೆ ದಾಳಿ ನಡೆಸಿದ್ದಾರೆ. ಮಾದಕ ದ್ರವ್ಯ ಸೇವಿಸಿರುವ ಶಂಕಿತ 35 ಜನರ ಮಾದರಿಗಳನ್ನು ಪೊಲೀಸರು ಕಳುಹಿಸಿದ್ದಾರೆ. ಧನಾತ್ಮಕವಾಗಿ ಹಿಂತಿರುಗಿದ ಆರು ಮಂದಿಯಲ್ಲಿ ಸಿದ್ದಾಂತ್ ಕಪೂರ್ ಅವರ ಮಾದರಿ ಸೇರಿದೆ. ಅವರು ಡ್ರಗ್ಸ್ ಸೇವಿಸಿ ಪಾರ್ಟಿಗೆ ಬಂದಿದ್ದಾರೆಯೇ ಅಥವಾ ಹೋಟೆಲ್‌ನಲ್ಲಿ ಸೇವಿಸಿದ್ದಾರೆಯೇ ಎಂಬುದು ಸದ್ಯ ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದರು. ಪೊಲೀಸರು ಬಂಧಿಸಿ 24 ಗಂಟೆಗಳೊಳಗೆ ಜಾಮೀನಿನ ಮೇರೆಗೆ ನಟ ಸಿದ್ದಾಂತ್ ಕಪೂರ್ ಅವರನ್ನು ಬಿಡುಗಡೆಗೊಳಿಸಲಾಗಿದೆ.
ಮಾದಕವಸ್ತು(Drugs) ಪ್ರಕರಣದಲ್ಲಿ ದಾಖಲಾಗಿದ್ದ ಶ್ರದ್ಧಾ ಕಪೂರ್(Shraddha Kapoor)ಸಹೋದರ ಸಿದ್ದಾಂತ್ ಕಪೂರ್ ಮತ್ತು ಇತರರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇವರಿಗೆ ಸಮನ್ಸ್ ಬಂದಾಗ ಪೊಲೀಸರ ಮುಂದೆ ಹಾಜರಾಗಬೇಕಾಗುತ್ತದೆ. ಪಾರ್ಟಿಯಲ್ಲಿ 14 ಮಹಿಳೆಯರು ಮತ್ತು 21 ಪುರುಷರು ಭಾಗವಹಿಸಿದ್ದರು. ಅವರೆಲ್ಲರೂ ಡ್ರಗ್ಸ್ ಸೇವಿಸಿಲ್ಲ ಎಂದು ಹೇಳಿಕೊಂಡಿದ್ದಾರೆ. ಪ್ರಕರಣದಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದರು. ಆರೋಪಿಗಳನ್ನು ಸಿದ್ದಾಂತ್ ಕಪೂರ್, ಅಖಿಲ್ ಸೋನಿ, ಹರ್ಜೋತ್ ಸಿಂಗ್, ಹನಿ ಮತ್ತು ಛಾಯಾಗ್ರಾಹಕ ಅಖಿಲ್ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಡಸ್ಟ್‌ಬಿನ್ ಬಳಿ ಎರಡು ಪ್ಯಾಕೆಟ್ ಡ್ರಗ್ಸ್ ಪತ್ತೆಯಾಗಿದೆ. ಒಬ್ಬನ ಬಳಿ ನಾಲ್ಕು ಗುಲಾಬಿ ಬಣ್ಣದ ಮಾತ್ರೆಗಳು ಮತ್ತು ಇನ್ನೊಂದು ಮೂರು ನೀಲಿ ಬಣ್ಣದ ಮಾತ್ರೆಗಳನ್ನು ಹೊಂದಿದ್ದರು ಎಂದು ಪ್ರಕಟಣಾ ವರದಿಯಲ್ಲಿ ತಿಳಿಸಲಾಗಿದೆ.