Bengaluru : ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಶಕ್ತಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah about Annabhagya issue), ಉಚಿತ
ಅಕ್ಕಿ ವಿತರಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಆಟವಾಡುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಬಡವರ ವಿರೋಧಿಯಾಗಿದ್ದು,
ಅಕ್ಕಿಯನ್ನು ವಿತರಿಸಲು ಸಾಧ್ಯವಾಗದಿದ್ದರೂ ಅಕ್ಕಿ ಸಂಗ್ರಹವನ್ನು ತಡೆಹಿಡಿಯುವ ಮೂಲಕ ಕಾಂಗ್ರೆಸ್ ಸರ್ಕಾರದ ಪ್ರತಿಷ್ಠೆಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದರು.

ಐದು ಖಾತರಿ ಯೋಜನೆಗಳನ್ನು ಈಗಾಗಲೇ ಘೋಷಿಸಲಾಗಿದೆ ಮತ್ತು ಅವುಗಳ ಅನುಷ್ಠಾನದ ಸಮಯವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದೇವೆ ಎಂದು ಮುಖ್ಯಮಂತ್ರಿ ವಿವರಿಸಿದರು.
ಈ ಭರವಸೆಗಳಲ್ಲಿ ಒಂದಾದ ಅನ್ನಭಾಗ್ಯ(Anna Bhagya) ಯೋಜನೆಯು ಜುಲೈ 1 ರಿಂದ ಎಲ್ಲರಿಗೂ 10 ಕೆಜಿ ಅಕ್ಕಿಯನ್ನು ನೀಡುವ ಭರವಸೆಯಾಗಿದೆ. ಇದರಲ್ಲಿ ಬಿಪಿಎಲ್ (BPL) ಮತ್ತು
ಅಂತ್ಯೋದಯ (Anthyodaya Card) ಕಾರ್ಡುದಾರರು ಸೇರಿರುತ್ತಾರೆ. ಇದಕ್ಕಾಗಿ ತಿಂಗಳಿಗೆ 2 ಲಕ್ಷದ 28 ಸಾವಿರ ಮೆಟ್ರಿಕ್ ಟನ್ ಹೆಚ್ಚುವರಿ ಅಕ್ಕಿ ಬೇಕು.
ಅನ್ನಭಾಗ್ಯ ಯೋಜನೆಗಾಗಿ ತಿಂಗಳಿಗೆ 840 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಒಂದು ಕೆಜಿಗೆ ಅಕ್ಕಿಗೆ ಒಟ್ಟು 34 ರೂ. ಹಾಗೂ 2.60 ಪೈಸೆ ಸಾಗಣೆ ದರ ಆಗುತ್ತದೆ. ವಾರ್ಷಿಕ ಮೊತ್ತ 10,092 ಕೋಟಿ ರೂ ಬೇಕು.
ಇದನ್ನೂ ಓದಿ : ಉಚಿತ ಗ್ಯಾರಂಟಿಗಳನ್ನು ತಮ್ಮ ಸ್ವಂತ ಆಸ್ತಿ ಮಾರಿ ಹಣ ಹೊಂದಿಸ್ತೀರಾ ಸಿದ್ದರಾಮಯ್ಯನವರೇ ? ಪ್ರತಾಪ್ ಸಿಂಹ ಪ್ರಶ್ನೆ
ಹೆಚ್ಚುವರಿ ಅಕ್ಕಿ ಹಂಚಿಕೆ ಕುರಿತು ನಾವು ಇಂಡಿಯನ್ ಫುಡ್ಸ್ನ ಉಪ ವ್ಯವಸ್ಥಾಪಕರೊಂದಿಗೆ ಚರ್ಚಿಸಿದ್ದೇವೆ. ಹೆಚ್ಚುವರಿ ಅಕ್ಕಿ ನೀಡುವುದಾಗಿ ಹೇಳಿದರು. ಹೆಚ್ಚುವರಿಯಾಗಿ 2,08,425 ಮೆಟ್ರಿಕ್ ಟನ್ ಅಕ್ಕಿ
ನೀಡಲಾಗುವುದು ಎಂದು ಉಪ ವ್ಯವಸ್ಥಾಪಕರು ಜೂನ್ 12 ರಂದು ಪತ್ರ ಬರೆದು ತಿಳಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರ ಆ ಬಳಿಕ ರಾಜಕೀಯ ನಿರ್ಧಾರ ತೆಗೆದುಕೊಂಡಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಅಕ್ಕಿ ಸಂಗ್ರಹ ಇದ್ದರೂ ಏಕೆ ಪೂರೈಸುತ್ತಿಲ್ಲ?
ಜೂನ್ 13 ರಂದು ಎಫ್ಸಿಐ (FCI) ಪತ್ರ ಬರೆದಿದ್ದು, ಓಪನ್ ಮಾರ್ಕೆಟ್ ಸೇಲ್ಸ್ ಸ್ಕೀಂ (Open Market sales Scheme) ಜಾರಿಯಾಗಿರುವುದರಿಂದ ಸೇಲಂ ಗೋಧಿ ಮತ್ತು ಅಕ್ಕಿಯನ್ನು ರಾಜ್ಯಕ್ಕೆ ಪೂರೈಸಲು ಸಾಧ್ಯವಿಲ್ಲ
ಎಂದು ಹೇಳಿದೆ. 7 ಲಕ್ಷ ಟನ್ ಅಕ್ಕಿ ದಾಸ್ತಾನು ಇದೆ ಎಂದು ಈ ಹಿಂದೆ ಉಪ ವ್ಯವಸ್ಥಾಪಕರು ತಿಳಿಸಿದ್ದಾರೆ. ಕೇಂದ್ರದಲ್ಲಿ ಅಕ್ಕಿ ದಾಸ್ತಾನು ಇದ್ದರೂ ನಮಗೆ ಅಕ್ಕಿ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ : ನೋಂದಣಿ ಪ್ರಕ್ರಿಯೆ ಯಾವಾಗದಿಂದ ಪ್ರಾರಂಭ?
ಕಾಂಗ್ರೆಸ್ (Congress) ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕೇಂದ್ರ ಸರ್ಕಾರ ಈ ರೀತಿ ಮಾಡುತ್ತಿದೆ. ಛತ್ತೀಸ್ಗಢ ಸರ್ಕಾರಕ್ಕೂ ಅಕ್ಕಿ ನೀಡುವಂತೆ ಮನವಿ ಮಾಡಿದ್ದೇವೆ. ಬಿಜೆಪಿ ಬಡತನ ವಿರೋಧಿ ಎಂದ ಸಿದ್ದರಾಮಯ್ಯ,
ಕೇಂದ್ರ ಸರ್ಕಾರ ನಮಗೇನು ಪುಕ್ಕಟೆಯಾಗಿ ಅಕ್ಕಿ ನೀಡುವುದಿಲ್ಲ. ಕೇಂದ್ರ ನೀಡುವ ಅಕ್ಕಿಗೆ ನಾವು ಹಣ ನೀಡುತ್ತೇವೆ.ಕೇಂದ್ರ ಸರ್ಕಾರ ಖಾಸಗಿಯವರಿಗೆ ಅಕ್ಕಿ ಪೂರೈಸುತ್ತಿದೆ ಆದರೆ
ನಮ್ಮ ರಾಜ್ಯ ಸರ್ಕಾರಕ್ಕೆ ಪೂರೈಸುತ್ತಿಲ್ಲ ಎಂದು (Siddaramaiah about Annabhagya issue) ಕಿಡಿಕಾರಿದರು.

ಎಷ್ಟೇ ಷಡ್ಯಂತ್ರ ಮಾಡಿದರು ಅಕ್ಕಿ ವಿತರಿಸುತ್ತೇವೆ!
ನಮ್ಮಿಂದ ಅಕ್ಕಿ ಕೊಡಲು ಆಗಲ್ಲ ಎಂದು ಮೊದಲೇ ಈ ಹಿಂದೆಯೇ ಹೇಳಿದ್ದರೆ ನಾವು ಬೇರೆ ರಾಜ್ಯಗಳಿಗೆ ಮನವಿ ಮಾಡುತ್ತಿದ್ದೇವು.ಶೇ.ಇನ್ನು 100ರಷ್ಟು ಭರವಸೆ ತಮಿಳುನಾಡು ಸರ್ಕಾರದಿಂದ ಸಿಕ್ಕಿಲ್ಲ.
ಆಹಾರ ಸಚಿವ ಕೆಎಚ್ ಮುನಿಯಪ್ಪ ಗುರುವಾರ ತೆಲಂಗಾಣಕ್ಕೆ ಹೋಗುತ್ತಿದ್ದಾರೆ. ತೆಲಂಗಾಣ ಸರ್ಕಾರಕ್ಕೆ ಅಕ್ಕಿ ಪೂರೈಸಲು ಮನವಿ ಮಾಡುತ್ತೇವೆ.ಅಲ್ಲಿ ಯಾವ ರೀತಿ ಸ್ಪಂದನೆ ಸಿಗುತ್ತದೆ ಎಂಬ ಆಧಾರದ ಮೇಲೆ
ಇನ್ನು ಸ್ಪಷ್ಟ ಚಿತ್ರಣ ಸಿಗಲಿದೆ.ಮುಂದಿನ ವರ್ಷ ಅಕ್ಕಿ ನೀಡುವುದಾಗಿ ಪಂಜಾಬ್ ಸರ್ಕಾರ ಹೇಳಿದೆ. ಈ ಬಗ್ಗೆ ಕೇಂದ್ರ ಸರ್ಕಾರವು ಎಷ್ಟೇ ಷಡ್ಯಂತ್ರ ಮಾಡಿದರು ಕೂಡ ನಾವು ಅಕ್ಕಿ ವಿತರಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ರಶ್ಮಿತಾ ಅನೀಶ್