Bengaluru : ಈಗ ಚುನಾವಣಾ ಕಾಲದಲ್ಲಿ ಗುಜರಾತ್ ತೂಗು ಸೇತುವೆ(Siddaramaiah About Bridge Collapse) ಕುಸಿದಿರುವುದು ದೇವರು ಯಾರಿಗೆ ನೀಡಿರುವ ಸಂದೇಶ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರೇ? ಎಂದು ರಾಜ್ಯ ವಿಪಕ್ಷ ನಾಯಕ ಸಿದ್ದರಾಮಯ್ಯನವರು(Siddaramaiah) ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಗುಜರಾತಿನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿದು 132 ಜನ ಸಾವನ್ನಪ್ಪಿದ ನಂತರ(Siddaramaiah About Bridge Collapse),
ಈ ಘಟನೆಯ ಕುರಿತು ಪ್ರಧಾನಿ ಮೋದಿ ಅವರಿಗೆ ಪ್ರಶ್ನೆ ಮಾಡಿರುವ ಸಿದ್ದರಾಮಯ್ಯನವರು, ಚುನಾವಣಾ ಕಾಲದಲ್ಲಿ ಕೊಲ್ಕೊತ್ತಾದ ಮೇಲುಸೇತುವೆ ಕುಸಿದದ್ದು ಬಂಗಾಳಕ್ಕೆ ದೇವರು ಕಳಿಸಿದ್ದ ಸಂದೇಶ ಎನ್ನುವುದಾದರೆ,
ಈಗ ಚುನಾವಣಾ ಕಾಲದಲ್ಲಿ ಗುಜರಾತ್ ತೂಗು ಸೇತುವೆ ಕುಸಿದಿರುವುದು ದೇವರು ಯಾರಿಗೆ ನೀಡಿರುವ ಸಂದೇಶ ಮೋದಿ ಅವರೇ? ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನೊಂದೆಡೆ ರಾಜ್ಯ ಕಾಂಗ್ರೆಸ್(State Congress) ಕೂಡಾ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದು, ಗುಜರಾತಿನ ಮೊರ್ಬಿ ತೂಗುಸೇತುವೆಯನ್ನು ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದ ಸಾರ್ವಜನಿಕ ಪ್ರವೇಶಕ್ಕೆ ಬಿಡಲಾಗಿತ್ತು.
ಇದನ್ನೂ ಓದಿ : https://vijayatimes.com/winter-skin-care-tips/
ಅನುಭವವಿಲ್ಲದ ಗಡಿಯಾರ ತಯಾರಿಕಾ ಕಂಪೆನಿಗೆ ದುರಸ್ತಿ ಕೆಲಸ ವಹಿಸಲಾಗಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ಕಂಪೆನಿಯ ಅನುಭವ ಪರಿಗಣಿಸಿರಲಿಲ್ಲವೇಕೆ? ಗುಜರಾತಿನಲ್ಲೂ 40% ಸರ್ಕಾರ ಸ್ಥಾಪಿಸಿದ್ದೀರಾ ನರೇಂದ್ರ ಮೋದಿ ಅವರೇ? ಎಂದು ಲೇವಡಿ ಮಾಡಿದೆ.
ಮೊರ್ಬಿ ತೂಗುಸೇತುವೆ ಕುಸಿತದಲ್ಲಿ 100ಕ್ಕೂ ಹೆಚ್ಚು ಸಾವುಗಳಾದ ಘಟನೆ ದೇಶದ ಅತಿ ದೊಡ್ಡ ದುರಂತಗಳಲ್ಲೊಂದು.

ದುರಂತಗಳನ್ನು ಚುನಾವಣೆಗೆ ಬಳಸುವ ಪ್ರಧಾನಿ ಈ ದುರಂತಕ್ಕೆ ಮೌನೇಂದ್ರ ಮೋದಿಯಾಗಿದ್ದಾರೆ. ಇದು ಗುಜರಾತ್ ಮಾಡೆಲ್ನ ಆಕ್ಟ್ ಆಫ್ ಫ್ರಾಡ್ ಅಲ್ಲವೇ ? 40 ಪರ್ಸೆಂಟ್ “ಒಂದು ದೇಶ ಒಂದು ಕಮಿಷನ್” ಎಂದು ಜಾರಿಯಾಗಿದೆಯೇ? ಎಂದು ವ್ಯಂಗ್ಯವಾಡಿದೆ.
- ಮಹೇಶ್.ಪಿ.ಎಚ್