Bengaluru : ನನ್ನನ್ನು ದೇಶದ ಪ್ರಧಾನ ಮಂತ್ರಿ ಮಾಡಿದರೂ ಕೂಡ ನಾನು ಬಿಜೆಪಿ-ಆರ್,ಎಸ್,ಎಸ್ ಜೊತೆಗೆ ಕೈಜೋಡಿಸುವುದಿಲ್ಲ. ಅವರೊಂದಿಗೆ ನಾನು ಎಂದಿಗೂ (siddaramaiah about RSS BJP) ಸೇರುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಖಡಕ್ಕಾಗಿ ಹೇಳಿದ್ದಾರೆ.
ಬಿಜೆಪಿ(BJP) ಮತ್ತು ಜೆಡಿಎಸ್(JDS) ಪಕ್ಷಗಳಿಗೆ ಯಾವುದೇ ಸಿದ್ಧಾಂತ ಅಥವಾ ವೈಚಾರಿಕತೆ ಇಲ್ಲ ಎಂದು ಸಿದ್ದರಾಮಯ್ಯ ಅವರು, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನನ್ನನ್ನು ರಾಷ್ಟ್ರಪತಿ ಅಥವಾ ಪ್ರಧಾನ ಮಂತ್ರಿಯನ್ನಾಗಿ ಮಾಡಿದರೂ, ನನ್ನ ನಿಲುವು ಕೂಡ ಬಿಜೆಪಿ ಮತ್ತು ಆರ್,ಎಸ್,ಎಸ್(RSS) ಜೊತೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಯಾವುದೇ ಸಿದ್ಧಾಂತ ಅಥವಾ ವೈಚಾರಿಕತೆ ಇಲ್ಲ. ನಾನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನೊಂದಿಗೆ ಎಂದಿಗೂ ಕೈಜೋಡಿಸುವುದಿಲ್ಲ,
ನನ್ನ ಶವವೂ ಕೂಡ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಬಳಿ ಸುಳಿಯುವುದಿಲ್ಲ ಎಂದು ಹೇಳಿದ್ದಾರೆ.

ಜನತಾ ದಳ ಅಥವಾ ಇತರರು ಅಧಿಕಾರಕ್ಕಾಗಿ ಬಿಜೆಪಿಯೊಂದಿಗೆ ಹೋಗುತ್ತಾರೆ. ಜೆಡಿಎಸ್‌ಗೆ ಯಾವುದೇ(siddaramaiah about RSS BJP) ಸಿದ್ಧಾಂತ ಮತ್ತು ವೈಚಾರಿಕತೆ ಇಲ್ಲ.
ಅಧಿಕಾರಕ್ಕಾಗಿ ಯಾರ ಜೊತೆಗಾದರೂ ಹೋಗುತ್ತಾರೆ ಎಂದು ಹೇಳಿದರು.
ರಾಮನಗರ(Ramnagar) ಜಿಲ್ಲೆಯ ಮಾಗಡಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ,
ಬಿಜೆಪಿಯವರು ನನ್ನನ್ನು ಹಿಂದೂ ವಿರೋಧಿ ಎಂದು ಆರೋಪಿಸಿದ್ದಾರೆ. ಬಿಜೆಪಿಯ ಸಿ.ಟಿ.ರವಿ(CT Ravi) ನನ್ನನ್ನು ಸಿದ್ದರಾಮುಲ್ಲಾ ಖಾನ್ ಎಂದು ಕರೆಯುತ್ತಾರೆ.
ಆದರೆ ಗಾಂಧೀಜಿ(Gandhiji) ನಿಜವಾದ ಹಿಂದೂ. ಅವರು ಗೋಡ್ಸೆಯನ್ನು ಆರಾಧಿಸುವ ಹಿಂದೂಗಳು!
ಇದನ್ನೂ ಓದಿ: ಸಿಡಿ ಪ್ರಕರಣದಲ್ಲಿ ಡಿಕೆಶಿ-ಜಾರಕಿಹೊಳಿ ಜಿದ್ದಾಜಿದ್ದಿ ; ರಾಜ್ಯ ರಾಜಕೀಯದಲ್ಲಿ ಮುಂದಿನ ನಡೆಯೇನು
ಅವರಿಗೆ ಘನತೆ ಇದೆಯೇ? ಅವರ ಜತೆ ಕೈಜೋಡಿಸಿರುವ ಜೆಡಿಎಸ್‌ಗೆ ಘನತೆ, ಗೌರವ ಇಲ್ಲವೇ ಎಂದು ಪ್ರಶ್ನಿಸಿದರು.
ತಾವು ಸಿಎಂ ಆಗಿದ್ದಾಗಿನಿಂದ ಮಾಡಿದ ಕೆಲಸಗಳ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು,
ನಾನು ಸಿಎಂ ಆಗಿದ್ದಾಗ ಎಲ್ಲ ಬಡವರಿಗಾಗಿ ಅನ್ನಭಾಗ್ಯ ಯೋಜನೆ ತಂದಿದ್ದೆ. ಬಸವ ಜಯಂತಿಯಂದು(Basava Jayanti) ಪ್ರಮಾಣ ವಚನ ಸ್ವೀಕರಿಸಿದ್ದೆ.
ಒಂದು ಗಂಟೆಯೊಳಗೆ ಅನ್ನಭಾಗ್ಯ, ಕೃಷಿ, ಹೈನುಗಾರಿಕೆಗೆ ಭದ್ರತೆ ದೊರಕಿಸಿದೆ. ಎಲ್ಲರ ಸಾಲ ಮನ್ನಾ ಮಾಡಿದ್ದೇವೆ.
ಈ ಹಿಂದೆ 7 ಕೆಜಿ ಅಕ್ಕಿ ನೀಡಿದ್ದೆವು. ಆದರೆ ಈಗ ಬಿಜೆಪಿ ಅದನ್ನು 5 ಕೆಜಿಗೆ ಇಳಿಸಿದೆ.
ಮುಂದೆ ನಾವು 10 ಕೆಜಿ ಅಕ್ಕಿ ನೀಡುತ್ತೇವೆ ಮತ್ತು ರಾಜ್ಯದ ಪ್ರತಿಯೊಬ್ಬ ಗೃಹಿಣಿಯರಿಗೆ ತಿಂಗಳಿಗೆ 2,000 ರೂ.
ಹಣ ನೀಡುತ್ತೇವೆ, ನಾವು ವರ್ಷಕ್ಕೆ 24,000 ರೂ. ನೀಡಲು ಯೋಜಿಸುತ್ತಿದ್ದೇವೆ.
ಇಷ್ಟೆಲ್ಲಾ ಹಣ ನಮ್ಮದಲ್ಲ, ಜನರ ತೆರಿಗೆ ಹಣವನ್ನು ಸರಿಯಾದ ರೀತಿಯಲ್ಲಿ ವಿನಿಯೋಗಿಸಿದ್ದೇವೆ. ವಿನಿಯೋಗಿಸುತ್ತೇವೆ ಎಂದು ಹೇಳಿದರು.