Bangalore : ರಾಜ್ಯ ಕಾಂಗ್ರೆಸ್ನಲ್ಲಿ (State Congress) ಅಧ್ಯಕ್ಷ ಹಾಗೂ ಮುಖ್ಯಮಂತ್ರಿ (Chief Minister) ಸ್ಥಾನಕ್ಕಾಗಿ ನಡೆಯುತ್ತಿರುವ ಬಣ ಬಡಿದಾಟ ಇದೀಗ ಇನ್ನೊಂದು ಹಂತ ತಲುಪಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ (State Congress in charge) ಹಾಗೂ ರಾಹುಲ್ ಗಾಂಧಿ (Rahul Gandhi) ಅವರ ಆಪ್ತ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ವಿರುದ್ಧವೇ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಅವರ ಬೆಂಬಲಿಗರು ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಅನೇಕ ಸಚಿವರು ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ವಿರುದ್ಧ ತಮ್ಮ ಅಸಮಾಧಾನವನ್ನು ಸಿಎಂ ಸಿದ್ದರಾಮಯ್ಯನವರ (CM Siddaramaiah) ಬಳಿ ಹೇಳಿಕೊಂಡಿದ್ದಾರೆ. ಸುರ್ಜೇವಾಲ ಅವರ ಕಾರ್ಯವೈಖರಿಯ ಬಗ್ಗೆ ಹೈಕಮಾಂಡ್ಗೆ (High Command) ದೂರು ನೀಡುವಂತೆಯೂ ಒತ್ತಡ ಹೇರುತ್ತಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ (Congress) ವಲಯದಿಂದಲೇ ಕೇಳಿ ಬರುತ್ತಿವೆ. ಸುರ್ಜೇವಾಲ ಅವರು ರಾಜ್ಯಕ್ಕೆ ಆಗಮಿಸಿ ಡಿಸಿಎಂ ಡಿಕೆ ಶಿವಕುಮಾರ್ (DCM DK Sivakumar) ಅವರನ್ನು ಮಾತ್ರ ಭೇಟಿಯಾಗಿ ಚರ್ಚೆ ನಡೆಸುತ್ತಾರೆ. ಆದರೆ ನಮ್ಮ ಅಭಿಪ್ರಾಯಗಳಿಗೆ ಯಾವುದೇ ಬೆಲೆ ನೀಡುತ್ತಿಲ್ಲ. ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಅದರಿಂದ ಪಕ್ಷದಲ್ಲಿ ನಮಗೆ ಹಿನ್ನಡೆಯುಂಟಾಗುತ್ತಿದೆ. ಹೀಗಾಗಿ ಸುರ್ಜೆವಾಲ ವಿರುದ್ಧ ದೂರು ನೀಡಲು ಈ ಬಣ ಚಿಂತನೆ ನಡೆಸುತ್ತಿದೆ.
ಇನ್ನು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರ ಹಿನ್ನಡೆಗೆ ರಣದೀಪ್ ಸುರ್ವೇವಾಲ ಅವರೇ ಕಾರಣ ಎಂಬ ಅಭಿಪ್ರಾಯವೂ ಸಿದ್ದರಾಮಯ್ಯ ಅವರ ಆಪ್ತ ಸಚಿವರ ಬಣದಲ್ಲಿದೆ. ಹಾಸನದಲ್ಲಿ (Hassan) ಸಿದ್ದರಾಮಯ್ಯನವರ ಪರವಾಗಿ ನಡೆಸಲು ಉದ್ದೇಶಿಸಿದ್ದ ಸ್ವಾಭಿಮಾನಿ ಸಮಾವೇಶವನ್ನು ಕೊನೆಯ ಗಳಿಗೆಯಲ್ಲಿ ಅದರ ಹೆಸರು ಬದಲಾವಣೆಗೆ ಸುರ್ಜೇವಾಲ ಕಾರಣ ಎಂಬ ಅಭಿಪ್ರಾಯ ಇದೆ. ದಲಿತ ಸಚಿವರು (Dalit Minister), ಶಾಸಕರ ಔತಣಕೂಟಕ್ಕೆ ನಿರ್ಬಂಧ ಹೇರಲು ಸುರ್ಜೇವಾಲ ಕಾರಣ ಎಂಬ ಅಸಮಾಧಾನವು ಇದೆ. ಡಿಕೆ ಸಹೋದರರ ಜೊತೆ ಸುರ್ಜೇವಾಲ ಪ್ರತ್ಯೇಕ ಸಭೆ ಹಮ್ಮಿಕೊಂಡಿರುವುದನ್ನು ಸಿದ್ದು ಬಳಗದ ಆಪ್ತ ಸಚಿವರ ಪ್ರಶ್ನೆ ಮಾಡುತ್ತಿದ್ದಾರೆ.
ಸಿದ್ದು ಬಣದ ವಾದವೇನು?
• ರಾಜ್ಯ ಉಸ್ತುವಾರಿ (State in charge) ರಣದೀಪ್ ಸಿಂಗ್ ಸುರ್ಜೇವಾಲ ಎರಡು ಬಣದ ಜೊತೆಗೆ ಸಮಾನವಾಗಿ ವ್ಯವಹರಿಸಬೇಕು.
• ಎರಡೂ ಬಣದ ಶಾಸಕರ ಸಮಸ್ಯೆಯನ್ನು ನೇರವಾಗಿ ಆಲಿಸಬೇಕು.
• ರಾಜ್ಯದ ಹಿರಿಯ ನಾಯಕರ (Senior leaders of the state) ಸಭೆಯನ್ನು ಕರೆದು ತೀರ್ಮಾನ ತೆಗೆದುಕೊಳ್ಳಬೇಕು.
• ಪಕ್ಷದ ವಿಚಾರವಾಗಿ ಏಕಪಕ್ಷೀಯವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು.
• ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದಲ್ಲಿ ಎಲ್ಲಾ ಶಾಸಕರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು.
• ಪಕ್ಷ ಸಂಘಟನೆಗಾಗಿ ನಡೆಸುವ ಜಾತಿ ಸಮಾವೇಶಗಳಿಗೆ ಯಾವುದೇ ನಿರ್ಬಂಧ ಹೇರಬಾರದು