Bengaluru: ಐಟಿ ಕೇಂದ್ರ(IT Center), ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bangalore) ಜರುಗಿದ ಬೆಂಗಳೂರು ಟೆಕ್ ಶೃಂಗಸಭೆಯ(Tech Summit) 27 ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ( CM Siddaramaiah)ಅವರು ಕರ್ನಾಟಕ ರಾಜ್ಯದ ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCC) ನೀತಿಯ ಭಾಗವಾಗಿ ಇಲ್ಲಿನ ಮೂರು ಜಿಲ್ಲೆಗಳಲ್ಲಿ ಜಾಗತಿಕ ನಾವಿನ್ಯತಾ ಕೇಂದ್ರಗಳ(Global Innovation Centers) ಸ್ಥಾಪಿಸಲಿದ್ದೇವೆ. ಭವಿಷ್ಯದಲ್ಲಿ ಇವು ಜಿಸಿಸಿಗಳ ತಾಣವಾಗಿ ಬದಲಾಗಲಿವೆ ಎಂದು ಘೋಷಿಸಿದ್ದಾರೆ.
ಕರ್ನಾಟಕದಲ್ಲಿ ಮೈಸೂರು(Mysore), ಬೆಂಗಳೂರು(Bangalore) ಹಾಗೂ ಬೆಳಗಾವಿಯನ್ನು(Belgaum) ನಾವಿನ್ಯತಾ ಜಿಲ್ಲೆಗಳಾಗಿ ಸ್ಥಾಪಿಸಲಿದ್ದೇವೆ. ಈ ಕೇಂದ್ರಗಳನ್ನು ಸಶಕ್ತಗೊಳಿಸಲು ದೇಶದ ಮೊದಲ ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCC) ನೀತಿ ಆರಂಭಿಸಲಾಗುತ್ತದೆ. ನಮ್ಮ ರಾಜ್ಯದಲ್ಲಿ ಇತರರಿಗೂ ಸರಿ ಸಾಟಿಯಿಲ್ಲದ ಎಂಜಿನಿಯರಿಂಗ್(Engineering) ಪ್ರತಿಭೆಗಳು ಇವೆ. ಅಧಿಕ ಪ್ರಮಾಣದಲ್ಲಿ AI ವೃತ್ತಿಪರತೆ ಇದೆ. ಈ ಅಗತ್ಯ ಸಂಪನ್ಮೂಲಗಳ ಅಡಿಯಲ್ಲಿ ರಾಜ್ಯವು ಭವಿಷ್ಯದಲ್ಲಿ ಮತ್ತಷ್ಟು ಗಟ್ಟಿಕೊಳ್ಳಲಿದೆ. ಉದ್ಯಮ(Industry)-ಸಿದ್ಧ ಉದ್ಯೋಗಿಗಳನ್ನು ರಚಿಸಲು ವಿನ್ಯಾಸಗೊಳಿಸಲಾದ ಉಪಕ್ರಮ ಇದಾಗಿದೆ.
ಕರ್ನಾಟಕ ಸರ್ಕಾರವು(Government of Karnataka) ಇಂದು ವಿವಿಧ ಪ್ರತಿಷ್ಠಿತ ಐಟಿ ಕಂಪನಿಗಳ (IT companies)ಮೈಕ್ರೋಸಾಫ್ಟ್(Microsoft), ಇಂಟೆಲ್(Intel), ಆಕ್ಸೆಂಚರ್(Accenture), ಐಬಿಎಂ(IBM) ಮತ್ತು ಬಿಎಫ್ಎಸ್ಐ ಕನ್ಸೋರ್ಟಿ (BFSI Consortium)ಜೊತೆಗೆ ಮಹತ್ವ ಒಪ್ಪಂದ ಮಾಡಿಕೊಂಡಿತು. ಇದರ ಅಡಿಯಲ್ಲಿ ರಾಜ್ಯದಲ್ಲಿ 1 ಲಕ್ಷ ಮಂದಿಗೆ ಕೌಶಲ್ಯ(Skill) ಒದಗಿಸಲಿದ್ದೇವೆ.ಕರ್ನಾಟಕ ಸರ್ಕಾರ ಇವುಗಳ ಮೂಲಕ ರಾಜ್ಯದ ಭವಿಷ್ಯವನ್ನು ಸುಸೂತ್ರವಾಗಿ ನಿರ್ಮಿಸಲಿದೆ. ಕೌಶಲ್ಯಯುತ ಅಭ್ಯರ್ಥಿಗಳನ್ನು ನಾಡಿಗೆ ಪ್ರತಿ ವರ್ಷವು ನೀಡಲಿದೆ. ಇದೆಲ್ಲ ಸಾಕಾರಕ್ಕಾಗಿಯೇ ಸರ್ಕಾರವು ಕರ್ನಾಟಕ ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCC) ನೀತಿ 2024-2029 ಲೋಕಾರ್ಪಣೆ(public offering) ಮಾಡಿದೆ ಎಂದಿದ್ದಾರೆ.