ಬೆಂಗಳೂರು : ರಾಜ್ಯದಲ್ಲಿ ಈ ಹಿಂದೆ ನಡೆದ ಕೋಮುಗಲಭೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪ್ರತಿ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah check Distribution) ಇಂದು (ಸೋಮವಾರ)
25 ಲಕ್ಷ ಪರಿಹಾರ ಚೆಕ್ ವಿತರಿಸಿದರು. ಹೆಚ್ಚುವರಿಯಾಗಿ, ಸಂತ್ರಸ್ತ ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗವನ್ನು (siddaramaiah check Distribution) ಒದಗಿಸಲಾಗುವುದು ಎಂದು ಹೇಳಿದರು.

ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಮೃತಪಟ್ಟ ಮಸೂದ್, ಅಬ್ದುಲ್ ಜಲೀಲ್, ಮಹಮ್ಮದ್ ಫಾಝಿಲ್, ದೀಪಕ್ ರಾವ್, ಇದ್ರಿಷ್ ಪಾಷಾ, ಸಭಾನಸಾಬ್ ಕುಟುಂಬದವರಿಗೆ ಪರಿಹಾರ ವಿತರಿಸಿದರು.
ಇದನ್ನೂ ಓದಿ : ಇಂದಿರಾ ಕ್ಯಾಂಟೀನ್ ಊಟದ ಮೆನು ಬದಲಾವಣೆ : ಹೊಸ ಸೇರ್ಪಡೆ ಪಟ್ಟಿ ಇಲ್ಲಿದೆ ನೋಡಿ
ಈ ಹಿಂದೆ ಬಿಜೆಪಿ (BJP) ಸರ್ಕಾರದ ಆಡಳಿತಾವಧಿಯಲ್ಲಿ ಕೇವಲ ಹಿಂದೂ (Hindu) ಕುಟುಂಬಗಳಿಗೆ 25 ಲಕ್ಷ ರೂಪಾಯಿ ನೀಡಲಾಗಿದ್ದು , ಮುಸ್ಲಿಂ (Muslim) ಕುಟುಂಬಗಳಿಗೆ ಪರಿಹಾರ ನೀಡದೆ ಉಳಿದಿದ್ದರು. ಯಾವುದೇ
ಧರ್ಮದ ಹೊರತಾಗಿ ಎಲ್ಲ ಕುಟುಂಬಗಳನ್ನು ಸಮಾನವಾಗಿ ಕಾಣುವುದು ಸರಕಾರಕ್ಕೆ ಅತ್ಯಗತ್ಯ. ಇದನ್ನು ಸದನದ ಗಮನಕ್ಕೆ ತರಲಾಗಿದ್ದು, ಪರಿಹಾರ ವಿತರಿಸುವಾಗ ಸಮತೋಲನವನ್ನು ಪರಿಗಣಿಸುವುದು ಮುಖ್ಯವಾಗಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಸೂದ್, ಪ್ರವೀಣ್, ಫಾಸೀಲ್, ಅಬ್ದುಲ್ ಜಲಿಲ್, ದೀಪಕ್ ರಾವ್ ಒಟ್ಟು ಆರು ಜನರಕ್ಕೆ ಪರಿಹಾರವನ್ನು ಕೊಡಬೇಕಿತ್ತು.ಆದರೆ ಪ್ರವೀಣ್ ನೆಟ್ಟಾರು (Praveen Nettaru),ಮತ್ತು
ಹರ್ಷ (Harsha) ಅವರಿಗೆ ಮಾತ್ರ ಪರಿಹಾರ ಕೊಟ್ಟು ಉಳಿದ ನಾಲ್ವರಿಗೆ ಕೊಡಲಿಲ್ಲ.ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಯಾವತ್ತೂ ಮಾಡಬಾರದು. ಸತ್ತವರ ಕುಟುಂಬದ ಎಲ್ಲರಿಗೂ ಪರಿಹಾರ ಕೊಡಬೇಕು.
ಮಂಗಳೂರಿಗೆ ಹೋದರೂ ಕೂಡ ಇವರಿಗೆ ಸಾಂತ್ವನ ಕೂಡ ಹೇಳೋಕೆ ಹೋಗಲಿಲ್ಲ ಇವರ ಮನೆಗಳಿಗೆ ಕೂಡ ಹೋಗಲಿಲ್ಲ. ಅವರಿಬ್ಬರ ಕುಟುಂಬಗಳಿಗೆ ಪರಿಹಾರ ಮತ್ತು ಕೆಲಸ ಎಲ್ಲಾ ಕೊಟ್ಟಿದ್ದಾರೆ.
ಹಾಗೇ ಎಲ್ಲರಿಗೂ ಕೊಡಬೇಕು ಅಲ್ವಾ..?
ಇದನ್ನೂ ಓದಿ : ಅಕ್ಕಿ ಪಾಲಿಟಿಕ್ಸ್: ಅನ್ನಭಾಗ್ಯಕ್ಕೆ ಅಕ್ಕಿ ಕೊಡಲು ಕೇಂದ್ರ ನಿರಾಕರಣೆ : ಅಕ್ಕಿಗಾಗಿ ಅನ್ಯ ರಾಜ್ಯಗಳ ಮೊರೆ
ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಈಗ ನಾನು 25 ಲಕ್ಷ ರೂಪಾಯಿ ನೀಡ್ತಿದ್ದೇನೆ. ಅಲ್ಲದೆ ಅವರ ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ಕೆಲಸ ಸಹ ಕೋಡ್ತಿದ್ದೇನೆ ಎಂದು ಹೇಳಿದರು.

ಈ ಕೋಮು ಗಲಭೆಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿತ್ತು ಆದರೆ ನಾವು ಸಾವನ್ನಪ್ಪಿದ ಕುಟುಂಬಗಳಿಗೆ ಕೇವಲ ಪರಿಹಾರ ಕೊಟ್ಟು ಸುಮ್ಮನಾಗುವುದಿಲ್ಲ. ಕಾನೂನು ಪ್ರಕಾರ ನಿಷ್ಪಕ್ಷಪಾತವಾಗಿ ಈ ಕೊಲೆಗಳ
ಬಗ್ಗೆ ತೆನಿಖೆ ಮಾಡುತ್ತೇವೆ. ಯಾರು ನಿಜವಾದ ತಪ್ಪಿತಸ್ಥರಿರ್ತಾರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮಾರಲ್ ಪೊಲೀಸಿಂಗ್ಗೆ ರಾಜ್ಯದಲ್ಲಿ ಕಡಿವಾಣ ಹಾಕಲು ಸೂಚಿಸಿದ್ದೇನೆ.
ಕಾನೂನು ತಗೆದುಕೊಳ್ಳುವರ ವಿರುದ್ಧ ಯಾರೇ ಆಗಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ವಾರ್ನಿಂಗ್ ನೀಡಿದರು.
ರಶ್ಮಿತಾ ಅನೀಶ್