ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ(Government School) ಬಿಸಿಯೂಟ ತಯಾರಿಕಾ ಸಿಬ್ಬಂದಿ ಕೈಗೆ ಬಳೆ ಧರಿಸುವುದನ್ನು ನಿಷೇಧಿಸಿ ಶಿಕ್ಷಣ ಸಚಿವಾಲಯ ಹೊಸ ಮಾರ್ಗಸೂಚಿ ಹೊರಡಿಸಿರುವ ಸುದ್ದಿಗೆ ಸ್ವತಃ ಸಿಎಂ ಸಿದ್ದರಾಮಯ್ಯ(Siddaramaiah) ಪ್ರತಿಕ್ರಿಯಿಸಿದ್ದಾರೆ.

ಬಿಸಿಯೂಟ ಕಾರ್ಮಿಕರು ಬಳೆ ತೊಡದಂತೆ ರಾಜ್ಯ ಸರ್ಕಾರ(State Government) ಮಾರ್ಗಸೂಚಿ ಹೊರಡಿಸಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ವಾಸ್ತವವಾಗಿ, ಬಿಸಿಯೂಟದಲ್ಲಿ ಕಾರ್ಮಿಕರು ಬಳೆಗಳನ್ನು ಧರಿಸುವುದನ್ನು ನಿಷೇಧಿಸಿ ಕೇಂದ್ರ ಸರ್ಕಾರ(Central Government) ಪೋಷನ್ ಯೋಜನೆ(Poshan Scheme) ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ಸಿದ್ದರಾಮಯ್ಯ ಟ್ವೀಟ್ (Tweet)ಮಾಡಿದ್ದಾರೆ.
ಬಿಸಿಯೂಟದ ಕಾರ್ಯಕರ್ತರಿಗೆ ಬಳೆ ತೊಡಬೇಡಿ ಎಂದು ಕಾಂಗ್ರೆಸ್(Congress) ಸರ್ಕಾರ ಹೇಳಿದ್ದು, ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ(Social Media) ಸುಳ್ಳು ಸುದ್ದಿ ಹಬ್ಬಿತ್ತು. ಇದೀಗ ಮುಖ್ಯಮಂತ್ರಿಗಳ ಕಚೇರಿಯೇ ಅಧಿಕೃತ ಸಂದೇಶ ಹೊರಡಿಸಿದ್ದು, ಅಂತಹ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

ನಳಿನ್ ಕುಮಾರ್(Nalin Kumar Kateel) ಅವರಿಗೆ ಅವರದೇ ಸರ್ಕಾರದ ನೀತಿ ನಿಯಮಗಳು ಗೊತ್ತಿಲ್ಲದಂತಾಗಿದೆ,ಇವರು ಸಂಸದ ಸ್ಥಾನಕ್ಕೆ ಅಪಚಾರವಿದ್ದಂತೆ. ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿರುವ ಕೇಂದ್ರ ಸರ್ಕಾರವು 2020 ರಲ್ಲಿ ಬಿಸಿಯೂಟದ ಕಾರ್ಮಿಕರು ತಮ್ಮ ಉಗುರುಗಳಿಗೆ ಬಣ್ಣ ಹಾಕಲು ಅಥವಾ ಅಡುಗೆ ಮಾಡುವಾಗ ಬಳೆಗಳನ್ನು ಧರಿಸಲು ಅನುಮತಿಸುವುದಿಲ್ಲ ಎಂದು ಆದೇಶ ಹೊರಡಿಸಿದೆ. ‘ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ
ನಳಿನ್ ಕುಮಾರ್ ಕಟೀಲ್ ಅವರೇ, ಮೋದಿಯವರು(Narendra Modi) ನಿಮಗೆ ಆ ಬಳೆ ತೊಡಲು ಆದೇಶಿಸಿದರೇ? ಹಿಂದೂ ಆಚರಣೆಗಳನ್ನು ಹತ್ತಿಕ್ಕಲು ಈ ಕ್ರಮ ಕೈಗೊಳ್ಳಲಾಗಿದೆಯೇ? ಇದೇ ವೇಳೆ ನಳಿನ್ ಕುಮಾರ್ ಕೈಟೆಲ್ ಕೈಗೆ ಬಳೆ ತೊಡಿಸಿ ಪ್ರತಿಭಟನೆ ನಡೆಸಬೇಕು ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ರಶ್ಮಿತಾ ಅನೀಶ್