ಘೋಷಿಸಿರುವ ಗ್ಯಾರಂಟಿಗಳನ್ನು ಜಾರಿ ಮಾಡಲು ಆಗದೇ, ಈಗ ಆ ವೈಫಲ್ಯವನ್ನು ಕೇಂದ್ರ ಸರ್ಕಾರದ ಮೇಲೆ ಹೊರಿಸಲು ಸಿದ್ದರಾಮಯ್ಯನವರು ಸರ್ವ ರೀತಿಯ (Siddaramaiah cleared rice sharing) ಸರ್ಕಸ್ ಗಳನ್ನು ಮಾಡುತ್ತಿರುವುದು

ಈಗ ಸ್ಪಷ್ಟವಾಗಿ ಕಾಣುತ್ತಿದೆ. ಉಚಿತವಾಗಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿ ಅಧಿಕಾರ ಹಿಡಿದ ನೀವು, ಆ 10 ಕೆಜಿಯಲ್ಲಿ ರಾಜ್ಯದ ಪಾಲೆಷ್ಟು, ಕೇಂದ್ರದ ಪಾಲೆಷ್ಟು ಎನ್ನುವುದನ್ನು ಸ್ಪಷ್ಟಪಡಿಸುವಿರೇ?
ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀನ್ ಸಿಎಂ ಸಿದ್ದರಾಮಯ್ಯ ಅವರನ್ನು (Siddaramaiah cleared rice sharing) ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಯೋಜನೆಗೆ ಸಂಪನ್ಮೂಲ ಕ್ರೂಢೀಕರಣ ಎಲ್ಲಿಂದ, ಹೇಗೆ ಎನ್ನುವ ಮಾಹಿತಿಯನ್ನು ನಾಡಿನ ಜನತೆಗೆ ವಿವರಿಸುವಿರೇ? ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ
ಜಾರಿ ನಿರ್ದೇಶನಾಲಯ ಬಂಧಿಸಿದ ಈ ಸೆಂಥಿಲ್ ಬಾಲಾಜಿ ಯಾರು? ಸೆಂಥಿಲ್ ಬಂಧನಕ್ಕೆ ಪ್ರತಿಪಕ್ಷಗಳ ವಿರೋಧ ಏಕೆ?
ಎಂದು ಸುಳ್ಳು ಆರೋಪ ಹೊರಿಸಿರುವ ಸಿದ್ದರಾಮಯ್ಯನವರೇ, ಯಾವ ಯೋಜನೆಯ ಅಡಿ ಅಕ್ಕಿಗಾಗಿ ಮನವಿ ಮಾಡಿದ್ದೀರಿ ಎಂಬುದನ್ನು ಬಹಿರಂಗ ಪಡಿಸುವಿರೇ? ಅಕ್ಕಿ ಪೂರೈಕೆಗಾಗಿ ‘ತಾವು’ ಯಾರಿಗೆ,
ಯಾವಾಗ ಪತ್ರ ಬರೆದಿದ್ದೀರಿ ಹಾಗೂ ಅವರಿಂದ ಬಂದ ‘ಅಧಿಕೃತ’ ಉತ್ತರವೇನು? ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಆಗದೇ ಕನ್ನಡಿಗರ ಕಿವಿಯ
ಮೇಲೆ ಹೂವು ಇಡಲು ಮುಂದಾಗಿದ್ದಾರೆ. ದಿನಕ್ಕೊಂದು ಕಂಡೀಷನ್ ಹಾಕಿ ಜನರಲ್ಲಿ ಗೊಂದಲ ಮೂಡಿಸುವ ಮೊದಲು ಈ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ.

ಇದೇ ವೇಳೆ ಮತಾಂತರ ನಿಷೇಧ ಕಾನೂನಿನ ರದ್ದತಿಯ ನಿರ್ಧಾರವನ್ನು ಟೀಕಿಸಿದ್ದು, ಹಿಂದೂಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ʼಗೆ ಧಿಕ್ಕಾರವಿರಲಿ. ಹಿಂದೂಗಳು ಈಗ ಜಾಗೃತರಾಗಿದ್ದಾರೆ.
ನಿಮ್ಮ ಓಲೈಕೆಯ ಆಟ ಇನ್ನು ನಡೆಯದು. ಹಿಂದೂಗಳನ್ನು ರದ್ದಿ ಕಾಗದದಂತೆ ಬಳಸುವ ನಿಮ್ಮ ದಾರ್ಷ್ಟ್ಯಕ್ಕೆ ಶೀಘ್ರವೇ ಉತ್ತರ ಸಿಗಲಿದೆ.ʼಮತಾಂತರ ನಿಷೇಧ ಕಾಯ್ದೆʼ ಹಿಂಪಡೆಯುವ ತೀರ್ಮಾನ ಮಾಡಿರುವ
ಕಾಂಗ್ರೆಸ್ ಸರ್ಕಾರ ಮತ್ತೆ ತನ್ನ ಹಿಂದೂ ವಿರೋಧಿ ನೀತಿಯನ್ನು ಪ್ರದರ್ಶಿಸಿದೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಸದಾ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಬಲವಂತದ ಮತಾಂತರ,
ಲವ್ ಜಿಹಾದ್ʼನಂತಹ ಪ್ರಕರಣಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ಆರೋಪಿಸಿದ್ದಾರೆ.