Kodagu: ದಶಕಗಳಿಂದಲೂ ಕೊಡವರಿಗೆ ನೀಡಲಾಗುವ ಜಾತಿ ಪ್ರಮಾಣಪತ್ರದಲ್ಲಿ ಹಾಗೂ ಇನ್ನಿತರ ಸರ್ಕಾರಿ (Siddaramaiah fulfill Kodavas demand) ದಾಖಲೆಗಳಲ್ಲಿ ‘ಕೊಡಗರು
(Kodagaru)’ ಎಂದು ಉಲ್ಲೇಖ ಮಾಡಲಾಗುತ್ತಿದೆ. ಇದನ್ನು ‘ಕೊಡವ’ (Kodava) ಅಥವಾ ‘ಕೊಡವರು’ ಎಂದು ಬದಲಾಯಿಸುವಂತೆ ಹಲವಾರು ವರ್ಷಗಳಿಂದ ಕೊಡವರು ಎಂದು ರಾಜ್ಯ
ಸರ್ಕಾರದ ಮುಂದೆ ಬೇಡಿಕೆಯನ್ನಿಡುತ್ತಾ ಬಂದಿದ್ದು. ಈ ಬೇಡಿಕೆಗೆ ಸೆ. 23ರಂದು ನಡೆದ ಯಲ್ಲಿ ಒಪ್ಪಿಗೆ ನೀಡಲಾಗಿದೆ.

ಈ ದೀರ್ಘಕಾಲದ ಬೇಡಿಕೆಗೆ ರಾಜ್ಯ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಸೆ. 23ರಂದು ನಡೆದ ಸಂಪುಟ ಸಭೆಯಲ್ಲಿ ಇದಕ್ಕೆ ಅಸ್ತು ಎನ್ನಲಾಗಿದೆ. ಕರ್ನಾಟಕ (Karnataka) ಹಿಂದುಳಿದ ವರ್ಗಗಳ
ಆಯೋಗ ಸಲ್ಲಿಸಿದ್ದ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಹಾಗಾಗಿ ಇನ್ಮುಂದೆ ಜಾತಿ ಪ್ರಮಾಣ ಪತ್ರ ಅಥವಾ ಇನ್ನಿತರ ಯಾವುದೇ ಸರ್ಕಾರಿ ದಾಖಲೆಗಳಲ್ಲಿ ‘ಕೊಡಗರು’
ಎಂಬ ಪದದ ಬದಲಿಗೆ ‘ಕೊಡವ/ ಕೊಡವರು’ ಎಂಬ ಪದಗಳನ್ನು ಬಳಸುವ ಹೊಸ (Siddaramaiah fulfill Kodavas demand) ಪದ್ಧತಿಯು ಸದ್ಯದಲ್ಲೇ ಜಾರಿಗೆ ಬರಲಿದೆ.
ವರ್ಷಗಳ ಹಿಂದೆಯೇ, ಈ ಕುರಿತ ಬದಲಾವಣೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೊಡವ ರಾಷ್ಟ್ರೀಯ ಕೌನ್ಸಿಲ್ (ಸಿಎನ್ ಸಿ) ವತಿಯಿಂದ ನ್ಯಾಯಾಲಯದ ಮೊರೆ ಹೋಗಲಾಗಿತ್ತು
ಮತ್ತು 2021ರ ಡಿಸೆಂಬರ್ 16ರಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದ ನ್ಯಾಯದೀಶರಾದ ಕೃಷ್ಣ ಎನ್. ದೀಕ್ಷಿತ್ (Krishna N Dikshith), ಕೊಡಗರು ಬದಲಿಗೆ ಕೊಡವ/ಕೊಡವರು ಎಂಬ
ಪದ ಬಳಕೆ ಮಾಡುವಂತೆ ಸೂಚಿಸಿದ್ದರು. ಆದರೆ ಚುನಾವಣೆ ಹತ್ತಿರವಿದ್ದುದ್ದರಿಂದ ಬಿಜೆಪಿ (BJP) ಸರ್ಕಾರ, ನ್ಯಾಯಾಲಯದ ನಿರ್ದೇಶನದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.

ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ, ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ (A S Ponnanna) ಅವರು, ಈ ವಿಚಾರವನ್ನು ಪುನಃ ಸರ್ಕಾರದ ಮುಂದಿಟ್ಟಿದ್ದರು. ಅಸಲಿಗೆ,
ಕೊಡಗಿನಲ್ಲಿ ಚುನಾವಣಾ ಪ್ರಚಾರಕ್ಕಾಗಿ ಸಿದ್ದರಾಮಯ್ಯನವರು ತೆರಳಿದ್ದಾಗ ಅವರ ಗಮನಕ್ಕೆ ಈ ವಿಚಾರ ತಿಳಿಸಿದ್ದರು ಪೂಣಯ್ಯ. ಈಗ ಪೂಣಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ
(Siddaramaiah) ಕಾನೂನು ಸಲಹೆಗಾರರೂ ಸಹ ಆಗಿದ್ದು, ಪುನಃ ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆ ಪ್ರಸ್ತಾಪಿಸಿದ್ದರು. ಈಗ, ಅದು ಕಾರ್ಯರೂಪಕ್ಕೆ ಬಂದಿದೆ.
“ಈ ಬಾರಿಯ ಚುನಾವಣೆಯಲ್ಲಿ ನಾವು ಆರಿಸಿರುವ ಕೊಡಗಿನ ಜನಪ್ರತಿನಿಧಿಗಳು ನಮ್ಮ ಬಹುವರ್ಷಗಳ ಬೇಡಿಕೆಗೆ ಸ್ಪಂದಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ಸಾಬೀತುಪಡಿಸಿದ್ದಾರೆ ಎಂಬುದು ಸಹ ಇದರಿಂದ ತಿಳಿದುಬರುತ್ತದೆ’’ ಎಂದು ಅವರು ಹೇಳಿದ್ದಾರೆ
ಸಚಿವ ಸಂಪುಟದ ಈ ನಿರ್ಧಾರದ ಬಗ್ಗೆ ಸಿಎಸಿ ಅಧ್ಯಕ್ಷರಾದ ಎನ್.ಯು.ನಂಜಪ್ಪ (N U Nanjappa) ಅವರು ಸಂತಸ ವ್ಯಕ್ತಪಡಿಸಿದ್ದಾರೆ. “2008ರಿಂದ ಇಲ್ಲಿವರೆಗೆ ಕೊಡವರು ಕೇಳುತ್ತಿದ್ದ ಬೇಡಿಕೆಯೊಂದಕ್ಕೆ
ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ಸಂತಸ ತಂದಿದೆ. ಮೀಸಲಾತಿಯ 3ಎ ಅಡಿಯಲ್ಲಿರುವ ಕೊಡುವ ಸಮುದಾಯದ ಹೆಸರನ್ನು ಜಾತಿ ಪ್ರಮಾಣ ಪತ್ರ ಹಾಗೂ ಇನ್ನಿತರ ಸರ್ಕರಿ ದಾಖಲೆಗಳಲ್ಲಿ
ಕೊಡಗರು ಎಂಬ ಪದದಿಂದ ಕೊಡವ/ಕೊಡವರು ಎಂದು ಬದಲಾಯಿಸಿ ಹಿಂದುಳಿದ ವರ್ಗಗಳ ಆಯೋಗಕ್ಕೆ ನಾವು ಮನವಿ ಮಾಡಿದ್ದೆವು. ನಮ್ಮ ಪ್ರಯತ್ನಕ್ಕೆ ಈಗ ಫಲ ಸಿಕ್ಕಿದೆ’’ ಎಂದು ಅವರುತಿಳಿಸಿದರು
ಇದನ್ನು ಓದಿ: ಎಚ್.ಡಿ ದೇವೇಗೌಡರಿಗೆ ಮತ್ತು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್
- ಮೇಘಾ ಮನೋಹರ ಕಂಪು