Bengaluru : 175 ಪಿಎಫ್ಐ(PFI) ಕಾರ್ಯಕರ್ತರ ವಿರುದ್ದದ ಮೊಕದ್ದಮೆಗಳನ್ನು ನಮ್ಮ ಕಾಂಗ್ರೆಸ್ ಸರ್ಕಾರ ವಾಪಸು ಪಡೆದಿದೆ ಎಂದು ಬೊಗಳೆ ಬಿಡುತ್ತಿರುವ ರಾಜ್ಯ ಬಿಜೆಪಿ ನಾಯಕರೇ,
ನಿಮಗೆ ದಮ್ಮು-ತಾಖತ್ ಇದ್ದರೆ 6 ತಿಂಗಳ ಹಿಂದಿನ ನನ್ನ ಪತ್ರಕ್ಕೆ ಥಟ್ ಎಂದು ಉತ್ತರಿಸಲು ರಾಜ್ಯದ ಸಿಎಂ ಅವರಿಗೆ ಹೇಳಿಬಿಡಿ ಎಂದು ಹೇಳುವ ಮುಖೇನ ಸಿದ್ದರಾಮಯ್ಯ(Siddaramaiah) ಅವರು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಈ ಹಿಂದೆ ಪಿಎಫ್‌ಐ ಸಂಘಟನೆಯ ಬ್ಯಾನ್ ವಿಚಾರದಲ್ಲೂ ಆರೋಪಗಳ ಸುರಿಮಳೆ ಹರಿಸಿದ್ದ ಕಾಂಗ್ರೆಸ್-ಬಿಜೆಪಿ, ಕಾಂಗ್ರೆಸ್ ಪಕ್ಷದ ಆಡಳಿತವೇ ಪಿಎಫ್‌ಐ ಕಾರ್ಯಕರ್ತರಿಗೆ ಬೆಂಬಲ ನೀಡಿರುವುದು ಎಂದು ಈ ಹಿಂದೆ ಆರೋಪಿಸಿತ್ತು ಮತ್ತು 175 ಪಿಎಫ್ಐ ಕಾರ್ಯಕರ್ತರ ವಿರುದ್ದದ ಮೊಕದ್ದಮೆಗಳನ್ನು ಕಾಂಗ್ರೆಸ್(Congress) ಸರ್ಕಾರ ತಮ್ಮ ಆಡಳಿತ ಅವಧಿಯಲ್ಲಿ ವಾಪಸು ಪಡೆದಿತ್ತು ಎಂದು ಮತ್ತೊಂದು ಆರೋಪವನ್ನು ಎಸಗಿದೆ.
ಸದ್ಯ ಈ ಆರೋಪವನ್ನು ಆಲಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದು,

175 ಪಿಎಫ್ಐ ಕಾರ್ಯಕರ್ತರ ವಿರುದ್ದದ ಮೊಕದ್ದಮೆಗಳನ್ನು ನಮ್ಮ ಕಾಂಗ್ರೆಸ್ ಸರ್ಕಾರ ವಾಪಸು ಪಡೆದಿದೆ ಎಂದು ಸುಳ್ಳಿನ ಕಥೆ ಕಟ್ಟುವ ರಾಜ್ಯ ಬಿಜೆಪಿ ನಾಯಕರೇ,
ನಿಮಗೆ ದಮ್ಮು-ತಾಖತ್ ಇದ್ದರೆ 6 ತಿಂಗಳ ಹಿಂದಿನ ನನ್ನ ಪತ್ರಕ್ಕೆ ಥಟ್ ಎಂದು ಉತ್ತರಿಸಲು ರಾಜ್ಯದ ಸಿಎಂ ಅವರಿಗೆ ಹೇಳಿಬಿಡಿ ಎಂದು ಹೇಳುವ ಮುಖೇನ ಸಿಎಂ ಬಸವರಾಜ ಬೊಮ್ಮಾಯಿ(Basavaraj bommai) ಮತ್ತು ಬಿಜೆಪಿ ನಾಯಕರಿಗೆ(BJP Leaders) ತಿರುಗೇಟು ನೀಡಿದ್ದಾರೆ.
175 ಪಿಎಫ್ಐ ಕಾರ್ಯಕರ್ತರ ವಿರುದ್ದದ ಮೊಕದ್ದಮೆಗಳನ್ನು ಕಾಂಗ್ರೆಸ್ ಸರ್ಕಾರ ವಾಪಸು ಪಡೆದಿದೆ ಎಂಬ ಆರೋಪಕ್ಕೆ ಸಾಕ್ಷಿ ಎಂಬಂತೆ ತಾವು ಕಳೆದ ವರ್ಷ ಜೂನ್ ತಿಂಗಳಲ್ಲಿ ಸಲ್ಲಿಸಿದ ಪತ್ರವನ್ನು ಲಗತ್ತಿಸಿ,
ಉತ್ತರಿಸಿರುವ ಸಿದ್ದರಾಮಯ್ಯ ಅವರ ಉಲ್ಲೇಖ ಹೀಗಿದೆ,
ಇದನ್ನೂ ಓದಿ: https://vijayatimes.com/allegation-against-shivamurthy-swamiji/
- ಕಳೆದ 10 ವರ್ಷಗಳಲ್ಲಿ ಕೋಮು ಸಂಬಂಧಿತ ವಿಷಯವಾಗಿ ದಾಖಲಾದ ಪ್ರಕರಣಗಳಷ್ಟು? ವರ್ಷವಾರು ವಿವರ ನೀಡುವುದು, ಪ್ರಕರಣಗಳ ಪ್ರಸ್ತುತ ಸ್ಥಿತಿ ಏನು? ವಿವರವಾದ ಮಾಹಿತಿ ನೀಡುವುದು.
- ರಾಜ್ಯದಲ್ಲಿ ಕಳೆದ 10 ವರ್ಷಗಳಿಂದ ಈಚೆಗೆ ಸಿಬಿಐಗೆ ನೀಡಿದ ಪ್ರಕರಣಗಳು ಯಾವುವು? ಅವುಗಳ ಪ್ರಸ್ತುತ ಸ್ಥಿತಿಗತಿಗಳೇನು?
- ರಾಜ್ಯದಲ್ಲಿ ಕಳೆದ 10 ವರ್ಷಗಳಿಂದೀಚೆಗೆ ನ್ಯಾಯಾಂಗ ತನಿಖೆ ಅಥವಾ ಇನ್ನಿತರೆ ತನಿಖಾ ಸಂಸ್ಥೆಗಳಿಗೆ ವಹಿಸಿರುವ ಪ್ರಕರಣಗಳೆಷ್ಟು? ಅವುಗಳ ಪ್ರಸ್ತುತ ಪರಿಸ್ಥಿತಿಯೇನು?
- ರಾಜ್ಯದಲ್ಲಿ ಪಿಎಫ್‌ಐ, ಎಸ್ ಡಿಪಿಐ, ಬಜರಂಗ ದಳ, ಶ್ರೀರಾಮ ಸೇನೆ ಅಥವಾ ಇನ್ನಿತರೆ ಸಂಘಟನೆಗಳ ಕಾರ್ಯಕರ್ತರ ಮೇಲೆ ಕಳೆದ 15 ವರ್ಷಗಳಲ್ಲಿ ದಾಖಲಾದ ಪ್ರಕರಣಗಳಷ್ಟು? ಅವುಗಳ ಪ್ರಸ್ತುತ ಪರಿಸ್ಥಿತಿ ಏನು?
- ಮೇಲಿನ ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರ, ಮುಖಂಡರ ಮೇಲಿನ ಪ್ರಕರಣಗಳನ್ನು ಸರ್ಕಾರ ಹಿಂಪಡೆದಿದೆಯೆ? ಹಿಂಪಡೆದಿದ್ದರೆ ಯಾವ ದಿನಾಂಕದಲ್ಲಿ ಹಿಂಪಡೆಯಲಾಗಿದೆ? ಹಿಂಪಡೆಯಲು ಕಾರಣಗಳೇನು? ವಿವರವಾದ ಮಾಹಿತಿಯನ್ನು ನೀಡುವಂತೆ ಕೋರಿದೆ. – ಧನ್ಯವಾದಗಳೊಂದಿಗೆ ಸಿದ್ದರಾಮಯ್ಯ ಎಂದು ಬರೆದು ಸಲ್ಲಿಸಿದ್ದಾರೆ.
- ಮೋಹನ್ ಶೆಟ್ಟಿ