Bengaluru : ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ(Siddaramaiah is called Tagaru) ಅವರು ಸಿಎಂ ಬಸವರಾಜ ಬೊಮ್ಮಾಯಿ(Basavaraj bommai) ಅವರಿಗೆ ಹೇಳಿದ ನಾಯಿ ಮರಿ ಹೇಳಿಕೆ ಇದೀಗ ರಾಜಕೀಯದಲ್ಲಿ ಗಂಭೀರ ಚರ್ಚೆಯಾಗುತ್ತಿದ್ದು, ಈ ವಿವಾದಕ್ಕೆ ಸದ್ಯ ಸಿದ್ದರಾಮಯ್ಯ ಅವರು ವಿಭಿನ್ನ ಆಯಾಮವನ್ನು ನೀಡಿದ್ದಾರೆ. ಸಿದ್ದರಾಮಯ್ಯ ಅವರು ನಿದರ್ಶನಗಳ ಮುಖೇನ ಕೊಟ್ಟಿರುವ ಹೇಳಿಕೆಗಳು ಹೀಗಿದೆ ನೋಡಿ.
ನನ್ನ ಹೇಳಿಕೆಯಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರೇನು ಬೇಸರ ಮಾಡಿಕೊಂಡಿರಲಾರರು, ಅವರು ನಮ್ಮ ಒಡನಾಟದವರು.
ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ(Narendra modi) ಅವರ ಎದುರು ತುಟಿ ಬಿಚ್ಚಲಾಗದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹುಲಿ-ಸಿಂಹಕ್ಕೆ ಹೋಲಿಸಲಾಗುತ್ತಾ? ನಾಯಿ ಮರಿ, ಬೆಕ್ಕಿನ ಮರಿಗಳಿಗೆ ಹೋಲಿಸಬೇಕಲ್ಲಾ?
ಇದನ್ನೂ ಓದಿ: https://vijayatimes.com/allegation-against-shivamurthy-swamiji/
ಹುಲಿ ಮನುಷ್ಯರನ್ನು ಕೊಂದು ತಿನ್ನುವ ಪ್ರಾಣಿ. ಬಿಜೆಪಿ ನಾಯಕರೇ ಬಿ.ಎಸ್ ಯಡಿಯೂರಪ್ಪ(BS Yediyurappa) ಅವರನ್ನು ರಾಜಾ ಹುಲಿ ಎಂದು ಬಣ್ಣಿಸುತ್ತಾರೆ.
ಇದನ್ನೂ ಅವಮಾನ ಎಂದು ತಿಳಿದುಕೊಳ್ಳಬಹುದಲ್ಲಾ? ಟಿವಿ ಚಾನೆಲ್‌ನವರು(TV Channel) ಪ್ರತಿದಿನ ನನ್ನನ್ನು ‘ಟಗರು’ ‘ಟಗರು’ ಎಂದು ಹಾಡು ಕಟ್ಟಿ ತೋರಿಸುತ್ತಾರೆ.
ಟಗರು ಗುಮ್ಮುತ್ತೆ, ನಾನು ಯಾರಿಗೆ ಗುಮ್ಮಿದ್ದೇನೆ? ನನಗೂ ಅವಮಾನ ಮಾಡಿದ್ದಾರೆ ಎಂದು ನಾನು ಕೋಪಮಾಡಿಕೊಳ್ಳಬಹುದಲ್ಲಾ?
![siddaramaiah Siddaramaiah is called Tagaru](https://sp-ao.shortpixel.ai/client/to_webp,q_glossy,ret_img,w_720,h_405/https://vijayatimes.com/wp-content/uploads/2023/01/Untitled-design-12-1024x576.webp)
ಸಾವಿರಾರು ಮಂದಿ ಹತ್ಯೆಗೀಡಾದ ಗುಜರಾತ್(Siddaramaiah is called Tagaru) ಗಲಭೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ “ಕಾರಿಗೆ ಅಡ್ಡಬಂದು ನಾಯಿಮರಿ ಸತ್ತರೆ ಏನು ಮಾಡೋಣ?”
ಎಂದು ಆಗಿನ ಗುಜರಾತ್ ಮುಖ್ಯಮಂತ್ರಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಇದೂ ವಿವಾದವಾಗಿತ್ತಲ್ಲವೇ?
ನಮಗೆ ನಾಡಿನ ಹಿತ ಮುಖ್ಯ. 15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶಿಫಾರಸು ಮಾಡಿದ್ದ 5,495 ಕೋಟಿ ವಿಶೇಷ ಅನುದಾನವನ್ನು ನೀಡಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Nirmala sitaraman) ಅವರು ನಿರಾಕರಿಸಿದರು,
ಅವರೊಂದಿಗೆ ಮಾತನಾಡಿ ಈ ಅನುದಾನ ತರಲು ಬಸವರಾಜ ಬೊಮ್ಮಾಯಿ ಅವರಿಂದ ಸಾಧ್ಯವಾಗಿಲ್ಲ. ಇದರಿಂದ ನಷ್ಟವಾಗಿದ್ದು ರಾಜ್ಯಕ್ಕಲ್ಲವೇ?
ಇದನ್ನೂ ಓದಿ: https://vijayatimes.com/siddaramaiahs-puppy-statement/
ರಾಜ್ಯಕ್ಕೆ ಸಿಗಬೇಕಾದ ಅನುದಾನ ಸರಿಯಾದ ಪ್ರಮಾಣದಲ್ಲಿ ಸಿಕ್ಕಿಲ್ಲ, ಪೂರ್ಣಪ್ರಮಾಣದ ಜಿಎಸ್‌ಟಿ(GST) ಪರಿಹಾರ ಬಂದಿಲ್ಲ, ಬರ, ನೆರೆ ಪರಿಹಾರದ ಹಣ ಬಂದಿಲ್ಲ.
ರಾಜ್ಯದ ಸಿಎಂ ಸ್ಥಾನದಲ್ಲಿರೋರು ಇದನ್ನೆಲ್ಲ ಗಟ್ಟಿ ಧ್ವನಿಯಲ್ಲಿ ಕೇಳದೆ ಹೆದರಿ ಸುಮ್ಮನಿದ್ರೆ ನಾಡಿಗೆ ಅನ್ಯಾಯವಾಗಲ್ವ? ಎಂದು ಸಿದ್ದರಾಮಯ್ಯ ಅವರು ಸಿಎಂ ಬೊಮ್ಮಾಯಿ ಅವರಿಗೆ ಪ್ರಶ್ನಿಸಿದ್ದಾರೆ.
ಬೊಮ್ಮಾಯಿ ಅವರು ಪುಕ್ಕಲು ಸ್ವಭಾವದವರು, ಧೈರ್ಯ ಇಲ್ಲದವರು ಎನ್ನುವ ಅರ್ಥದಲ್ಲಿ ಹಳ್ಳಿ ಭಾಷೆಯಲ್ಲಿ ನಾಯಿ ಮರಿ ಎಂದಿದ್ದೇ ಹೊರತು ಸಿಎಂ ಅವರನ್ನು ವ್ಯಕ್ತಿಗತವಾಗಿ ನಿಂದಿಸುವ ದುರುದ್ದೇಶ ಖಂಡಿತಾ ಇರಲಿಲ್ಲ.
ಪ್ರಾಣಿ-ಪಕ್ಷಿ-ಹೂ-ಹಣ್ಣುಗಳನ್ನು ಅವುಗಳ ಸ್ವಭಾವಗಳ ಸಾಮ್ಯತೆಗೆ ಅನುಗುಣವಾಗಿ ಮನುಷ್ಯರಿಗೆ ಹೋಲಿಸುವುದು ಜನಪದ ಸಂಸ್ಕೃತಿ. ಯಾವ ಪ್ರಾಣಿ-ಪಕ್ಷಿಯೂ ಕೀಳೂ ಅಲ್ಲ, ಮೇಲೂ ಅಲ್ಲ!
ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅರ್ಥವಾಗಲಿ ಎಂದು ಆ ರೀತಿ ಹೇಳಿದ್ದೇ ವಿನಃ ಉದ್ದೇಶಪೂರ್ವಕವಾಗಿಯೂ ಅಲ್ಲ! ಅಪಹಾಸ್ಯ ಮಾಡಲೆಂದೂ ಅಲ್ಲ. ನಾನು ಹೇಳಿದ್ದಕ್ಕೆ ಇವರು ಹೀಗಾದ್ರೆ,
ನನ್ನನ್ನು ಹೌದು ಹುಲಿಯಾ, ಟಗರು ಎಂದೆಲ್ಲಾ ಕರೆಯುತ್ತಾರೆ. ನಾನು ಅದಕ್ಕೆಲ್ಲಾ ಬೇಸರ ಮಾಡಿಕೊಳ್ಳುತ್ತೇನಾ?
ಅಥವಾ ಯಾಕೆ ಎಂದು ಪ್ರಶ್ನಿಸಿದ್ದೇನಾ? ಇಲ್ಲವೇ? ಬಿಜೆಪಿ ಅವರೇ ತಮ್ಮ ನಾಯಕರನ್ನು ಒಂದೊಂದು ರೀತಿಯಲ್ಲಿ, ತಮಗೆ ಹೇಗೆ ಬೇಕೋ ಹಾಗೆ ಕರೆಯುತ್ತಾರೆ, ಅದನ್ನು ನಾವು ಯಾರಾದರೂ ಪ್ರಶ್ನಿಸಿದ್ದೀವಾ? ಇಲ್ಲ!