FIR fate for BJP leaders, ED officials who went to court against CM: Now FIR in Karnataka
Bengaluru: ರಾಜ್ಯದ ರಾಜಕೀಯದಲ್ಲೀಗ ಚದುರಂಗದ ಆಟ ನಡೆಯುತ್ತಿದೆ. ಅದಕ್ಕೆ ಸಾಕ್ಷಿಯೇ ಒಬ್ಬರ ಮೇಲೊಬ್ಬರ ಮೇಲೆ ಬೀಳುತ್ತಿರುವ ಎಫ್ಐಆರ್ ಪ್ರಕರಣಗಳು. ಯಾವಾಗ, ಸಿಎಂ ವಿರುದ್ದ ಲೋಕಾಯುಕ್ತ ಪೊಲೀಸರು FIR ದಾಖಲಿಸಿದರೋ, ಈ ಪರ್ವ ದಿನದಿಂದ ದಿನಕ್ಕೆ ವೇಗ ಪಡೆಯುತ್ತಿದೆ. ಈಗ, ಖಾಸಗಿ ದೂರುದಾರರ ಮೇಲೂ ಎರಡು ದಿನಗಳ ಹಿಂದೆ ಎಫ್ಐಆರ್ ದಾಖಲಾಗಿದೆ.
ಇನ್ನು ಮುಡಾ ಪ್ರಾಸಿಕ್ಯೂಷನ್ ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕರ್ನಾಟಕ ಹೈಕೋರ್ಟ್ ನಲ್ಲಿ ಹಿನ್ನಡೆಯಾಗಿತ್ತು. ಇದರ ಬೆನ್ನಲ್ಲೇ, ಜನಪ್ರತಿಧಿಗಳ ವಿಶೇಷ ಕೋರ್ಟ್ ನಲ್ಲೂ ಹಿನ್ನಡೆಯಾಗಿ, FIR ದಾಖಲಿಸುವಂತೆ ಕೋರ್ಟ್ ಆದೇಶ ನೀಡಿತ್ತು.
ಕೆಲವು ದಿನಗಳ ಹಿಂದೆ, ಯಡಿಯೂರಪ್ಪ ವಿರುದ್ದದ 2010ರ ಅಂದರೆ 14ವರ್ಷದ ಹಿಂದಿನ ಗಂಗೇನಹಳ್ಳಿ ಡಿನೋಟಿಫಿಕೇಶನ್ ಕೇಸ್ ಓಪನ್ ಆಗಿತ್ತು. ಸುಮಾರು ಎರಡೂವರೆ ತಾಸು ಲೋಕಾಯುಕ್ತ ಪೊಲೀಸರ ವಿಚಾರಣೆಯನ್ನು ಬಿಎಸ್ವೈ ಎದುರಿಸಿದ್ದರು. ಇನ್ನು ಈ ಎಲ್ಲಾ ಬೆಳವಣಿಗೆಗಳ ನಡುವೆ, ಇಲೆಕ್ಟ್ರಾಲ್ ಬಾಂಡ್ (electoral bonds scheme), ವಿಚಾರದಲ್ಲಿ ನಾಲ್ಕು ಜನರ ಮೇಲೆ FIR ದಾಖಲಿಸುವಂತೆ ವಿಶೇಷ ನ್ಯಾಯಾಲಯ ಸೂಚಿಸಿದೆ.
ಈ ಹಿನ್ನಲೆಯಲ್ಲಿ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಬಿಜೆಪಿ ಕರ್ನಾಟಕ ಘಟಕದ ಕೆಲವು ಪದಾಧಿಕಾರಿಗಳ ವಿರುದ್ದ ಬೆಂಗಳೂರು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಒಟ್ಟಿನಲ್ಲಿ ಕರ್ನಾಟಕದಲ್ಲಿ ಇದೀಗ FIR ಪರ್ವ ಆರಂಭವಾಗಿದೆ.