President’s entry in the matter of prosecution against CM Siddaramaiah!
Bengaluru: ದಿನದಿಂದ ದಿನಕ್ಕೆ ಹೊಸ ತಿರುವನ್ನು ಪಡೆಯುತ್ತಿರುವ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದರ ವಿರುದ್ಧ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು (Ramesh Babu) ನೀಡಿರುವ ದೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರತಿಕ್ರಿಯಿಸಿದ್ದಾರೆ. ಅಲ್ಲಿಗೆ ಸಿಎಂ ವಿರುದ್ಧದ ಪ್ರಾಸಿಕ್ಯೂಷನ್ ಪ್ರಕರಣದಲ್ಲಿ ರಾಷ್ಟ್ರಪತಿ ಕೂಡ ಎಂಟ್ರಿಯಾದಂತಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಕಾರ್ಯದರ್ಶಿ ರಾಜೇಶ್ ವರ್ಮ ಅವರಿಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ಗೆ ಪತ್ರ ಬರೆದಿದ್ದು, ರಮೇಶ್ ಬಾಬು ನೀಡಿದ ದೂರಿನ ಬಗ್ಗೆ ಸೂಕ್ತ ಗಮನಹರಿಸುವಂತೆ ಸೂಚನೆ ನೀಡಿದ್ದಾರೆ. ಈ ವಿಚಾರದ ಬಗ್ಗೆ ದೂರುದಾರರಿಗೆ ನೇರವಾಗಿ ಮಾಹಿತಿ ನೀಡಲು ಸೂಚನೆ ನೀಡಿದ್ದಾರೆ. ಇದರೊಂದಿಗೆ ಪ್ರಾಸಿಕ್ಯೂಷನ್ ವಿಚಾರ ರಾಷ್ಟ್ರಪತಿ ಭವನದ ಅಂಗಳಕ್ಕೂ ತಲುಪಿದೆ. ಹಾಗಾಗಿ ಮೂಡಾ ಹಗರಣಕ್ಕೆ ಸಂಬಂಧಪಟ್ಟಂತೆ ಹೊಸ ಬೆಳವಣಿಗೆ ಉಂಟಾಗಿದೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ (Prosecution)ಗೆ ಅನುಮತಿ ನೀಡಿರುವುದನ್ನು ಹಿಂತೆಗೆದುಕೊಳ್ಳುವಂತೆ ನಿರ್ದೇಶಿಸಲು ತಕ್ಷಣ ಮಧ್ಯಸ್ಥಿಕೆ ವಹಿಸಬೇಕು ಎಂದು ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ರಮೇಶ್ ಬಾಬು ವಿನಂತಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಶಾಲಿನಿ ರಜನೀಶ್ಗೆ (Shalini Rajneesh) ಪತ್ರ ಬರೆದಿರುವ ರಾಷ್ಟ್ರಪತಿಗಳ ಕಾರ್ಯದರ್ಶಿ, ದಯವಿಟ್ಟು ಮೇಲೆ ತಿಳಿಸಿದ ವಿಷಯದ ಕುರಿತು ಭಾರತದ ರಾಷ್ಟ್ರಪತಿಗಳಿಗೆ ಸ್ವ-ವಿವರಣೆಯ ಮನವಿಯನ್ನು ಲಗತ್ತಿಸಿ. ಅರ್ಜಿಯ ಮೇಲೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿಯನ್ನು ನೇರವಾಗಿ ಅರ್ಜಿದಾರರಿಗೆ ನೀಡಬೇಕು ಎಂದು ಉಲ್ಲೇಖಿಸಲಾಗಿದೆ.
Siddaramaiah Muda Scam in Kannada
Bengaluru: President Draupadi Murmu has responded to KPCC media wing president Ramesh Babu’s complaint against Governor Thawar Chand Gehlot’s permission for prosecution against CM Siddaramaiah in the Muda scam which is taking a new turn day by day. It seems that even the President has entered in the prosecution case against the CM.
President Draupadi Murmu has written a letter to Secretary Rajesh Verma to Shalini Rajneesh, Chief Secretary, Government of Karnataka, instructing them to pay due attention to the complaint filed by Ramesh Babu. He has instructed to inform the complainant directly about this matter. Along with this, the matter of prosecution has also reached the courtyard of Rashtrapati Bhavan. So there is a new development related to Muda scam.
In a letter written to the President, Ramesh Babu had requested that he intervene immediately to direct the withdrawal of permission for prosecution against CM Siddaramaiah. Responding to this letter to Shalini Rajneesh, Secretary to the President, please enclose a request for self-explanation to the President of India on the above mentioned matter. It is mentioned that the information about the action taken on the application should be given directly to the applicant.