2014ರಲ್ಲಿ 53 ಲಕ್ಷ ಕೋಟಿ ಇದ್ದ ಸಾಲ (siddaramaiah questions modi about debt) ಈಗ 218 ಲಕ್ಷ ಕೋಟಿಗೂ ಹೆಚ್ಚು ಎಂದ ಸಿಎಂ
ಕರ್ನಾಟಕಕ್ಕೆ ತೆರಿಗೆ ಅನ್ಯಾಯ, ನ್ಯಾಯಯುತ ಪಾಲು ಕೊಡಿ ಎಂದು ಒತ್ತಾಯ
ಭದ್ರಾ ಯೋಜನೆ ಹಣ ಕೊಡಲಿಲ್ಲ, ವಿಶೇಷ ಅನುದಾನ ನೀಡಬೇಕು ಎಂದು ಆಗ್ರಹ
Bengaluru : ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರ (siddaramaiah questions modi about debt) ಸರ್ಕಾರವು ಸುಮಾರು 165 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಮಾಹಿತಿ ನೀಡಿದರು.
ರಾಜ್ಯದ ಸಾಲ ಹಾಗೂ ಕೇಂದ್ರದ ಸಾಲದ ವಿಚಾರವಾಗಿ ಸದನದಲ್ಲಿ ಚರ್ಚೆ ನಡೆಯುವ ವೇಳೆ ಸಿಎಂ ಈ ವಿವರಗಳನ್ನು ನೀಡಿದರು. ನಾವು ಕೂಡ ಸಾಲ ಮಾಡಿದ್ದೇವೆ,
ಅದನ್ನು ನಾವು ಮರೆಮಾಚುವುದಿಲ್ಲ. ಆದರೆ ರಾಜ್ಯ ಹಾಗೂ ಕೇಂದ್ರದ ಸಾಲದ ಅಂಕಿ-ಅಂಶಗಳನ್ನು ಜನರು ತಿಳಿದುಕೊಳ್ಳಬೇಕು ಎಂದು ಸಿಎಂ ಹೇಳಿದರು.

ವಿಧಾನಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ (Siddaramaiah) , 2014ರಲ್ಲಿ ಕೇಂದ್ರ ಸರ್ಕಾರದ ಒಟ್ಟು ಸಾಲವು ಸುಮಾರು 53.11 ಲಕ್ಷ ಕೋಟಿ ರೂಪಾಯಿ ಇತ್ತು. ಈಗ 2026-27ರ ವೇಳೆಗೆ ಅದು 218 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಆಗಿದೆ.
ಅಂದರೆ ಮೋದಿ ಪ್ರಧಾನಿ ಆದ ಬಳಿಕ ಸುಮಾರು 165 ಲಕ್ಷ ಕೋಟಿ ಸಾಲ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಇದೇ ವೇಳೆ ರಾಜ್ಯ ಸರ್ಕಾರ ಕೂಡ ಸಾಲ ಮಾಡಿರುವುದನ್ನು ಒಪ್ಪಿಕೊಂಡ ಅವರು, ಕರ್ನಾಟಕ ಸರ್ಕಾರ (siddaramaiah questions modi about debt) ಇದುವರೆಗೆ 8,24,369 ಕೋಟಿ ರೂಪಾಯಿ ಸಾಲ ಮಾಡಿದೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಮತ್ತು ರಾಜ್ಯದ ಸಾಲದ ಹೋಲಿಕೆಯನ್ನು ಮಾಡುತ್ತಾ ಮಾತನಾಡಿದ ಸಿಎಂ, ಈ ವರ್ಷ ಕೇಂದ್ರ ಸರ್ಕಾರ ಸುಮಾರು 16.96 ಲಕ್ಷ ಕೋಟಿ ರೂಪಾಯಿ ಸಾಲ ಮಾಡುತ್ತಿದ್ದರೆ, ಕರ್ನಾಟಕ ರಾಜ್ಯ ಸರ್ಕಾರ 1.32 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದೆ.
ಆದ್ದರಿಂದ ಸಾಲದ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಮಾತ್ರ ಟೀಕಿಸುವುದು ಸರಿಯಲ್ಲ ಎಂದು ಅವರು ವಿಪಕ್ಷ ಸದಸ್ಯರಿಗೆ ತಿರುಗೇಟು ನೀಡಿದರು.
ಈ ಎಲ್ಲಾ ಅಂಕಿ-ಅಂಶಗಳನ್ನು ಜನರು ತಿಳಿದುಕೊಳ್ಳಬೇಕು, ಸತ್ಯವನ್ನು ಮುಚ್ಚಿಡಬಾರದು ಎಂದು ಹೇಳಿದರು.
ಇದೇ ವೇಳೆ ತೆರಿಗೆ ಹಂಚಿಕೆ ವಿಷಯದಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ರಾಜ್ಯಕ್ಕೆ ನ್ಯಾಯಯುತವಾದ ತೆರಿಗೆ ಪಾಲು ಸಿಗುತ್ತಿಲ್ಲ.
ಈ ಬಗ್ಗೆ ಅಧಿವೇಶನ ಮುಗಿದ ಬಳಿಕ ಕೇಂದ್ರ ಸರ್ಕಾರವನ್ನು ಭೇಟಿ ಮಾಡಲು ನಿಯೋಗವನ್ನು ಕರೆದೊಯ್ಯೋಣ ಎಂದು ಅವರು ಸಲಹೆ ನೀಡಿದರು.
ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು, ಕರ್ನಾಟಕಕ್ಕೆ ದೊರಕಬೇಕಾದ ಹಣವನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 5,300 ಕೋಟಿ ರೂಪಾಯಿ ನೀಡುವುದಾಗಿ ಭರವಸೆ ನೀಡಿತ್ತು.
ಆದರೆ ನಾಲ್ಕು ಬಜೆಟ್‌ಗಳು ಬಂದರೂ ಒಂದು ರೂಪಾಯಿಯೂ ಬಿಡುಗಡೆಯಾಗಿಲ್ಲ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನು ರಾಜ್ಯದ ವಿರುದ್ಧ ನಡೆದ ಅನ್ಯಾಯವೆಂದು ಅವರು ಹೇಳಿದರು. ಜೊತೆಗೆ ಕರ್ನಾಟಕಕ್ಕೆ 11,495 ಕೋಟಿ ವಿಶೇಷ ಅನುದಾನ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯಕ್ಕೆ ನ್ಯಾಯಯುತ ಪಾಲು ಕೇಳಿದರೆ ಟೀಕೆ ಮಾಡುತ್ತಾರೆ, ಆದರೆ ನಾವು ರಾಜ್ಯದ ಹಿತಕ್ಕಾಗಿ ಈ ಹೋರಾಟ ಮುಂದುವರಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನು ಓದಿ : https://vijayatimes.com/sudden-increase-in-gold-price/