ರಾಜ್ಯದಲ್ಲಿ ಈಗ “ಕ್ರಿಮಿನಲ್ ಕ್ಯಾಬಿನೆಟ್” (Criminal Cabinet) ಇದೆ ಎಂದು ಬಿಜೆಪಿ ಸಂಸದ ಬಸವರಾಜ್ ಬೊಮ್ಮಾಯಿ (Basavaraj Bommai) ಆರೋಪಿಸಿದ್ದಾರೆ.ಹನಿಟ್ರ್ಯಾಪ್ ಪ್ರಕರಣ (Honeytrap case) ದೇಶದಾದ್ಯಂತ ಕರ್ನಾಟಕ ಪ್ರತಿಷ್ಠೆಗೆ ತೀವ್ರ ಧಕ್ಕೆಯಾಗಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇದರ ನೈತಿಕ ಹೊಣೆ ಹೊತ್ತು (Siddaramaiah should resign) ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ (Congress Govt) ಅಧಿಕಾರದ ದುರಾಸೆಯಿಂದ ರಾಜ್ಯವನ್ನು ನೈತಿಕ ಅವನತಿಗೆ ಕೊಂಡೊಯ್ಯುತ್ತಿದೆ. ಕೇವಲ ಎರಡು ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಸುಮಾರು ಹತ್ತು ಹಗರಣಗಳು ಹೊರಬಿದ್ದಿವೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಹಗರಣಗಳ ಸರಮಾಲೆಯೇ ಕಂಡುಬರುತ್ತಿದೆ.ವಿಧಾನಸೌದವು ಇದಕ್ಕೆ ಸಾಕ್ಷಿಯಾಗಿದೆ. ಇಲ್ಲಿಯವರೆಗ ರಾಜ್ಯವು ಆರ್ಥಿಕ ಬಿಕ್ಕಟ್ಟಿನಿಂದ (Financial crisis) ಹೋರಾಡುತ್ತಿತ್ತು.,ಆದರೆ ಇವಾಗ ಹನಿ ಬಿಕ್ಕಟ್ಟು ಪ್ರಾರಂಭವಾಗಿದೆ.ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ.ಹನಿಟ್ರ್ಯಾಪ್ ಮಾಡುವ ಪ್ರಯತ್ನ ನಡೆದಿದೆ ಎಂದು ವಿಧಾನಸಭೆಯಲ್ಲಿ ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ,ಈ ಬಗ್ಗೆ ಮುಖ್ಯಮಂತ್ರಿ ಮೌನ ವಹಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಅಮೆಜಾನ್ , ಫ್ಲಿಪ್ಕಾರ್ಟ್ ಗೋದಾಮುಗಳ ಮೇಲೆ ದಾಳಿ: 3, 600ಕ್ಕೂ ಹೆಚ್ಚು ನಕಲಿ ವಸ್ತುಗಳ ವಶ
ಸಚಿವ ಸಂಪುಟದಲ್ಲೇ ಇಂತಹ ಘಟನೆಗಳು ನಡೆದಾಗ ಈ ಸಚಿವ ಸಂಪುಟವನ್ನು ಏನೆಂದು ಕರೆಯಬೇಕು? ಎಂದು ಪ್ರಶ್ನಿಸಿದ ಅವರು, ಈ ಸರ್ಕಾರ ಎಲ್ಲಾ ನೈತಿಕತೆ ಕಳೆದುಕೊಂಡಿದ್ದು, ಕ್ರಿಮಿನಲ್ ಕ್ಯಾಬಿನೆಟ್ (Criminal Cabinet) ಗಿಂತ ಕಡಿಮೆಯಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಂತಹ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ಸಿದ್ದರಾಮಯ್ಯ (Siddaramaiah should resign) ಹೊಣೆ ಹೊತ್ತು ಸಿಎಂ ಸ್ಥಾನದಿಂದ ಕೆಳಗಿಳಿಯಬೇಕು.ಇಲ್ಲದಿದ್ದಲ್ಲಿ ಕರ್ನಾಟಕದ ಜನತೆ ಇಂತಹ ಆಡಳಿತವನ್ನು ಆಯ್ಕೆ ಮಾಡಿದ್ದಕ್ಕೆ ಪಶ್ಚಾತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಸಿದರು.