- ಮೋದಿ ಸರ್ಕಾರ ಕರ್ನಾಟಕದ ಹಿತ ಮರೆತಿದೆ ಎಂದು ಕಿಡಿ ಕಾರಿದ ಸಿಎಂ ಸಿದ್ಧರಾಮಯ್ಯ
- ನಾವು ದಾನ ಕೇಳುತ್ತಿಲ್ಲ — ಹಕ್ಕು ಕೇಳುತ್ತಿದ್ದೇವೆ
- ಕೇಂದ್ರ ಸರ್ಕಾರದಿಂದ ನಡೆಯುತ್ತಿರುವ ಅನ್ಯಾಯವನ್ನು ರಾಜ್ಯದ ಜನರು ತಡೆದಾಗ ಮಾತ್ರ ಕರ್ನಾಟಕಕ್ಕೆ ನ್ಯಾಯ ಸಿಗುತ್ತದೆ
Bengaluru: ಕರ್ನಾಟಕದ ಹಕ್ಕಿನ ಹಣವನ್ನು ಕಸಿದುಕೊಳ್ಳುವುದು ಕೇಂದ್ರ ಸರ್ಕಾರದ ಅಭ್ಯಾಸವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮಂಗಳವಾರ ಬೆಂಗಳೂರಿನಲ್ಲಿ ವೈಟ್ ಟಾಪಿಂಗ್ (White Topping) ರಸ್ತೆ ಕಾಮಗಾರಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಮಾಡಿದ್ದಾರೆ. (Siddaramaiah slams against modi administration)

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಡಳಿತ ಕ್ರಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು ಮೋದಿ (Modi) ಎಷ್ಟು ಒಳ್ಳೆಯವರಾಗಿ ಕಾಣುತ್ತಿದ್ದಾರೋ, ಅಷ್ಟೇ ಮಟ್ಟಿಗೆ ಅವರಿಗೆ ಕರ್ನಾಟಕದ ಬಗ್ಗೆ ದ್ವೇಷ ಇದೆ ಎಂದು ವ್ಯಂಗ್ಯವಾಡಿದ್ದಾರೆ.
15ನೇ ಹಣಕಾಸು ಆಯೋಗದ ಪ್ರಕಾರ ನಮ್ಮ ರಾಜ್ಯಕ್ಕೆ 11,495 ಕೋಟಿ ರೂಪಾಯಿ ತೆರಿಗೆ ಪಾಲು ಸಿಗಬೇಕಾಗಿತ್ತು.
ಆದರೆ ಒಂದು ರೂಪಾಯಿಯನ್ನೂ ಕೇಂದ್ರ ಸರ್ಕಾರ ನೀಡಿಲ್ಲ. (Siddaramaiah slams against modi administration)
ಪೆರಿಫೆರಲ್ ರಿಂಗ್ ರೋಡ್ ಯೋಜನೆಗೆ ₹3,000 ಕೋಟಿ, ಕೆರೆ ಅಭಿವೃದ್ಧಿಗೆ ₹3,000 ಕೋಟಿ, ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ನೀಡುತ್ತೇವೆ ಎಂದು ಕೇಂದ್ರ ಬಜೆಟ್‌ನಲ್ಲಿ (Budget) ಘೋಷಿಸಿದರು.
ಆದರೆ ಅದು ಕೇವಲ ಕಾಗದದ ಘೋಷಣೆ ಆಗಿ ಉಳಿಯಿತು ಎಂದು ಹೇಳಿದ್ದಾರೆ.
ಇನ್ನು ರಾಜ್ಯ ಸರ್ಕಾರಕ್ಕೆ ₹4,595 ಕೋಟಿ ಗ್ರಾಂಟ್ (Grant) ಕಡಿತ ಮಾಡಲಾಗಿದೆ.
ಅದರ ಪರಿಹಾರವಾಗಿ ವಿಶೇಷ ಅನುದಾನ ನೀಡುತ್ತೇವೆ ಎಂದು ಹೇಳಿದರೂ, ಅದನ್ನೂ ಕೊಡಲಿಲ್ಲ.
ಇಂತಹ ಅನ್ಯಾಯದ ವಿರುದ್ಧ ಕರ್ನಾಟಕದ ಜನರು ಧ್ವನಿ ಎತ್ತಬೇಕು ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಈ ಸಮಯದಲ್ಲಿ ಸಿದ್ಧರಾಮಯ್ಯ ಬಿಜೆಪಿ (BJP) ಸಂಸದರು ಹಾಗೂ ಸಚಿವರನ್ನೂ ಪ್ರಶ್ನಿಸುತ್ತಾ ಮೋದಿ ಮೋದಿ ಎಂದು ಕೂಗಿ ಮತ ಹಾಕುವ ಜನರಿಗೆ ನಾನು ಕೇಳುತ್ತೇನೆ, ನಮ್ಮ ರಾಜ್ಯದ ಬಿಜೆಪಿ ಸಂಸದರು ಅಥವಾ ಸಚಿವರು ಒಂದೇ ದಿನವಾದರೂ ಕರ್ನಾಟಕದ ಪರವಾಗಿ ಮಾತನಾಡಿದ್ದಾರಾ? ಇಲ್ಲಿನ ಸಂಸದ ಪಿ.ಸಿ. ಮೋಹನ್ ಕನಿಷ್ಠ ‘ಕರ್ನಾಟಕದ ಹಣ ಕರ್ನಾಟಕಕ್ಕೆ ಕೊಡಿ’ ಎಂದು ಕೇಳಿದ್ದಾರಾ? ಸುಮ್ಮನೆ ಮತ ಹಾಕಿ ಕೈಕಟ್ಟಿ ಕುಳಿತುಕೊಳ್ಳುವುದರಿಂದ ಪ್ರಯೋಜನವೇನು?” ಎಂದು ಅವರು ಕಟುವಾಗಿ ಪ್ರಶ್ನಿಸಿದ್ದಾರೆ.
ಅಲ್ಲದೆ ಸಭೆಯ ಮಧ್ಯೆ ಒಬ್ಬ ಪ್ರೇಕ್ಷಕ ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆ ಇಳಿಸುವಂತೆ ಕೇಳಿದಾಗ, ಸಿದ್ಧರಾಮಯ್ಯ ಕೂಡಲೇ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
“ಅದನ್ನೂ ಮೋದಿಯವರನ್ನೇ ಕೇಳಿ! ಪಾರ್ಲಿಮೆಂಟ್ ಚುನಾವಣೆಯಲ್ಲಿ ‘ಮೋದಿ ಮೋದಿ’ ಎಂದು ಕೂಗಲು ಮಾತ್ರ ಬರುತ್ತೀರಾ? ಬೆಲೆ ಇಳಿಸಲು ಕೇಳುವುದಿಲ್ಲವೇ?” ಎಂದು ಕಿಡಿ ಕಾರಿದ್ದಾರೆ.
ಮುಂದುವರೆದು ನಾವು ಯಾರ ಮುಂದೂ ಕೈ ಚಾಚುತ್ತಿಲ್ಲ. ನಾವು ಕೇಳುತ್ತಿರುವುದು ದಾನವಲ್ಲ, ನಮ್ಮ ಹಕ್ಕು.
ಕೇಂದ್ರ ಸರ್ಕಾರದಿಂದ ನಡೆಯುತ್ತಿರುವ ಅನ್ಯಾಯವನ್ನು ತಡೆಯುವುದು ಕರ್ನಾಟಕದ ಜನರ ಕರ್ತವ್ಯ,” ಎಂದು ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಯವರ ಈ ನುಡಿಗಳು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.
ಬಿಜೆಪಿ ಮುಖಂಡರು ಇದನ್ನು ಚುನಾವಣಾ ನಾಟಕವೆಂದು ಪರಿಗಣಿಸಿದರೆ, ಕಾಂಗ್ರೆಸ್ ನಾಯಕರಿಗೆ ಇದು ಜನರ ಮನದ ನುಡಿ ಯಂತೆ ಕಂಡಿದೆ.