ಯತ್ನಾಳ್ ಸ್ಪೋಟಕ ಹೇಳಿಕೆಯ ಬೆನ್ನಲ್ಲೇ `ಪೇಮೆಂಟ್ ಸಿಎಂ’ ಎಂಬ ಅಭಿಯಾನ ಆರಂಭಿಸಿದ ಸಿದ್ದರಾಮಯ್ಯ!

ಗುರುವಾರ ವಿಜಯಪುರ(Vijayapura) ಬಿಜೆಪಿ ಶಾಸಕ(BJP MLA) ಬಸವನಗೌಡ ಪಾಟೀಲ್ ಯತ್ನಾಳ್(Basavanagowda Patil Yathnal) ಕೊಟ್ಟ ಸ್ಪೋಟಕ ಹೇಳಿಕೆಗೆ ರಾಜ್ಯ ರಾಜಕಾರಣದಲ್ಲಿ ಕೋಲಾಹಲವೇ ಸೃಷ್ಟಿಯಾಗಿದೆ.

ಹೌದು, ಗುರುವಾರ ರಾಮದುರ್ಗ ಪಟ್ಟಣದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ ಯತ್ನಾಳ್, ದೆಹಲಿಯಿಂದ ನಮ್ಮ ರಾಜ್ಯಕ್ಕೆ ಬಂದ ಕೆಲ ವ್ಯಕ್ತಿಗಳು ನಾವು ನಿಮ್ಮನ್ನು ಮುಖ್ಯಮಂತ್ರಿ ಮಾಡ್ತೀವಿ, ಆದ್ರೆ ನೀವು 2500 ಕೋಟಿ ರೂ. ರೆಡಿ ಮಾಡಿ ಇಡಿ ಅಂತ ಹೇಳಿದ್ದರು. ನನಗೆ ದೆಹಲಿಗೆ ಹೋಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ(Sonia Gandhi), ಬಿಜೆಪಿ ರಾಷ್ಟ್ರಧ್ಯಕ್ಷ ಜೆಪಿ ನಡ್ಡಾ(JP Nadda) ಅವರನ್ನು ಭೇಟಿ ಮಾಡಿಸ್ತಿನಿ ಅಂತೆಲ್ಲಾ ಹೇಳಿದ್ರು, ನನ್ನ ಬಳಿ ಬಂದು ನಿಮ್ಮನ್ನು ಮುಖ್ಯಮಂತ್ರಿ ಮಾಡಿಸುವ ಜವಾಬ್ದಾರಿ ನಮ್ಮದು. ಆದ್ರೆ ನೀವು 2500 ಕೋಟಿ ರೆಡಿ ಮಾಡಿ ಎಂದು ಹೇಳಿದರು.

ದಯವಿಟ್ಟು ರಾಜಕಾರಣದಲ್ಲಿ ಯಾರೂ ಮೋಸ ಹೋಗಬೇಡಿ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದರು. ಇದಾದ ಬಳಿಕ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡವು. ಬಸವನಗೌಡ ಯತ್ನಾಳ್ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕರಿಂದ ಅನುಮಾನಸ್ಪದ ಪ್ರಶ್ನೆಗಳು ಉದ್ಬವಗೊಂಡಿತು. ಈ ಸಾಲಿನಲ್ಲಿ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ಬಿಜೆಪಿ ಪಕ್ಷದ ವಿರುದ್ಧ ಸಿಡಿದೆದಿದ್ದು, ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ಹೇಳಿಕೆಯಲ್ಲೇ ತಿಳಿಯುತ್ತಿದೆ ಇದು ಪೇಮೆಂಟ್ ಸಿಎಂ ಸೀಟ್ ಎಂಬುದು.

ಯತ್ನಾಳ್ ಈ ಹಿಂದೆಯೂ ಇಂಥ ಅನೇಕ ಆರೋಪಗಳನ್ನು ಬಹಿರಂಗಪಡಿಸಿದ್ದಾರೆ. ಆದ್ರೆ, ಈ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ! ಮುಖ್ಯಮಂತ್ರಿ ಸೇರಿದಂತೆ ಮಂತ್ರಿಗಳ ಭ್ರಷ್ಟಚಾರದ ಬಗ್ಗೆ ಧ್ವನಿ ಎತ್ತಿದ್ದಾರೆ. ಸದ್ಯ ಈಗ ಸಿಎಂ ಸೀಟ್‍ಗೆ 2500 ಕೋಟಿ ರೂ. ಬೇಡಿಕೆ ಬಗ್ಗೆ ಹೇಳಿಕೆ ನೀಡಿದ್ದಾರೆ. ಯಾಕೆ ಹೈಕಮಾಂಡ್ ಈ ಬಗ್ಗೆ ಮೌನ ತಾಳಿದೆ? ಈ ಮೌನ ಇದಕ್ಕೆಲ್ಲಾ ಪರೋಕ್ಷ ಒಪ್ಪಿಗೆ ಸೂಚನೆಯಾ? ಎಂದು ಪ್ರಶ್ನಿಸಿದ್ದಾರೆ.

Latest News

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.