- ಕೇಂದ್ರದ ವಿರುದ್ಧ ಸಿಎಂ ವಾಗ್ದಾಳಿ: ರಾಜ್ಯದ (siddaramaiah slams central government) ಹಕ್ಕುಗಳಿಗೆ ಧಕ್ಕೆ ಆರೋಪ
- ರಾಜ್ಯದ ಜಿಎಸ್‌ಡಿಪಿ ಬೆಳವಣಿಗೆ ರಾಷ್ಟ್ರದ ಸರಾಸರಿಗಿಂತ ಹೆಚ್ಚಾಗಿದೆ
- ಜಿಎಸ್‌ಟಿ ನೀತಿಯಿಂದ ಕರ್ನಾಟಕಕ್ಕೆ ಹೊರೆ: ಬಜೆಟ್ ಬಳಿಕ ಸಿಎಂ ಟೀಕೆ
Bengaluru: 2026–27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಜನರಿಗೆ ನೀಡಿದ ಭರವಸೆಗಳನ್ನು (siddaramaiah slams central government) ಈಡೇರಿಸುವುದರ ಜೊತೆಗೆ ವಿತ್ತೀಯ ಶಿಸ್ತು ಕೂಡ ಕಟ್ಟುನಿಟ್ಟಾಗಿ ಪಾಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ತಮ್ಮ 17ನೇ ಬಜೆಟ್ (Budget) ಮಂಡಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ಹಾಗೂ ಜನಕಲ್ಯಾಣವನ್ನು ಸಮನಾಗಿ ಗಮನದಲ್ಲಿಟ್ಟುಕೊಂಡು ಈ ಬಜೆಟ್ ರೂಪಿಸಲಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದಿಂದ ಸಮರ್ಪಕ ಸಹಕಾರ ಸಿಗದಿದ್ದರೂ ಕೂಡ ರಾಜ್ಯದ ಆರ್ಥಿಕ ಶಿಸ್ತನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಜಿಎಸ್‌ಟಿ ಸಂಗ್ರಹಣೆಯ ವಿಷಯದಲ್ಲಿ ಕರ್ನಾಟಕ ದೇಶದಲ್ಲೇ ಮಹಾರಾಷ್ಟ್ರದ (siddaramaiah slams central government) ನಂತರ ಎರಡನೇ ಸ್ಥಾನದಲ್ಲಿದೆ ಎಂದು ಸಿಎಂ ಹೇಳಿದರು.
ಆದರೆ ಕೇಂದ್ರ ಸರ್ಕಾರದ ಹೊಸ ತೆರಿಗೆ ನೀತಿಯಿಂದ ರಾಜ್ಯಕ್ಕೆ ಸುಮಾರು ₹10,000 ಕೋಟಿ ನಷ್ಟವಾಗಿದೆ. ಮುಂದಿನ ವರ್ಷ ಈ ನಷ್ಟ ₹15,000 ಕೋಟಿಯಷ್ಟು ಹೆಚ್ಚಾಗುವ
ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟರು. ಕೇಂದ್ರ ಸರ್ಕಾರ ರಾಜ್ಯದೊಂದಿಗೆ ಮಲತಾಯಿ ಧೋರಣೆ ತೋರಿಸುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದರು.
ಆದರೂ ಈ ಎಲ್ಲಾ ಅಡಚಣೆಗಳ ನಡುವೆಯೂ ರಾಜ್ಯ ಸರ್ಕಾರ ವಿತ್ತೀಯ ಶಿಸ್ತು ಉಲ್ಲಂಘನೆ ಮಾಡದೆ ಬಜೆಟ್ ರೂಪಿಸಿದೆ ಎಂದು ಸಿದ್ದರಾಮಯ್ಯ (Siddaramaiah) ಹೇಳಿದರು.
ರಾಜ್ಯದ ಆರ್ಥಿಕ ಬೆಳವಣಿಗೆಯೂ ಗಮನಾರ್ಹವಾಗಿದೆ ಎಂದು ಅವರು ತಿಳಿಸಿದರು. 2025–26ನೇ ಸಾಲಿನಲ್ಲಿ ಕರ್ನಾಟಕದ ಜಿಎಸ್‌ಡಿಪಿ ಬೆಳವಣಿಗೆ ದರ ಶೇ.8.1 ರಷ್ಟಿದ್ದು, ದೇಶದ
ಸರಾಸರಿ ಜಿಡಿಪಿ ಬೆಳವಣಿಗೆ ದರ ಶೇ.7.4 ರಷ್ಟಿದೆ. ಇದರಿಂದ ರಾಜ್ಯದ ಆರ್ಥಿಕ ಪ್ರಗತಿ ರಾಷ್ಟ್ರದ ಸರಾಸರಿಗಿಂತ ಉತ್ತಮವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದರು.
ಜನರಿಗೆ ನೀಡಿದ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದು, ಅವುಗಳಿಗೆ ₹52,000 ಕೋಟಿ ಮೀಸಲಿಟ್ಟಿದ್ದೇವೆ. ಈವರೆಗೆ ಒಟ್ಟು ₹1,21,591 ಕೋಟಿ ವೆಚ್ಚ ಮಾಡಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನದಲ್ಲಿ ಕಡಿತವಾಗಿರುವುದನ್ನೂ ಅವರು ಉದಾಹರಣೆಗಳೊಂದಿಗೆ ವಿವರಿಸಿದರು.
ಜಲಜೀವನ ಮಿಷನ್ ಯೋಜನೆಗೆ ಒಟ್ಟು ₹69,488 ಕೋಟಿ ವೆಚ್ಚವಾಗಬೇಕಿದ್ದು, ಅದರಲ್ಲಿನ ಕೇಂದ್ರದ ಪಾಲು ₹30,880 ಕೋಟಿ ಆಗಿದೆ.
ಆದರೆ ಇದುವರೆಗೆ ಕೇಂದ್ರದಿಂದ ಕೇವಲ ₹11,786 ಕೋಟಿ ಮಾತ್ರ ಬಂದಿದೆ ಎಂದು ಅವರು ಹೇಳಿದರು. ಉಳಿದ ಹಣವನ್ನು ರಾಜ್ಯ ಸರ್ಕಾರವೇ ಭರಿಸಬೇಕಾದ ಪರಿಸ್ಥಿತಿ ಉಂಟಾಗಿದೆ.
ಈ ಯೋಜನೆಗಾಗಿ ಈಗಾಗಲೇ ₹38,600 ಕೋಟಿ ವೆಚ್ಚ ಮಾಡಿದ್ದು, ಹೆಚ್ಚುವರಿಯಾಗಿ ₹15,500 ಕೋಟಿ ರಾಜ್ಯ ಸರ್ಕಾರವೇ ಹೊರೆ ಹೊತ್ತಿದೆ ಎಂದು ಅವರು ತಿಳಿಸಿದರು.
ರಾಜ್ಯದ ಅಭಿವೃದ್ಧಿಗೆ ಸರ್ಕಾರ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಸಿಎಂ ಹೇಳಿದರು. ರಾಜ್ಯದ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಈ ವರ್ಷವೇ 56,432 ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶವಿದೆ ಎಂದು ಅವರು ತಿಳಿಸಿದರು. ಜೊತೆಗೆ ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬವಾದ ಹಿನ್ನೆಲೆ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಐದು ವರ್ಷಗಳ ಸಡಿಲಿಕೆ ನೀಡಲಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗೆ ₹5,000 ಕೋಟಿ ಯೋಜನೆ ಜಾರಿಗೆ ತರುವ ಯೋಜನೆಯಿದ್ದು, ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.
ಇದಲ್ಲದೆ ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಅನುಷ್ಠಾನಕ್ಕೂ ಸರ್ಕಾರ ಕ್ರಮ ಕೈಗೊಂಡಿದೆ. ಯೋಜನೆಯ ಭಾಗವಾಗಿ ಮುಳುಗಡೆಯಾಗುವ ಸುಮಾರು ಒಂದು ಲಕ್ಷ ಎಕರೆ ಜಮೀನಿಗೆ ಪರಿಹಾರ ನೀಡಲಾಗುವುದು.
ಖುಷ್ಕಿ ಜಮೀನಿಗೆ ₹30 ಲಕ್ಷ ಮತ್ತು ನೀರಾವರಿ ಜಮೀನಿಗೆ ₹40 ಲಕ್ಷ ಪರಿಹಾರ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಪ್ರಕ್ರಿಯೆಯನ್ನು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ಸಿಎಂ ತಿಳಿಸಿದರು. ತುಂಗಭದ್ರಾ ಜಲಾಶಯದ ಎಲ್ಲಾ ಗೇಟುಗಳು ಹಾಳಾಗಿರುವುದರಿಂದ ಜೂನ್ ತಿಂಗಳೊಳಗೆ ಅವುಗಳನ್ನು ಬದಲಾಯಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಇದನ್ನು ಓದಿ : https://vijayatimes.com/illegal-migrants-handed-over-to-frro/