ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯನವರು(Siddaramaiah) ಕಳೆದ ಒಂದು ವಾರದಿಂದ ರಾಜಕೀಯ ವಲಯದಲ್ಲಿ ಒಂದಲ್ಲ ಒಂದು ಹೇಳಿಕೆ ನೀಡುವ ಮೂಲಕ ನಿರಂತರ ಸುದ್ದಿಯಲ್ಲಿದ್ದಾರೆ.
ಸದ್ಯ ಈಗ ಮತ್ತೊಂದು ಹೇಳಿಕೆ ನೀಡಿ ಜನರ ಗಮನವನ್ನು ತಮ್ಮತ್ತ ಸೆಳೆದಿದ್ದಾರೆ. ಹೌದು, ಮುಂಬರುವ 2023ರ ಚುನಾವಣೆಯಲ್ಲಿ ರಾಜ್ಯದ ಜನರ ಆರ್ಶಿವಾದದಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಬಡವರಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ. ರಾಮದುರ್ಗ(Ramdurga) ತಾಲೂಕಿನ ಅವರಾದಿ ಗ್ರಾಮದಲ್ಲಿ ಭಾನುವಾರ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(Krantiveera Sangoli Rayanna) ಅವರ ಪುತ್ಥಳಿ(Statue) ಉದ್ಘಾಟನೆ ಸಮಾರಂಭಕ್ಕೆ ಆಗಮಿಸಿ ಮಾತನಾಡಿದ ಅವರು,
ದೇಶದಲ್ಲಿ ಆಗುತ್ತಿರುವ ಬೆಲೆ ಏರಿಕೆಗಳನ್ನು ಖಂಡಿಸಿ, ಆಕ್ರೋಶ ಹೊರಹಾಕಿದರು. ರಾಜ್ಯದಲ್ಲೂ ಕೂಡ ಬೆಲೆ ಏರಿಕೆ ದುಪ್ಪಟ್ಟಾಗುತ್ತಿದೆ. ಒಂದೆಡೆ ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡುತ್ತಲೇ ಇದ್ದರೆ, ಮತ್ತೊಂದೆಡೆ ಅಕ್ರಮ ಚುಟುವಟಿಕೆಯಲ್ಲಿ ಕೋಟಿ ಕೋಟಿ ಲೂಟಿ ಹೊಡೆಯುತ್ತಿದೆ. ರಾಜ್ಯದ ಜನರು ಬದುಕಬೇಕೋ? ಸಾಯಬೇಕೋ? ಈ ರೀತಿ ಬೆಲೆ ಏರಿಕೆ ಮಾಡುವ ಸರ್ಕಾರಗಳು ಬೇಕಾ? ಇಂಥ ಸರ್ಕಾರ ನಿಜಕ್ಕೂ ಅವಶ್ಯಕತೇ ಇದ್ಯಾ? ಜನರ ವಿರುದ್ಧದ ಸರ್ಕಾರವನ್ನು ಬೇರು ಸಮೇತ ಕಿತ್ತೆಸೆಯಬೇಕು! ಆಗ ಮಾತ್ರ ನಮ್ಮ ದೇಶ, ನಾವು-ನೀವು ಎಲ್ಲರೂ ಉಳಿಯಲು ಸಾಧ್ಯ.
ಈ ಸರ್ಕಾರಕ್ಕೆ ಜನರ ಕೂಗು, ನೋವುಗಳು ಕಾಣಿಸಲ್ಲ, ಕೇಳಿಸುವುದಿಲ್ಲ. ಈ ಸರ್ಕಾರದ್ದು ಎಮ್ಮೆ ಚರ್ಮವಲ್ಲ, ಬಹುಶಃ ಘೇಂಡಮೃಗದ ಚರ್ಮವಿರಬೇಕು ಅನ್ಸುತ್ತೆ. ಹೀಗಾಗಿಯೇ ಯಾವ ಕೂಗು ಮುಟ್ಟೋದಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.