ಟಿಪ್ಪು ಸುಲ್ತಾನ್(Tippu Sulthan) ಅಪ್ಪಟ ದೇಶಭಕ್ತನಾಗಿದ್ದನು. ಅವನು ಮತಾಂಧನಾಗಿದ್ದರೆ, ಶ್ರೀರಂಗಪಟ್ಟಣ(Srirangapatna) ಸೇರಿದಂತೆ ಅವನ ರಾಜ್ಯದಲ್ಲಿದ್ದ ಹಿಂದೂ ದೇವಾಲಯಗಳು ಉಳಿಯಲು ಸಾಧ್ಯವಿತ್ತಾ? ಎಂದು ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ಪ್ರಶ್ನಿಸಿದರು.

ತುಮಕೂರು(Tumkuru) ನಗರದಲ್ಲಿ ನಡೆದ ಮಡಿವಾಳ-ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು, ನಮಗೆ ಮಹಾತ್ಮ ಗಾಂಧಿಜೀಯವರ(Mahathma Gandhi) ಹಿಂದೂವಾದ ಬೇಕು, ನಾಥೂರಾಮ್ ಗೋಡ್ಸೆಯ ಹಿಂದೂವಾದ ಬೇಡ. ನಾನು ಅಲ್ಪಸಂಖ್ಯಾತರ ಪರ ಮಾತನಾಡಿದ್ರೆ ನೀನೇನು ಮುಸ್ಲಿಂ ಜಾತಿಗೆ ಹುಟ್ಟಿದ್ದೀಯಾ? ಎಂದು ಸಂಘಪರಿವಾರದವರು ಕೇಳುತ್ತಾರೆ. ಧರ್ಮ-ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಕೆಲಸವನ್ನು ಸಂಘಪರಿವಾರದವರು ಮಾಡುತ್ತಿದ್ದಾರೆ ಎಂದರು.
ಇನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ಮಾತ್ರ ಹಿಂದೂವಲ್ಲ. ನಾನು ಕೂಡಾ ಹಿಂದೂ, ನನ್ನ ಅಪ್ಪ ಹಿಂದೂ, ನನ್ನ ತಾಯಿ ಹಿಂದೂ ನಾನು ಹಿಂದೂ ಸಮಾಜದಲ್ಲಿ ಹುಟ್ಟಿ ಬೆಳೆದಿದ್ದೇನೆ. ಇನ್ನು ಜಗತ್ತಿಗೆ ಬಿನ್ ಲಾಡನ್ ಹೇಳಿರುವ ಇಸ್ಲಾಂ ಧರ್ಮ ಬೇಡ. ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರು ಹೇಳಿರುವ ಇಸ್ಲಾಂ ಧರ್ಮ ಬೇಕಿದೆ ಎಂದರು.

ಇನ್ನು ಗೋಮಾಂಸ ಕುರಿತು ಪ್ರತಿಕ್ರಿಯಿಸಿದ ಅವರು, ಗೋಮಾಂಸವನ್ನು ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ತಿಂತಾರೆ. ಹಿಂದೆ ನನಗೆ ನೀವು ಗೋಮಾಂಸ ತಿಂತೀರಾ? ಎಂದು ಕೇಳಿದ್ದೀರಾ. ಅದಕ್ಕೆ ನಾನು ಆಹಾರ ನನ್ನ ಹಕ್ಕು. ಅದನ್ನು ಪ್ರಶ್ನೆ ಮಾಡಲು ನಿವ್ಯಾರು ಎಂದು ಕೇಳಿದ್ದೆ. ನಾನು ಯಾವ ಆಹಾರವನ್ನು ಸೇವಿಸಬೇಕು ಎಂಬುದನ್ನು ನಾನೇ ನಿರ್ಧರಿಸುತ್ತೇನೆ ಎಂದರು.
ಇನ್ನು ತುಮಕೂರು ಜಿಲ್ಲೆಯ ಅನೇಕ ಕಡೆ ಆರ್‍ಎಸ್‍ಎಸ್‍ನವರು ಮತದಾರರ ಪಟ್ಟಿಯಿಂದ ಮುಸ್ಲಿಮರ ಹೆಸರುಗಳನ್ನು ತೆಗೆದು ಹಾಕುತ್ತಿದ್ದಾರೆ. ನನಗೆ ಇರುವ ಮಾಹಿತಿ ಪ್ರಕಾರ 1 ಲಕ್ಷದ 60 ಸಾವಿರ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲೇ ಸುಮಾರು 20 ಸಾವಿರ ಮುಸ್ಲಿಂ ಮತಗಳು ಕಾಣೆಯಾಗಿವೆ ಎಂದು ಆರೋಪಿಸಿದರು.