H.D Kote : ಈಗಾಗಲೇ ಆಡಳಿತ ನಡೆಸಿರುವ ಬಿಜೆಪಿ (BJP) ನಾಯಕರ ವಿರುದ್ಧ ಸಾಕಷ್ಟು ಆರೋಪಗಳಿವೆ. ಆದರೆ ಕೇಂದ್ರದ ತನಿಖಾ ಸಂಸ್ಥೆಗಳು (Investigative agencies) ಆ ಕುರಿತು ಕ್ರಮ ಕೈಗೊಂಡಿಲ್ಲ. ಈ ತನಿಖಾ ಸಂಸ್ಥೆಗಳು ಕೇಂದ್ರದ ಅಣತಿಯಂತೆ ಕೆಲಸ ಮಾಡುತ್ತಿವೆ. ನಾವು ಕಾನೂನಿನ (Law) ಮೂಲಕ ಎಲ್ಲವನ್ನೂ ಎದುರಿಸುತ್ತೇವೆ ಹಾಗಾಗಿಯೇ ನಮ್ಮನ್ನು ನಮ್ಮ ಒಳ್ಳೆಯತನವನ್ನು ಪರೀಕ್ಷೆ (Test) ಮಾಡಲಾಗುತ್ತಿದೆ. ಕೇಂದ್ರದ ಇಂಥ ಧೋರಣೆಗೆ ಜನ ಮನ್ನಣೆ ನೀಡಬಾರದು. ಬಡವರ ಕಾಂಗ್ರೆಸ್ ಸರ್ಕಾರಕ್ಕೆ ಜನರ ಬೆಂಬಲ ಬೇಕು ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ಹೇಳಿದ್ದಾರೆ.
ಮೈಸೂರು ಜಿಲ್ಲೆ (Mysore District) ಎಚ್.ಡಿ.ಕೋಟೆಯ (H.D Kote) ಕಾಠ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ (Chief Minister) ಮೇಲೆ ಸುಳ್ಳು ಆರೋಪ ಮಾಡಿ ಸಿಲುಕಿಸಬೇಕು ಅನ್ನುವ ಪ್ರಯತ್ನ ನಡೆಸುತ್ತಿದ್ದಾರೆ. ನಮಗೆ ತನಿಖೆ ಭಯ ಇಲ್ಲ. ಪ್ರಶ್ನೆ ಮಾಡುವವರು ಇಲ್ಲದಿದ್ದರೆ ಅವರು ಮಾಡಿದ್ದೇ ಕಾನೂನು ಎಂಬಂತೆ ಆಗುತ್ತದೆ. ಇದರಿಂದ ಪ್ರಜಾಪ್ರಭುತ್ವದ (Democracy) ಕೊಲೆ ಮಾಡಿದಂತಾಗುತ್ತಿದೆ, ಇದೇ ರೀತಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು (Central Govt) ಮುಂದುವರಿದರೆ ಪ್ರಜಾಪ್ರಭುತ್ವವನ್ನು ಕಾಣದ ಸ್ಥಿತಿ ಎದುರಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಈಗಾಗಲೇ ಅಧಿಕಾರದ (Officers) ಗದ್ದುಗೆ ಏರಿರುವ ಕೇಂದ್ರ ಸರ್ಕಾರ ((Central Govt) ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಇ.ಡಿ, ಸಿಬಿಐ, ಐಟಿ (ED, CBI, IT) ಎಲ್ಲವೂ ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಕೋರ್ಟ್ ಗಳು ಕೂಡ ಕೇಂದ್ರ ಸರ್ಕಾರದ ಮಾತನ್ನು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ . ಹಾಗೆ ನೋಡಲು ಹೋದರೆ ಬಿಜೆಪಿ ನಾಯಕರ (BJP leaders) ವಿರುದ್ಧ ಸಾಕಷ್ಟು ಆರೋಪಗಳಿವೆ. ಆದರೆ ಕೇಂದ್ರದ ತನಿಖಾ ಸಂಸ್ಥೆಗಳು ಆ ಕುರಿತು ಕ್ರಮ ಕೈಗೊಂಡಿಲ್ಲ. ಈ ತನಿಖಾ ಸಂಸ್ಥೆಗಳು ಕೇಂದ್ರದ ಅಣತಿಯಂತೆ ಕೆಲಸ ಮಾಡುತ್ತಿವೆ. ನಾವು ಕಾನೂನಿನ ಮೂಲಕ ಎಲ್ಲವನ್ನೂ ಎದುರಿಸುತ್ತೇವೆ. ಕೇಂದ್ರದ ಇಂಥ ಧೋರಣೆಗೆ ಜನ ಮನ್ನಣೆ ನೀಡಬಾರದು. ಬಡವರ ಕಾಂಗ್ರೆಸ್ ಸರ್ಕಾರಕ್ಕೆ (Congress Govt) ಜನರ ಬೆಂಬಲ ಬೇಕು ಎಂದು ವಿನಂತಿ ಮಾಡಿಕೊಂಡಿದ್ದಾರೆ.