Karnataka : ಯಾವ ಭಾಷೆಯ ಕಲಿಕೆಯನ್ನೂ ವಿರೋಧಿಸುವುದಿಲ್ಲ, ಯಾವ ಭಾಷೆಯ ಹೇರಿಕೆಯನ್ನೂ ಸಹಿಸುವುದಿಲ್ಲ. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಪೂಜೆ.

ಕೇಂದ್ರದ ಬಿಜೆಪಿ ಸರ್ಕಾರ(BJP Government) ಹಿಂದಿ ದಿವಸ್ ಆಚರಿಸಿ ಹಿಂದಿ ಭಾಷೆಯ (Hindi Language) ಹೆಸರಲ್ಲಿ ಆರ್.ಎಸ್.ಎಸ್(RSS) ಪ್ರಣೀತ ಹಿಂದುತ್ವ ಹೇರುವುದನ್ನು ನಾನು ಖಂಡಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಟ್ವೀಟ್ (Tweet) ಮಾಡಿದ್ದಾರೆ.
ಅದೇ ರೀತಿ ಹಿಂದಿ ದಿವಸ್ ಆಚರಣೆಗೆ ವಿರೋಧ ವ್ಯಕ್ತಪಡಿಸಿರುವ ಜೆಡಿಎಸ್ ನಾಯಕ (JDS Leader) ಎಚ್.ಡಿ.ಕುಮಾರಸ್ವಾಮಿ (HD Kumarswamy) ಅವರು ಈ ಕುರಿತು ಟ್ವೀಟ್ (Tweet) ಮಾಡಿ,
ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಪೂಜೆ. ಹಿಂದಿ ದಿವಸ ಆಚರಿಸಿ ಹಿಂದಿ ಭಾಷೆಯ ಹೆಸರಲ್ಲಿ ಆರ್.ಎಸ್.ಎಸ್ ಪ್ರಣೀತ ಹಿಂದುತ್ವ ಹೇರುವುದನ್ನು ನಾನು ಖಂಡಿಸುತ್ತೇನೆ.
ರಾಷ್ಟ್ರೀಯ ಪಕ್ಷಗಳು ಹಿಂದಿನಿಂದಲೂ ಹಿಂದಿ ಭಾಷೆಯನ್ನು ದೇಶದ ಹಿಂದಿಯೇತರ ರಾಜ್ಯಗಳ ಮೇಲೆ ಹೇರಿಕೆ ಮಾಡುತ್ತಾ ಬಂದಿದೆ, ಈ ನಿಲುವನ್ನು ಪ್ರಾದೇಶಿಕ ಪಕ್ಷವಾದ ಜಾತ್ಯತೀತ ಜನತಾದಳ ಬಲವಾಗಿ ವಿರೋಧಿಸುತ್ತದೆ,
ಬಲವಂತವಾಗಿ ಯಾವುದೇ ಒಂದು ಭಾಷೆಯನ್ನು ಹೇರಿಕೆ ಮಾಡುವುದು ಪ್ರಾದೇಶಿಕ ಅಸಮಾನತೆಯ ಸಂಕೇತ ಎಂದಿದ್ದಾರೆ.

ಹಿಂದಿ ದಿವಸ್ ಹಿನ್ನಲೆ : ಸಂವಿಧಾನದ (Constitution) ಆರ್ಟಿಕಲ್ 343ರ (Article 343) ಪ್ರಕಾರ ಕೇಂದ್ರ ಸರ್ಕಾರ (Central Government) ಆಡಳಿತ ಭಾಷೆಯನ್ನಾಗಿ ಹಿಂದಿಯನ್ನ ಅಳವಡಿಸಿಕೊಳ್ಳಲಾಯಿತು.
ಹಿಂದಿ ಭಾಷೆಯ ಬೆಳವಣಿಗೆಗೆ ಕೇಂದ್ರ ಸರ್ಕಾರ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲು ಸಂವಿಧಾನದ ವಿಧಿ 343ರ ಪ್ರಕಾರ ಅವಕಾಶವಿದೆ.
ಮೂಲ ದೇವನಾಗರಿ ಲಿಪಿಯಲ್ಲಿ ರಚಿತವಾಗಿರುವ ಹಿಂದಿ ಭಾಷೆ ಕೇಂದ್ರ ಸರ್ಕಾರದ ಆಡಳಿತ ಭಾಷೆಯಾಗಿದೆ.
ಇನ್ನು ಬೋಹರ್ ರಾಜೇಂದ್ರ ಸಿಂಹ ಅವರ 50ನೇ ಹುಟ್ಟುಹಬ್ಬವಾದ ಸೆಪ್ಟೆಂಬರ್ 14, 1949 ರಲ್ಲಿ ಜವಾಹರ್ಲಾಲ್ ನೆಹರೂ ನೇತೃತ್ವದ ಕಾಂಗ್ರೆಸ್ ಸರ್ಕಾರ (Congress Government) ಹಿಂದಿಯನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಯಾಗಿ ಘೋಷಿಸಿತು.
ಇದನ್ನೂ ಓದಿ : https://vijayatimes.com/bridge-collapse-video-goes-viral/