ಕನ್ನಡಿಗರೇ ನಿಮಗೆ ಯಾವುದು ಬೇಕು? 6 ಕೋಟಿ ಜನಗಳ ಸಿಎಂ/2500 ಕೋಟಿ ರೂ. ಸಿಎಂ? : ಸಿದ್ದರಾಮಯ್ಯ!

ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರು(Siddaramaiah) ವಿಜಯಪುರ(Vijayapura) ಬಿಜೆಪಿ ಶಾಸಕ(BJP MLA) ಬಸವನಗೌಡ ಯತ್ನಾಳ್(Basavanagowda patil yathnal) ಕೊಟ್ಟ ಬಹಿರಂಗ ಹೇಳಿಕೆಗೆ ತಮ್ಮ ವಾದವನ್ನು ಮಂಡಿಸುವ ಮೂಲಕ ಪರೋಕ್ಷವಾಗಿ ಯತ್ನಾಳ್ ಅವರಿಗೆ ಬೆಂಬಲ ಸೂಚಿಸಿ, ಬಿಜೆಪಿ(BJP) ಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಗುರುವಾರ ಬಸವನಗೌಡ ಯತ್ನಾಳ್ ನನಗೆ ದೊಡ್ಡ ಮಂದಿ ನಿಮ್ಮನ್ನು ಸಿಎಂ ಮಾಡ್ತೀವಿ 2500 ಕೋಟಿ ರೂ. ರೆಡಿ ಮಾಡಿ ಎಂದು ಹೇಳಿದ್ದನ್ನು ಬಹಿರಂಗಪಡಿಸಿದರು. ಈ ಹೇಳಿಕೆಯನ್ನು ಮುಂದಿಟ್ಟು ಮಾತನಾಡಿದ ಸಿದ್ದರಾಮಯ್ಯನವರು, ಕನ್ನಡಿರೇ ನೀವೇ ಹೇಳಿ ನಿಮಗೆ ಯಾವುದು ಬೇಕು? 6 ಕೋಟಿ ಜನಗಳ ಸಿಎಂ ಬೇಕಾ? ಅಥವಾ 2500 ಕೋಟಿ ರೂ. ಸಿಎಂ ಬೇಕಾ? ಎಂದು ಪ್ರಶ್ನಿಸಿದರು. ಜನರ ಆಯ್ಕೆಯಿಂದ ಗೆಲ್ಲುವಂತ ಸಿಎಂ ಸ್ಥಾನವೂ ಈಗ ಹಣದ ಹರಾಜಿನಿಂದ ಅಳಯಲಾಗುತ್ತಿದೆ. ಬಸವನಗೌಡ ಯತ್ನಾಳ್ ಹೇಳಿಕೆ ಹೇಳುತ್ತಿದೆ ಇದೊಂದು ಪೇಮೆಂಟ್ ಸೀಟ್ ಎಂಬುದನ್ನು.

ಈ ಬಗ್ಗೆ ತನಿಖೆಯಾಗಬೇಕು. ಈ ಹಿಂದಿನ ಬಿಜೆಪಿ ಮುಖ್ಯಮಂತ್ರಿಗಳ ಲೆಕ್ಕಾಚಾರವನ್ನು ಬಹಿರಂಗಪಡಿಸಬೇಕು. ನಾವು ಯತ್ನಾಳ್ ಕೊಟ್ಟಿರುವ ಹೇಳಿಕೆಯನ್ನು ಗಮನಹರಿಸಿದರೆ ಬಿಜೆಪಿಯ ಸಾಕಷ್ಟು ಅಕ್ರಮದ ಹಲವು ದಾಖಲಾತಿಗಳು ಹೊರಬರಲಿದೆ. ಈ ಕಾರಣ ಬಸವನಗೌಡ ಯತ್ನಾಳ್ ಅನ್ನು ತನಿಖೆಗೆ ಹಾಜರುಪಡಿಸಿ ಸತ್ಯ ಮಾಹಿತಿಯನ್ನು ಹೊರತೆಗೆಯಬೇಕು.

ರಾಜ್ಯದ ಮುಖ್ಯಮಂತ್ರಿಗಳ ಸ್ಥಾನ ಈಗ ಬಿಜೆಪಿಯವರಿಗೆ ಪೇಮೆಂಟ್ ಸೀಟ್ ಆಗೋಗಿದೆ, ಶೀಘ್ರವೇ ಬಸವನಗೌಡ ಯತ್ನಾಳ್ ಅನ್ನು ತನಿಖೆಗೆ ಒಳಪಡಿಸಿ ಸತ್ಯಾಂಶವನ್ನು ಹೊರತೆಗೆಯಬೇಕು ಎಂದು ಆಗ್ರಹಿಸಿದರು.

Latest News

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.